/newsfirstlive-kannada/media/post_attachments/wp-content/uploads/2025/06/rakshak-bullet3.jpg)
ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರೋ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ವೀಕ್ಷಕರಿಗೆ ಸಖತ್ ಮನರಂಜನೆ ನೀಡುತ್ತಿದೆ. ಈ ವಾರ ಎಲ್ಲಾ ಬ್ಯಾಚುಲರ್ಸ್ಗಳಿಗೆ ಸ್ಪೆಷಲ್ ಅಂತಲೇ ಹೇಳಬಹುದು. ಏಕೆಂದರೆ ತಮ್ಮ ತಮ್ಮ ಮೆಂಟರ್ಗಳಿಗೆ ಬ್ಯಾಚುಲರ್ಸ್ಗಳು ಹೇಗೆ ಪ್ರಪೋಸ್ ಮಾಡಬೇಕಿತ್ತು.
ಇದನ್ನೂ ಓದಿ: ಗುಡ್ನ್ಯೂಸ್; KRS ಡ್ಯಾಂ ಐತಿಹಾಸಿಕ ದಾಖಲೆಗೆ ಕೇವಲ ಒಂದೇ 1 ಅಡಿ ಮಾತ್ರ ಬಾಕಿ
ಅದರಂತೆ ಎಲ್ಲಾ ಬ್ಯಾಚುಲರ್ಸ್ಗಳು ತಮ್ಮ ಮೆಂಟರ್ಗಳಿಗೆ ಪ್ರಪೋಸ್ ಮಾಡಿದ್ದಾರೆ. ಅದರಲ್ಲೂ ವಿಶೇಷ ಎಂದರೆ ವೇದಿಕೆ ಮೇಲೆ ಉಂಗುರ ತೊಡಿಸಿ, ರಮೋಲ ಕೆನ್ನೆಗೆ ಮುತ್ತಿಟ್ಟು ಬ್ಯೂಟಿಫುಲ್ ಆಗಿ ಪ್ರೇಮ ನಿವೇದನೆ ಮಾಡಿದ್ದಾನೆ ರಕ್ಷಕ್ ಬುಲೆಟ್.
ಹೌದು, ದಿನೇ ದಿನೇ ರಕ್ಷಕ್ ಬುಲೆಟ್ ಸಖತ್ ಆಗಿ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ. ಬಿಗ್ಬಾಸ್ ಸೀಸನ್ 10 ಮೂಲಕ ಫೇಮಸ್ ಆಗಿದ್ದ ರಕ್ಷಕ್ ಬುಲೆಟ್ ಇದೀಗ ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ಮಿಂಚುತ್ತಿದ್ದಾರೆ. ಅದರಲ್ಲೂ ರಕ್ಷಕ್ ಬುಲೆಟ್ಗೆ ರಮೋಲ ಜೋಡಿಯಾಗಿ ಸಿಕ್ಕಿದ್ದು ವೀಕ್ಷಕರಿಗೆ ಒಳ್ಳೆ ಮಜಾ ಕೊಡುವಂತಿದೆ.
ರಕ್ಷಕ್ ಬುಲೆಟ್ ಸರ್ಪ್ರೈಸ್ ಎಂಬಂತೆ ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ಮುದ್ದಾಗಿ ರಮೋಲಗೆ ಪ್ರಪೋಸ್ ಮಾಡಿದ್ದಾರೆ. ಆಕಾಶದ ಎತ್ತರಕ್ಕೆ ಕರೆದುಕೊಂಡು ಹೋಗಿ ತನ್ನ ಮನಸ್ಸಿನ ಮಾತನ್ನು ಬಿಚ್ಚಿಟ್ಟಿದ್ದಾರೆ ರಕ್ಷಕ್. ನಾನು ಎಷ್ಟೇ ದೌಲತ್ನಿಂದ ಇರಬಹುದು ಆದ್ರೆ, ನಿಮ್ಮ ಮುಂದೆ ಯಾವತ್ತು ನಾನು ತಲೆ ಬಗ್ಗಿಸಿಕೊಂಡೆ ಇರುತ್ತೇನೆ. ಈ ಪ್ರೀತಿಗೆ ನಾನು ಯಾವತ್ತು ಚಿರರುಣಿಯಾಗಿ ಇರುತ್ತೇನೆ ಎಂದು ಕೈಗೆ ಉಂಗುರ ಹಾಕಿ, ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ.
View this post on Instagram
ಆಗ ರಮೋಲ ನಿನ್ನ ಲೈಫ್ನಲ್ಲಿ ಹುಡುಗಿ ಎಷ್ಟು ಮುಖ್ಯ ಅಂತ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ರಕ್ಷಕ್, ಇವತ್ತು ನಮ್ಮ ಅಮ್ಮ ಎಷ್ಟು ಮುಖ್ಯನೋ ಅದೇ ರೀತಿ ನೀವು ಇಂಪಾರ್ಟೆಂಟ್ ಎಂದಿದ್ದಾರೆ. ಇದಕ್ಕೆ ಮನಸೋತ ರಮೋಲ, ನೀನು ಈಗ ರಾಮನಾಥ್, ಆಕಾಶಾ ಅಥವಾ ರಕ್ಷಕ್ ಏನ್ ಆಗೋದಕ್ಕೆ ಇಷ್ಟ ಪಡ್ತೀಯಾ ಅಂತ ಕೇಳ್ತಾರೆ ಅದಕ್ಕೆ ರಕ್ಷಕ್ ನಾನು ರಮೋಲಗೆ ಬೇಬಿ ಆಗೋದಕ್ಕೆ ಇಷ್ಟ ಪಡುತ್ತೇನೆ ಎಂದು ಉಂಗುರ ಹಾಕಿ, ಕೆನ್ನೆಗೆ ಹಾಗೂ ಹಣೆಗೆ ಮುತ್ತು ಕೊಟ್ಟಿದ್ದಾರೆ. ಮತ್ತೆ ರಮೋಲ ಇಡೀ ಜೀವನ ನಾನು ನಿಮ್ಮ ಜೊತೆಗೆ ಇರಲು ಇಷ್ಟ ಪಡುತ್ತೇನೆ ಎಂದು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಇಬ್ಬರ ಪ್ರೇಮ ನಿವೇದನೆ ನೋಡಿ ನಟಿ ರಚಿತಾ ರಾಮ್ ಸೇರಿ ಎಲ್ಲರೂ ಫುಲ್ ಶಾಕ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ