newsfirstkannada.com

ಫಸ್ಟ್​ ಡೇ ಕೈಹಿಡಿದು ಶಾಲೆಗೆ ಕರ್ಕೊಂಡು ಹೋಗಿದ್ದರು -ಅಪ್ಪನ ನೆನೆದು ಗಳಗಳನೇ ಕಣ್ಣೀರಿಟ್ಟ ಬೊಮ್ಮಾಯಿ

Share :

Published June 7, 2023 at 3:07am

    ಎಸ್.ಆರ್.ಬೊಮ್ಮಾಯಿ ಜನ್ಮ ಶತಮಾನೋತ್ಸವದಲ್ಲಿ ಕಣ್ಣೀರು

    ಯಡಿಯೂರಪ್ಪ ಅವರ ಸಹಾಯವನ್ನೂ ನೆನೆದು ಅತ್ತ ಬೊಮ್ಮಾಯಿ

    ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಕಣ್ಣೀರಿಟ್ಟ ವಿಡಿಯೋ ಇಲ್ಲಿದೆ

ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಆರ್.ಬೊಮ್ಮಾಯಿ ಜನ್ಮ ಶತಮಾನೋತ್ಸವದ ಕಾರ್ಯಕ್ರಮವು ನಿನ್ನೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಿತು. ಸಮಾರಂಭವನ್ನ ಮಾಜಿ ಸಿಎಂ ಯಡಿಯೂರಪ್ಪ ಉದ್ಘಾಟನೆ ಮಾಡಿದರು. ಈ ವೇಳೆ ಮಾಜಿ ಸಿಎಂ ಬೊಮ್ಮಾಯಿ, ತಮ್ಮ ತಂದೆಯನ್ನು ಸ್ಮರಿಸಿ ಕಣ್ಣೀರಿಟ್ಟರು.

ವೇದಿಕೆ ಮೇಲಿರುವ ಎಸ್.ಎಂ ಕೃಷ್ಣ, ಯಡಿಯೂರಪ್ಪ ಹಾಗೂ ನಮ್ಮ ತಂದೆಯವರು ಯಾವುದೇ ಗಾಡ್ ಪಾಧರ್ ಇಲ್ಲದೇ ಬಂದವರು. ಹೀಗೆ ಬಂದಾಗ ಹೋರಾಟದ ಮನೋಭಾವ ಬೆಳಯುತ್ತದೆ. ಹೊಸ ಮನ್ವಂತರ ಹಾಕಿ ಕೊಟ್ಟವರು ಎಂದರು.

ನನಗೆ ನನ್ನ ತಂದೆಯ ನೆನಪು ಅಚ್ಚಳಿಯದೇ ಉಳಿದಿಕೊಂಡಿದೆ. ಮೊದಲನೇ ದಿನ ನನ್ನನ್ನು ಕೈಹಿಡಿದುಕೊಂಡು ಶಾಲೆಗೆ ಕರೆದುಕೊಂಡು ಹೋಗಿದ್ದರು. ಎಲ್ಲರನ್ನೂ ಸಮಾನವಾಗಿ ನೋಡುವಂತಹ ಅಪ್ಪ ಆಗಿದ್ದರು. ನಾವು ಚಿಕ್ಕವರಿದ್ದಾಗ ನಮಗೆ ಸಮಾನತೆ ಏನು ಅನ್ನೋದನ್ನು ಕಲಿಸುತ್ತಿದ್ದರು. ನಾವೆಲ್ಲ ಊಟಕ್ಕೆ ಕೂತಿದ್ದಾಗ ಎಲ್ಲರಿಗೂ ಊಟ ಬಡಿಸಿ, ಆಮೇಲೆ ಅವರು ಊಟ ಮಾಡುತ್ತಿದ್ದರು.
ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ

ನನಗೆ ನನ್ನ ತಂದೆ ಕೈ ಹಿಡಿದು ಶಾಲೆಗೆ ಕರೆದು ಹೋಗಿದ್ದರು. ಮನೆಯಲ್ಲಿ ನಮಗೆ ಎಲ್ಲರಿಗೂ ಸಮನಾಗಿ ಬಡಸಿ, ಅವರು ಊಟ ಮಾಡುತ್ತಿದ್ದರು ವಕೀಲರಾಗಿದ್ದರೂ ದೊಡ್ಡತನ ತೋರಿಸಿಕೊಂಡಿಲ್ಲ. ಹಲವಾರು ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಂಡರೆ ಇಂದು ರಾಜಕೀಯದಲ್ಲಿ ಮುಂದುವರಿಯುತ್ತಿದ್ದರೇನೋ ಗೊತ್ತಿಲ್ಲ. ಆಂತರಿಕವಾಗಿ ಮತ್ತೊಮ್ಮ ಸಿಎಂ ಆಗುವ ಅವಕಾಶ ಸಿಕ್ಕಿತ್ತು ಎಂದರು.

ನನ್ನನ್ನು ಗುರುತಿಸಿ ನನಗೆ ಶಕ್ತಿ ತುಂಬಿದವರು ಯಡಿಯೂರಪ್ಪ. ನನ್ನ ಮನೆಗೆ ಬಂದು ನನಗೆ ಎಲ್ಲಾ ರೀತಿಯಲ್ಲೂ ಶಕ್ತಿ ತುಂಬಿದವರು. ಅದಕ್ಕಾಗಿ ಯಡಿಯೂರಪ್ಪರನ್ನು ನಾನು ನನ್ನ ತಂದೆಯವರಾಗಿ ಕಾಣ್ತೀನಿ. ನನಗೆ ಅವಕಾಶ ಕೊಟ್ಟವರು. ನಾನು ಇಂದು ಏನೇ ಆಗಿದ್ದರೂ ಅದಕ್ಕೆ ಕಾರಣ ಬಿಎಸ್ ಯಡಿಯೂರಪ್ಪ ಎಂದು ಕಣ್ಣೀರಿಟ್ಟರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫಸ್ಟ್​ ಡೇ ಕೈಹಿಡಿದು ಶಾಲೆಗೆ ಕರ್ಕೊಂಡು ಹೋಗಿದ್ದರು -ಅಪ್ಪನ ನೆನೆದು ಗಳಗಳನೇ ಕಣ್ಣೀರಿಟ್ಟ ಬೊಮ್ಮಾಯಿ

https://newsfirstlive.com/wp-content/uploads/2023/06/BOMMAI-1.jpg

Load More