ಬ್ರೇಕ್ ಅಪ್‌ ಕೋಪ.. 300 ದುಬಾರಿ ಗಿಫ್ಟ್‌ಗಳನ್ನು ಮನೆಗೆ ಕಳುಹಿಸಿದ ಮಾಜಿ ಪ್ರಿಯಕರ!

author-image
admin
Updated On
ಬ್ರೇಕ್ ಅಪ್‌ ಕೋಪ.. 300 ದುಬಾರಿ ಗಿಫ್ಟ್‌ಗಳನ್ನು ಮನೆಗೆ ಕಳುಹಿಸಿದ ಮಾಜಿ ಪ್ರಿಯಕರ!
Advertisment
  • ದುಬಾರಿ ಗಿಫ್ಟ್‌ ಕೊಡಲು ಆಗದ ಹಿನ್ನೆಲೆಯಲ್ಲಿ ಲವ್ ಬ್ರೇಕ್ ಅಪ್!
  • ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಿಂದ 300 ವಸ್ತುಗಳ ಆರ್ಡರ್‌
  • ಗಿಫ್ಟ್‌ಗಳ ಟಾರ್ಚರ್‌ ಸಹಿಸಲಾಗದೆ ಹುಡುಗಿ ಪೊಲೀಸರಿಗೆ ದೂರು

ಕೋಲ್ಕತ್ತಾ: ಹುಡುಗಿ ಯಾವಾಗಲೂ ದುಬಾರಿ ಉಡುಗೊರೆಗಳನ್ನ ಕೇಳುತ್ತಿದ್ದಳು. ದುಬಾರಿ ಗಿಫ್ಟ್‌ ಕೊಡಲು ಆಗದ ಹಿನ್ನೆಲೆಯಲ್ಲಿ ಲವ್ ಬ್ರೇಕ್ ಅಪ್ ಆಗಿತ್ತು. ಇದೀಗ ಹುಡುಗಿಯಿಂದ ದೂರವಾದ ಕೋಪಕ್ಕೆ ಆ ಹುಡುಗ ದುಬಾರಿ ಗಿಫ್ಟ್‌ಗಳನ್ನೇ ಆನ್‌ಲೈನ್‌ನಲ್ಲಿ ಆರ್ಡರ್‌ ಟಾರ್ಚರ್ ಕೊಟ್ಟಿದ್ದಾನೆ. ಮಾಜಿ ಪ್ರಿಯಕರನ ದುಬಾರಿ ಉಡುಗೊರೆಯ ಈ ಟಾರ್ಚರ್‌ ಸಹಿಸಲಾಗದೆ ಹುಡುಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.

ಮಾಜಿ ಗೆಳತಿಯಿಂದ ತನ್ನ ಜೀವನವೇ ನರಕವಾಯಿತು ಎಂದು ಯುವಕನಿಗೆ ಕೋಪ ಇತ್ತು. ಪ್ರೀತಿಯ ಸಂಬಂಧ ಮುರಿದು ಬಿದ್ದ ನಂತರ ತನ್ನ ಕೋಪ ಹೊರ ಹಾಕಲು ಆನ್‌ಲೈನ್ ಆರ್ಡರ್‌ನ ಮೊರೆ ಹೋಗಿದ್ದಾನೆ. ತನ್ನ ಗೆಳತಿಯ ಮನೆಗೆ ಕ್ಯಾಶ್ ಆನ್ ಡೆಲಿವರಿ ಆರ್ಡರ್‌ಗಳನ್ನು ಕಳುಹಿಸಲು ಪ್ರಾರಂಭಿಸಿದ್ದಾನೆ. ಕಳೆದ 4 ತಿಂಗಳಲ್ಲಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಿಂದ 300 ವಸ್ತುಗಳ ಆರ್ಡರ್‌ಗಳನ್ನು ಬುಕ್ ಮಾಡಿದ್ದಾನೆ.

publive-image

ಕ್ಯಾಶ್ ಆನ್ ಡೆಲಿವರಿ ಇದ್ದಿದ್ದರಿಂದ ಪ್ರತಿ ಬಾರಿಯೂ ಹುಡುಗಿ ಪಾರ್ಸೆಲ್‌ಗಳನ್ನು ಹಿಂತಿರುಗಿಸುತ್ತಲೇ ಇದ್ದಳು. ಕೊನೆಗೆ ಎರಡು ಇ-ಕಾಮರ್ಸ್ ಕಂಪನಿಗಳು ಈ ಹುಡುಗಿಯನ್ನು ಕಪ್ಪು ಪಟ್ಟಿಗೆ ಸೇರಿಸಿದವು. ತನ್ನ ಮಾಜಿ ಗೆಳೆಯನ ಕೃತ್ಯದಿಂದ ಬೇಸತ್ತ ಹುಡುಗಿ ಪೊಲೀಸರಿಗೆ ದೂರು ನೀಡಿದ್ದಾಳೆ.

ನವೆಂಬರ್‌ನಿಂದ ಪಾರ್ಸೆಲ್ ಕಳುಹಿಸುವ ಪ್ರಕ್ರಿಯೆ!
ಕೋಲ್ಕತ್ತಾದ ನ್ಯಾಷನಲ್ ಬ್ಯಾಂಕ್ ಶಾಖೆಯಲ್ಲಿ ಆ ಹುಡುಗಿ ಕೆಲಸ ಮಾಡುತ್ತಿದ್ದಳು. ನಾಡಿಯಾ ಜಿಲ್ಲೆಯಲ್ಲಿ ವಾಸಿಸುವ ಯುವಕನೊಂದಿಗೆ ಅವಳಿಗೆ ಹಲವು ವರ್ಷಗಳಿಂದ ಪರಿಚಯ ಇತ್ತು.

ಇದನ್ನೂ ಓದಿ: 12 ಸಾವಿರ ಕೋಟಿ ವೆಚ್ಚದ ಹೆದ್ದಾರಿಗೆ ಅಡ್ಡಿಯಾದ ಒಂಟಿ ಮನೆ; 25 ವರ್ಷದಿಂದ ಖಾಲಿ ಮಾಡಿಸಲು ಆಗಿಲ್ಲ! 

ಕಳೆದ ನವೆಂಬರ್‌ನಲ್ಲಿ ಲವ್ ಬ್ರೇಕ್ ಅಪ್ ಆದ ನಂತರ ಆ ಹುಡುಗ ಆನ್‌ಲೈನ್ ಶಾಪಿಂಗ್ ಕಂಪನಿಗಳ ಮೂಲಕ ಹುಡುಗಿಯ ಮನೆಯ ವಿಳಾಸಕ್ಕೆ ದುಬಾರಿ ವಸ್ತುಗಳ ಪಾರ್ಸೆಲ್‌ಗಳನ್ನು ಬುಕ್ ಮಾಡಲು ಪ್ರಾರಂಭಿಸಿದ್ದಾನೆ. ಅದರಲ್ಲಿ ಪ್ರತಿಯೊಂದು ಆರ್ಡರ್ ಕೂಡ ಕ್ಯಾಶ್ ಆನ್ ಡೆಲಿವರಿ ಆಗಿತ್ತು. ಆ ಹುಡುಗಿ ಅದನ್ನು ಮತ್ತೆ ಮತ್ತೆ ಹಿಂತಿರುಗಿಸುತ್ತಲೇ ಇದ್ದಳು. ಪೊಲೀಸರ ಪ್ರಕಾರ, ಯುವಕ ಆ ಹುಡುಗಿ ಮನೆಗೆ ಸುಮಾರು 300 COD ಆರ್ಡರ್‌ಗಳನ್ನು ಕಳುಹಿಸಿದ್ದಾನೆ. ಪದೇ ಪದೇ ಪಾರ್ಸೆಲ್‌ಗಳು ಹಿಂತಿರುಗುತ್ತಿದ್ದರಿಂದ, ಇ-ಕಾಮರ್ಸ್ ಕಂಪನಿಗಳು ಹುಡುಗಿಯನ್ನು ನಿರ್ಬಂಧಿಸಿವೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈಗ ಆ ಹುಡುಗನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment