Advertisment

EVM ಹೇಳಿಕೆಗೆ ಭಾರತದಲ್ಲಿ ಕೋಲಾಹಲ.. ಎಲಾನ್ ಮಸ್ಕ್​​ಗೆ ಪಾಠ ಮಾಡಲು ರೆಡಿ ಎಂದ ಬಿಜಿಪಿ ನಾಯಕ..!

author-image
Ganesh
Updated On
EVM ಹೇಳಿಕೆಗೆ ಭಾರತದಲ್ಲಿ ಕೋಲಾಹಲ.. ಎಲಾನ್ ಮಸ್ಕ್​​ಗೆ ಪಾಠ ಮಾಡಲು ರೆಡಿ ಎಂದ ಬಿಜಿಪಿ ನಾಯಕ..!
Advertisment
  • ಟೆಸ್ಲಾ ಮಾಲೀಕ ಎಲಾನ್ ಮಸ್ಕ್‌ ವರ್ಸಸ್ ಬಿಜೆಪಿ ನಾಯಕರು
  • ಇವಿಎಂ ಬಗ್ಗೆ ಎಲಾನ್ ಮಸ್ಕ್​​ ಹೇಳಿದ್ದೇನು? ಏನಿದು ವಿವಾದ?
  • ಮಸ್ಕ್​ ಹೇಳಿಕೆಗೆ ಉಪ್ಪು ಸುರಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ಭಾರತದಲ್ಲಿ ಯಾವುದೇ ಚುನಾವಣೆ ನಡೀಲಿ.. ಸೋತ ಪಕ್ಷಗಳ ಮೊದಲ ಆರೋಪವೇ ಇವಿಎಂ ಹ್ಯಾಕ್‌.. ಹೀಗಾಗಿ ಇವಿಎಂ ಮತ್ತು ವಿವಿಪ್ಯಾಟ್‌ ವಿಚಾರ ದೇಶದಲ್ಲಿ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ. ಇದೀಗ ಲೋಕಸಭಾ ಚುನಾವಣೆ ಮುಗಿದ್ರೂ ಇವಿಎಂ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಟೆಸ್ಲಾ ಮಾಲೀಕ ಎಲಾನ್‌ ಮಸ್ಕ್‌ ಇವಿಎಂ ಬಗ್ಗೆ ಅಪಸ್ವರ ಎತ್ತಿದ್ದಾರೆ. ಇದು ಮತ್ತೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.

Advertisment

ವಿದ್ಯುನ್ಮಾನ ಮತ ಯಂತ್ರ.. ಚುನಾವಣೆ ಹೊತ್ತಲ್ಲಿ ಪ್ರತಿಬಾರಿಯೂ ಸದ್ದು ಮಾಡುವ ಸಾಧನ.. ಮತದಾನ ಪ್ರಕ್ರಿಯೆಯನ್ನೇ ಅನುಮಾನದ ಬೆರಗುಗಣ್ಣಲ್ಲಿ ನೋಡುವಂತೆ ಮಾಡಿರೋ ಮಷಿನ್‌. ಇದೀಗ ಇವಿಎಂ ಚಾಲ್ತಿಗೆ ಬಂದು 2 ದಶಕಗಳೇ ಕಳೆದ್ರೂ ಅವುಗಳ ಮೇಲಿರೋ ಡೌಟ್ ಹೆಚ್ಚಾಗುತ್ತಲೇ ಇದೆ.. ಇದೀಗ ಲೋಕ ಸಮರದ ಬಳಿಕ ಮತ್ತೆ ಮುನ್ನೆಲೆಗೆ ಬಂದಿದೆ.

ಇದನ್ನೂ ಓದಿ:ಕರೆಂಟ್ ಶಾಕ್ ಕೊಟ್ಟಿದ್ದ ಎನ್ನಲಾದ ಆರೋಪಿಯೂ ಅರೆಸ್ಟ್.. ಮತ್ತೊಬ್ಬ ದರ್ಶನ್ ಆಪ್ತ ಲಾಕ್..!

publive-image

ಟೆಸ್ಲಾ ಮಾಲೀಕನ ಮಾತಿಗೆ ಭಾರತದಲ್ಲಿ ಕೋಲಾಹಲ!
ಟ್ವಿಟರ್, ಟೆಸ್ಲಾ ಕಾರು ಕಂಪನಿ ಮಾಲೀಕ ಎಲಾನ್ ಮಸ್ಕ್‌ ವೋಟಿಂಗ್ ಪದ್ಧತಿ ಬಗ್ಗೆಯೇ ಹೊಸ ಬಾಂಬ್ ಸಿಡಿಸಿದ್ದಾರೆ. ವಿದ್ಯುನ್ಮಾನ ಮತ ಯಂತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿ ವಿಶ್ವದ ಜನರ ತಲೆಯಲ್ಲಿ ಅನುಮಾನದ ಹುಳ ಬಿಟ್ಟಿದ್ದಾರೆ. ಪ್ಯೂರ್ಟೋ ರಿಕೋ ದೇಶದಲ್ಲಿ ನಡೆದ ಚುನಾವಣೆಯಲ್ಲಿ ಇವಿಎಂ ಅಕ್ರಮ ಆಗಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಅಪಸ್ವರ ಹಾಡಿರೋ ಎಲಾನ್ ಮಸ್ಕ್‌ ಇವಿಎಂ ಮಷೀನ್‌ಗಳನ್ನ ಕಿತ್ತೆಸೆಯಬೇಕು.. ಅವುಗಳನ್ನ ಹ್ಯಾಕ್ ಮಾಡಬಹುದು ಅಂತ ಅಪಾದನೆ ಮಾಡಿದ್ದಾರೆ..

Advertisment

‘ಇವಿಎಂ ಕಿತ್ತೆಸೆಯಬೇಕು’
ವಿದ್ಯುನ್ಮಾನ ಮತಯಂತ್ರಗಳನ್ನ ಕಿತ್ತೆಸೆಯಬೇಕು. ಇವುಗಳನ್ನ ಮನುಷ್ಯರು ಅಥವಾ AI ನಿಂದ ಹ್ಯಾಕ್ ಮಾಡುವ ಅಪಾಯವಿದೆ. ಈ ವಿಚಾರ ಚಿಕ್ಕದಾಗಿದ್ದರೂ ದೊಡ್ಡ ವಿಷಯವಾಗಿದೆ--ಎಲಾನ್ ಮಸ್ಕ್‌, ಟೆಸ್ಲಾ ಮಾಲೀಕ

ಇದನ್ನೂ ಓದಿ:‘ಸಿಟ್ಟು ಬಂದ್ರೆ ಏನ್ಮಾಡ್ತಾಳೆ ಅಂತಾ ಅವಳಿಗೂ ಗೊತ್ತಿರಲ್ಲ..’ ಪವಿತ್ರ ಗೌಡಳ ಇನ್ನೊಂದು ಮುಖ ಅನಾವರಣ

ಎಲಾನ್ ಮಸ್ಕ್ ಅಪಸ್ವರಕ್ಕೆ ಬಿಜೆಪಿ ನಾಯಕರ ಸಿಡಿಮಿಡಿ
ಎಲಾನ್ ಮಸ್ಕ್‌ರ ಇವಿಎಂ ವಾದಕ್ಕೆ ಬಿಜೆಪಿ ನಾಯಕರು ಕಿಡಿಕಾರ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ತಿರುಗೇಟು ಕೊಟ್ಟಿದ್ದಾರೆ.. ಭಾರತದ ವೋಟಿಂಗ್ ಮೆಷೀನ್​​ಗೂ ಬೇರೆ ಕಡೆಯ ಮೆಷೀನ್​ಗೂ ಇರುವ ವ್ಯತ್ಯಾಸವನ್ನು ತಿಳಿಹೇಳುವ ಪ್ರಯತ್ನ ಮಾಡಿದ್ದಾರೆ. ಅಷ್ಟೇ ಅಲ್ಲ.. ಈ ಬಗ್ಗೆ ಎಲಾನ್‌ಮಸ್ಕ್‌ಗೆ ಪಾಠ ಮಾಡಲು ನಾವು ರೆಡಿ ಅಂತ ರಾಜೀವ್ ಚಂದ್ರಶೇಖರ್ ಆಹ್ವಾನವಿಟ್ಟಿದ್ದಾರೆ.

Advertisment

ಎಲಾನ್ ಮಸ್ಕ್ ವಾದಕ್ಕೆ ಧ್ವನಿಗೂಡಿಸಿದ ರಾಹುಲ್ ಗಾಂಧಿ
ಎಲಾನ್ ಮಸ್ಕ್ ಹುಟ್ಟು ಹಾಕಿರೋ ಇವಿಎಂ ವಾದಕ್ಕೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಧ್ವನಿಗೂಡಿಸಿದ್ದಾರೆ.. ಇವಿಎಂ ಒಂದು ಕಪ್ಪು ಪೆಟ್ಟಿಗೆ.. ಅವುಗಳ ಪರಿಶೀಲಿಸಲು ಯಾರಿಗೂ ಅನುಮತಿ ಇಲ್ಲ ಎನ್ನುತ್ತಾ ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ಇದನ್ನೂ ಓದಿ:ದರ್ಶನ್ ಜೊತೆಯಲ್ಲೇ ಇರ್ತಾರೆ ಮೂವರು ದುಶ್ಮನ್​​ಗಳು.. ಪ್ರತಿ ಅನಾಹುತಗಳಿಗೂ ಕಾರಣ ಅವೇ..!

ಇವಿಎಂ ಒಂದು ‘ಬ್ಲ್ಯಾಕ್‌ಬಾಕ್ಸ್‌’
ಭಾರತದಲ್ಲಿನ ಇವಿಎಂಗಳು ಬ್ಲ್ಯಾಕ್‌ ಬಾಕ್ಸ್‌ ಇದ್ದಂತೆ. ಅವುಗಳನ್ನ ಪರಿಶೀಲಿಸಲು ಯಾರಿಗೂ ಅನುಮತಿಯಿಲ್ಲ. ನಮ್ಮ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ. ಸಂಸ್ಥೆಗಳ ಹೊಣೆಗಾರಿಕೆ ಕೊರತೆಯಿಂದ ಪ್ರಜಾಪ್ರಭುತ್ವವು ಅಧಃಪತನವಾಗುತ್ತಿದೆ-ರಾಹುಲ್ ಗಾಂಧಿ, ಎಐಸಿಸಿ ನಾಯಕ

Advertisment

ಒಟ್ಟಾರೆ, ಇವಿಎಂಗಳ ಬಗೆಗಿನ ಅನುಮಾನ ನಿನ್ನೆ ಮೊನ್ನೆಯದಲ್ಲಿ.. ಆದ್ರೀಗ ವಿಶ್ವದ ಬುದ್ಧಿವಂತ ಉದ್ಯಮಿ ಎಲಾನ್ ಮಸ್ಕ್ ಕೂಡಾ ಈ ಬಗ್ಗೆ ಡೌಟ್ ಪಟ್ಟಿರೋದೇ ಸದ್ಯದ ಚರ್ಚೆಯ ಸಂಗತಿ.

ಇದನ್ನೂ ಓದಿ:ಸೂತ್ರಧಾರಿಗಳ ತಾಳಕ್ಕೆ ಕುಣಿದ ಪಾತ್ರಧಾರಿಗಳು.. ಯಾರು ಯಾವ ರೋಲ್ ನಿಭಾಯಿಸಿದರು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment