/newsfirstlive-kannada/media/post_attachments/wp-content/uploads/2024/11/AJAZ-KHAN-TROLLED-1.jpg)
ಬಹುನಿರೀಕ್ಷಿತ ಮಹಾರಾಷ್ಟ್ರ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಹಾಗೂ ಸಹಯೋಗ ಮೈತ್ರಿ ಮಹಾ ವಿಕಾಸ್ ಅಘಾಡಿ ದಳವನ್ನು ಮಹಾರಾಷ್ಟ್ರದಲ್ಲಿ ಸ್ವಚ್ಛ ಮಾಡಿ ಹಾಕಿದೆ. ಮಹಾರಾಷ್ಟ್ರದ ಅನೇಕ ಕ್ಷೇತ್ರಗಳಲ್ಲಿ ಅಚ್ಚರಿ ಎನ್ನಿಸುವಂತಹ ಫಲಿತಾಂಶಗಳು ಆಚೆ ಬಂದಿವೆ. ಅದು ಒಂದು ಕಡೆಯಾದ್ರೆ ನಾವಿಲ್ಲಿ ನಿಮಗೆ ಹೇಳಲು ಹೊರಟಿರುವುದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸದ್ದು ಮಾಡುತ್ತಿರುವ ಮಹಾರಾಷ್ಟ್ರದಲ್ಲಿ ಸೆಲೆಬ್ರೆಟಿ ಎಂದೇ ಗುರುತಿಸಿಕೊಂಡಿರುವ ಹಾಗೂ ಈ ಬಾರಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಅಖಾಡಕ್ಕೆ ಇಳಿದ ಎಜಾಜ್ ಖಾನ್ ಬಗ್ಗೆ. ಎಜಾಜ್ ಖಾನ್ ಈ ಬಾರಿ ಅದೃಷ್ಟ ಪರೀಕ್ಷೆಗೆ ಅಂತ ಮಹಾರಾಷ್ಟ್ರ ಚುನಾವಣೆಯ ಅಖಾಡಕ್ಕೆ ಇಳಿದಿದ್ದರು. ತಮ್ಮ ಗೆಲುವಿನ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನು ಕೂಡ ಆಡಿದ್ದರು. ಆದರೆ ಮತದಾರ ಆ ಎಲ್ಲಾ ದೊಡ್ಡ ದೊಡ್ಡ ಮಾತುಗಳ ಬಲೂನ್ನ ಗಾಳಿಯನ್ನು ತೆಗೆದುಬಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಹವಾ ಸೃಷ್ಟಿಸಿದ್ದ ಎಜಾಜ್ ಖಾನ್ ಈಗ ಟ್ರೋಲ್ಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ:ಮಹಾಯುತಿ ಮೈತ್ರಿಯಲ್ಲಿ CM ಸ್ಥಾನಕ್ಕೆ ಪೈಪೋಟಿ; ಘೋಷಣೆಗೂ ಮೊದಲೇ ಪವಾರ್ ‘ಪವರ್’ ಪೋಸ್ಟರ್..!
ಮುಂಬೈನ ವರ್ಸಾವಾ ಕ್ಷೇತ್ರದಿಂದ ಅಜಾದ್ ಸಮಾಜ್ ಪಕ್ಷದಿಂದ ಕಣಕ್ಕಿಳಿದಿದ್ದ ಎಜಾಜ್ ಖಾನ್. ಅವರ ಪರವಾಗಿ ಪಕ್ಷದ ಮುಖ್ಯಸ್ಥ ಚಂದ್ರಶೇಖರ್ ಅವರೇ ಬಂದು ಪ್ರಚಾರ ಮಾಡಿದ್ದರು. ಆದ್ರೆ ಇಂದು ಮುಂಜಾನೆಯಿಂದಲೇ ಚುನಾವಣೆಯ ಫಲಿತಾಂಶದ ಒಂದೊಂದೇ ಅಂಶಗಳು ಆಚೆ ಬರಲು ಶುರುವಾದವು. ಮತ ಎಣಿಕೆ ಒಂದೊಂದೇ ಸುತ್ತನ್ನು ಮುಗಿಸುತ್ತಾ ಹೋದಂತೆ ಎಜಾಜ್ ಖಾನ್ನ ಹಣೆಯಲ್ಲಿ ಬೆವರಿನ ಹನಿಗಳು ಕಾಣಿಸಲು ಆರಂಭಿಸಿದವು. 10ನೇ ಸುತ್ತಿನ ಮತ ಎಣಿಕೆ ಕಾರ್ಯ ಮುಗಿದಾಗ ಎಜಾಜ್ ಖಾನ್ಗೆ ಬಿದ್ದ ಮತಗಳ ಸಂಖ್ಯೆ ಕೇವಲ 70 ಮಾತ್ರ. ಅಚ್ಚರಿ ಅಂದ್ರೆ ಅಜಾಜ್ ಖಾನ್ ಕುಟುಂಬವೇ ಬಹಳ ದೊಡ್ಡದಿದೆ. ಹೀಗಾಗಿಯೇ ಆತನ ಮತಗಳ ಸಂಖ್ಯೆ ನೂರನ್ನು ದಾಟಲು ಸಾಧ್ಯವಾಗಿದೆ ಎಂದು ಹೇಳಲಾಗುತ್ತಿದೆ. ಎಲ್ಲಾ ಸುತ್ತಿನ ಮತ ಎಣಿಕೆಗಳ ಕಾರ್ಯ ಮುಗಿದಾಗ ಅಜಾಜ್ ಖಾನ್ಗೆ ದಕ್ಕಿದ ಒಟ್ಟು ಮತಗಳ ಸಂಖ್ಯೆ 146.
ಇದನ್ನೂ ಓದಿ:ರಾಹುಲ್ ಗಾಂಧಿ ದಾಖಲೆಯನ್ನೇ ಮುರಿದ ಪ್ರಿಯಾಂಕ; ಅಬ್ಬಬ್ಬಾ! ಎಷ್ಟು ವೋಟ್ನಿಂದ ಗೆದ್ರು ಗೊತ್ತಾ?
ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆದ ಖಾನ್
ಇನ್ನು ಯಾವಾಗ ಮುಂಬೈನ ವರ್ಸಾವಾ ಕ್ಷೇತ್ರದ ಮತ ಎಣಿಕೆಗಳು ಆರಂಭವಾದವೋ ಎಜಾಜ್ ಖಾನ್ನ ಮತಗಳ ಸಂಖ್ಯೆಯನ್ನು ನೆಟ್ಟಿಗರು ತಿಳಿಯಲು ಆರಂಭಿಸಿದರೋ, ಟ್ರೋಲ್ಗಳು ಶುರುವಾದವು. ಆರಂಭದಲ್ಲಿ ಅವರಿಗೆ ದಕ್ಕಿದ 43 ಮತಗಳನ್ನೇ ಇಟ್ಟುಕೊಂಡು. ಈ ವಯ್ಯನನ್ನು ಟ್ರೋಲ್ ಮಾಡಲು ಆರಂಭಿಸಿದರು. ಎಜಾಜ್ ಖಾನ್ನ ಇನ್ಸ್ಟಾಗ್ರಾಮ್ ಪ್ರೊಫೈಲ್ನ ಸ್ಕ್ರೀನ್ಶಾಟ್ ತೆಗೆದು ಅವನ ಫಾಲೋವರ್ಸ್ ಹಾಗೂ ಆತನಿಗೆ ಬಿದ್ದ ಮತಗಳನ್ನು ತಾಳೆ ಹಾಕಿ ನೋಡಿ ಲೇವಡಿ ಮಾಡತೊಡಗಿದರು. ಫಾಲೋವರ್ಸ್ ಇರೋದು 56 ಲಕ್ಷ, ಈತನ ಕುಟುಂಬದ ಸದಸ್ಯರ ಸಂಖ್ಯೆ 72 ಜನ ಕುಟುಂಬದ ಎಲ್ಲ ಸದಸ್ಯರೂ ಕೂಡ ಎಜಾಜ್ ಖಾನ್ಗೆ ಮತ ಹಾಕಲಿಲ್ವಾ ಎಂದು ಪ್ರಶ್ನಿಸಲು ಆರಂಭಿಸಿದರು.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಎಜಾಜ್ ಖಾನ್ ದೊಡ್ಡದಾಗಿ ಟ್ರೋಲ್ ಆಗುತ್ತಿದ್ದಾರೆ. ಅಷ್ಟಕ್ಕೂ ಈ ವ್ಯಕ್ತಿಗೆ 146 ವೋಟು ಮಾಡಿದ ಆ ಪುಣ್ಯಾತ್ಮರು ಯಾರು ಅದರ ಬಗ್ಗೆ ಒಂದು ದೊಡ್ಡ ಸಂಶೋಧನೆಯಾಗಬೇಕಿದ ಎಂದೆಲ್ಲಾ ಟ್ರೋಲ್ ಮಾಡಿದ್ದಾರೆ.ಇನ್ನೂ ಒಂದು ಅಚ್ಚರಿ ಎಂದರೆ ನೊಟಾಗೆ ಬಿದ್ದಷ್ಟು ಮತಗಳು ಕೂಡ ಎಜಾಜ್ ಖಾನ್ಗೆ ಬಿದ್ದಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ