ಮಹಿಳೆಯರೇ ಬಿ ಅಲರ್ಟ್​; ಕೈ ತುಂಬಾ ಗೋರಂಟಿ ಹಾಕೋ ಮುನ್ನ ಇರಲಿ ಎಚ್ಚರ.. ಏಕೆ ಗೊತ್ತಾ?

author-image
Veena Gangani
Updated On
ಮಹಿಳೆಯರೇ ಬಿ ಅಲರ್ಟ್​; ಕೈ ತುಂಬಾ ಗೋರಂಟಿ ಹಾಕೋ ಮುನ್ನ ಇರಲಿ ಎಚ್ಚರ.. ಏಕೆ ಗೊತ್ತಾ?
Advertisment
  • ಮೆಹಂದಿಯಲ್ಲೂ ಅಪಾಯಕಾರಿ ಅಂಶ, ಸಾವಿರಾರು ಜನರಿಂದ ದೂರು
  • ಟ್ಯಾಟೂ, ಲಿಪ್ ಸ್ಟಿಕ್ ಬೆನ್ನಲ್ಲೇ ಈಗ ಮೆಹಂದಿಯಿಂದಲೂ ಅಪಾಯ
  • ಮೆಹಂದಿ ಗುಣಮಟ್ಟ ಪರೀಕ್ಷೆ ಮುಂದಾಗಿರುವ ಆರೋಗ್ಯ ಇಲಾಖೆ

ಮೆಹಂದಿ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಮದುವೆ, ನಿಶ್ಚಿತಾರ್ಥ, ನಾಮಕರಣ ಹೀಗೆ ಯಾವುದೇ ಶುಭ ಸಮಾರಂಭಗಳಲ್ಲಿ ಹೆಣ್ಮಕ್ಕಳು ಕೈಗಳಿಗೆ ಮೆಹಂದಿ ಹಚ್ಚುವುದು ವಾಡಿಕೆ. ಆದ್ರೆ. ಇದೀಗ ಜಗವ ಸೆಳೆಯ ಸೌಂದರ್ಯ ಪ್ರಿಯರಿಗೆ ಶಾಕಿಂಗ್​ ಸುದ್ದಿಯೊಂದು ಎದುರಾಗಿದೆ.

ಇದನ್ನೂ ಓದಿ: ಬಾಯಿಗೆ ಕಚ್ಚಿ ಪ್ರಾಣ ತೆಗೆದ ಪ್ರಳಯಾಂತಕ ಮೀನು.. ಯುವಕನ ದಾರುಣ ಅಂತ್ಯ; ಆಗಿದ್ದೇನು?

publive-image

ಹೌದು, ಮಹಿಳೆಯರ ನೆಚ್ಚಿನ ಮೆಹಂದಿಗೂ ಕಳಂಕ ಅಂಟಿದೆ. ಕೆಮಿಕಲ್.. ಕೆಮಿಕಲ್.. ಕೆಮಿಕಲ್.. ಯಾವ ವಸ್ತು ತೆಗೆದುಕೊಂಡ್ರೂ ಕೆಮಿಕಲ್. ಕೆಲ ವರ್ಷಗಳಿಂದ ಎಲ್ಲವೂ ಕೆಮಿಕಲ್ ಆಗಿಬಿಟ್ಟಿದೆ. ಈ ಮೊದಲು ಕಾಟನ್ ಕ್ಯಾಂಡಿಯಲ್ಲಿ ಕೆಮಿಕಲ್ ಪತ್ತೆಯಾಗಿ ಸದ್ಯ ಕಾಟನ್ ಕ್ಯಾಂಡಿ ಬ್ಯಾನ್ ಆಗಿದೆ.

ಗೋಬಿ ಮಂಚೂರಿಯಲ್ಲೂ ಅಪಾಯಕಾರಿ ರಾಸಾಯನಿಕ ಬಳಸಲಾಗ್ತಿದೆ. ಇದಷ್ಟೇ ಅಲ್ಲ.. ಕಲ್ಲಂಗಡಿ ಹಣ್ಣಿಗೂ ಇಂಜೆಕ್ಷನ್.. ಬಟಾಣಿಗೂ ಕಲರ್, ಲಿಪ್​ಸ್ಟಿಕ್​​ನಲ್ಲೂ ಕೆಮಿಕಲ್ ಬಳಸಲಾಗ್ತಿದೆ. ಟ್ಯಾಟೂ ಹಾಕಿಸಿಕೊಂಡ್ರೆ ಅದರಲ್ಲಿ ಬಳಸುವ ಬಣ್ಣ ಮಾರಕ. ಮದರಂಗಿ, ಅಲಕ್ತಕ, ಗೋರಂಟಿ ಎಂದೆಲ್ಲಾ ಕರೆಯುವ ಮೆಹಂದಿ ಹೆಂಗಳೆಯರನ್ನು ಶೃಂಗಾರ ಹೆಚ್ಚಿಸುವ ಮತ್ತೊಂದು ಕಲೆಯಾಗಿದೆ. ಮದುವೆ, ನಿಶ್ಚಿತಾರ್ಥ, ನಾಮಕರಣ ಹಾಗೂ ಶುಭ ಸಮಾರಂಭಗಳಲ್ಲಿ ಹೆಣ್ಮಕ್ಕಳ ನೆಚ್ಚಿನ ಮೆಹಂದಿಗೂ ಕಳಂಕ ಅಂಟಿದೆ.

publive-image

ಮೆಹಂದಿಯಲ್ಲೂ ಅಪಾಯಕಾರಿ ಅಂಶ ಇರುವ ಬಗ್ಗೆ ಈಗಾಗಲೇ ಸಾವಿರಾರು ದೂರುಗಳು ಸಲ್ಲಿಕೆಯಾಗಿವೆ. ಕಳಪೆ ಮೆಹಂದಿ ಬಳಕೆಯಿಂದ ಅಲರ್ಜಿ, ತುರಿಕೆ, ಚರ್ಮ ಕ್ಯಾನ್ಸರ್​​, ಅಜೀರ್ಣ, ಫುಡ್​ ಪಾಯಿಸನ್​ ಆಗುವ ಸಾಧ್ಯತೆ ಇದೆ. ಹೀಗಾಗಿ ಮೆಹಂದಿ ಗುಣಮಟ್ಟ ಪರೀಕ್ಷೆ ರಾಜ್ಯದ ಆರೋಗ್ಯ ಇಲಾಖೆ ಮುಂದಾಗಿದೆ. ಈ ಮೂಲಕ ಮೆಹಂದಿಪ್ರಿಯರಿಗೂ ಶಾಕ್​ ನೀಡಲು ಸಜ್ಜಾಗಿದೆ. ಕೇಂದ್ರದ ಅಧಿನಿಯಮಕ್ಕೆ ಒಳಪಡಿಸಲು ಆರೋಗ್ಯ ಇಲಾಖೆ ಪತ್ರ ಬರೆದಿದ್ದು ಈಗಾಗಲೇ ನಕಲಿ ಪ್ರಾಡೆಕ್ಟ್​ಗಳನ್ನ ಪರೀಕ್ಷೆಗೆ ಒಳಪಡಿಸಿದೆ. ನಮ್ಮ ಧರ್ಮದಲ್ಲಿ ನ್ಯಾಚುರಲ್ ಮಹಂದಿಯನ್ನು ಅನಾದಿಕಾಲದಿಂದಲೂ ಬಳಸುತ್ತಾ ಬಂದಿದ್ದೇವೆ, ಕೆಮಿಕಲ್ ಮೆಹಂದಿಯನ್ನು ಮೊದಲು ಬ್ಯಾನ್ ಮಾಡಬೇಕು ಅಂತ ನಾರಿಯರು ಆಗ್ರಹಿಸಿದ್ದಾರೆ. ಒಟ್ಟಾರೆ, ನಾವು ಸಮಸ್ಯೆಗಳ ಸುಳಿಯಲ್ಲಿ ಬದುಕ್ತಿದ್ದೀವಾ? ನಾವು ಬದುಕ್ತಿರೋದೇ ದೊಡ್ಡ ಸಮಸ್ಯೆನಾ ಅನ್ನೋದು ಗೊತ್ತಾಗ್ತಿಲ್ಲ. ಅನಾದಿ ಕಾಲದಿಂದಲೂ ಹೆಣ್ಣಿನ ಸೌಂದರ್ಯ ಹೆಚ್ಚಿಸುವ ಮೆಹಂದಿಯಲ್ಲಿ ಅಪಾಯಕಾರಿ ಅಂಶ ಬಳಕೆಯಾಗ್ತಿರೋದು ಮೆಹಂದಿ ಪ್ರಿಯರನ್ನು ಕಂಗಾಲಾಗಿಸಿರೋದಂತೂ ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment