newsfirstkannada.com

40 ದಿನಕ್ಕೆ 31 ಹತ್ಯೆ, 300 ಜನರ ಮೇಲೆ ಹಲ್ಲೆ.. ಆಂಧ್ರದಲ್ಲಿ ಮತ್ತೆ ರಕ್ತ ರಾಜಕೀಯ? ಸ್ಫೋಟಕ ಮಾಹಿತಿ ಇಲ್ಲಿದೆ

Share :

Published July 20, 2024 at 2:54pm

    ಆಂಧ್ರಪ್ರದೇಶದಲ್ಲಿ ಮುಗಿಯದ ರಕ್ತ ರಾಜಕೀಯ ಚರಿತ್ರೆ

    ಜಗನ್ ಪಕ್ಷದ ಕಾರ್ಯಕರ್ತ ಬೀದಿ ಹೆಣವಾಗಿದ್ದು ಹೇಗೆ..?

    ಟಿಡಿಪಿ ಸರ್ಕಾರದ ವಿರುದ್ಧ ಪ್ರಧಾನಿ ಮೋದಿಗೆ ಜಗನ್ ಪತ್ರ

ಹೈದರಾಬಾದ್​: ಒಂದೊಂದು ರಾಜ್ಯಗಳು ಒಂದೊಂದು ರಾಜಕೀಯ ಇತಿಹಾಸವನ್ನು ಹೊಂದಿವೆ. ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ರಾಜಕೀಯ ಇತಿಹಾಸಗಳು ಒಂದೊಂದು ರಾಜ್ಯದಲ್ಲಿಯೂ ವಿಭಿನ್ನ ಹಾಗೂ ಅಧ್ಯಯನಕಾರಕ ಅಂಶಗಳನ್ನೇ ಹೊಂದಿವೆ. ಕರ್ನಾಟಕದ್ದು ಒಂದು ಚರಿತ್ರೆಯಾದ್ರೆ, ನೆರೆ ರಾಜ್ಯಗಳಾದ ಕೇರಳ ಹಾಗೂ ತಮಿಳುನಾಡಿನಲ್ಲಿ ಇನ್ನೊಂದು ಚರಿತ್ರೆಯಿದೆ. ಆದ್ರೆ ಈ ಆಂಧ್ರಪ್ರದೇಶ ರಾಜಕೀಯ ಚರಿತ್ರೆಯೇ ವಿಭಿನ್ನ. ಇಲ್ಲಿ ವಾಗ್ಯುದ್ಧಗಳಿಗಿಂತ, ಟೀಕೆ ಟಿಪ್ಪಣಿಗಳಿಗಿಂತ ಜಾಸ್ತಿ ಚಾಲ್ತಿಯಲ್ಲಿದ್ದಿದ್ದು ಈಗ ಇರೋದು ಕೂಡ ರಕ್ತ ಚರಿತ್ರೆಯೇ. ಇಲ್ಲಿ ಸಣ್ಣ, ಸಣ್ಣ ವಿಷಯಗಳಿಗೆ ಕತ್ತಿ ಝಳಪಿಸುತ್ತೆ. ಕಲ್ಲು ತೂರಿ ಬರುತ್ವೆ, ಇನ್ಯಾರೋ ಇನ್ಯಾರನ್ನೋ ನೇಣಿಗೆ ಬಿಗಿದು ಉಸಿರು ನಿಲ್ಲಿಸುತ್ತಾರೆ. ಈ ಚರಿತ್ರೆ ಈಗ 21ನೇ ಶತಮಾನದಲ್ಲಿಯೂ ಮುಂದುವರಿದಿದೆ. ಈ ರಾಜಕೀಯ ರಕ್ತ ಚರಿತ್ರೆಯ ಕುರಿತು ಅನೇಕ ಸಿನಿಮಾಗಳು ಬಂದಿವೆ. ಕಥೆ ಕಾದಂಬರಿಗಳನ್ನು ಬರೆಯಲಾಗಿದೆ. ಆದರೂ ಕೂಡ ಇಲ್ಲಿನ ರಕ್ತಚರಿತ್ರೆಯ ರಾಜಕೀಯ ಮಾತ್ರ ಬದಲಾಗಿಲ್ಲ. 12ನೇ ಶತಮಾನದಿಂದ ಆರಂಭವಾದ ಈ ರಕ್ತ ರಾಜಕೀಯ ಈಗಲೂ ಕೂಡ ತನ್ನ ಕರಾಳ ಯುದ್ಧವೊಂದನ್ನು ಜಾರಿಯಲ್ಲಿಯೇ ಇಟ್ಟಿದೆ.

2024ರಲ್ಲಿ ಲೋಕಸಭಾ ಚುನಾವಣೆ ಜೊತೆ ಜೊತೆಗೆ ವಿಧಾನಸಭಾ ಚುನಾವಣೆಯನ್ನೂ ಕೂಡ ಎದುರಿಸಿತ್ತು ಆಂಧ್ರಪ್ರದೇಶ. ಐದು ವರ್ಷದ ಜಗನ್ ಸರ್ಕಾರವನ್ನು ತಿರಸ್ಕರಿಸಿದ ಜನರು ಚಂದ್ರಬಾಬು ನಾಯ್ಡು ಹಾಗೂ ಪವನ್ ಕಲ್ಯಾಣ ಜನಸೇನಾ ಪಕ್ಷದ ಮೈತ್ರಿ ಸರ್ಕಾರಕ್ಕೆ ಬಹುಮತ ನೀಡಿದರು. ಅಂದಿನಿಂದ ಇಂದಿನವರೆಗೂ ಆಂಧ್ರಪ್ರದೇಶದ ದಿನಪತ್ರಿಕೆಗಳಲ್ಲಿ ಹರಿದಾಡಿದ್ದು ಕೇವಲ ರಕ್ತ ರಾಜಕೀಯದ ಸುದ್ದಿ. ಚುನಾವಣಾ ಫಲಿತಾಂಶ ಬಂದ ಕೆಲವೇ ಗಂಟೆಗಳಲ್ಲಿ ಗುಂಟೂರಿನಲ್ಲಿರುವ ವೈಎಸ್​ಆರ್​ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ದಾಳಿ ನಡೆಯಿತು, ಕಲ್ಲು ತೂರಾಟಗಳು ನಡೆದವು. ಎರಡು ಪಕ್ಷಗಳ ನಡುವಿನ ವೈರತ್ವ ಬೇರೆಯದ್ದೇ ಸೀಮೆ ತಲುಪಿತು ಕೊನೆಗೆ ಟಿಡಿಪಿಯ ನಾಯಕನೊಬ್ಬ ವೈಎಸ್​ಆರ್ ಕಾಂಗ್ರೆಸ್​ ಮುಖಂಡನ ಹತ್ಯೆ ಮಾಡಿದ ಮೇಲೆ ಆಂಧ್ರಪ್ರದೇಶ ಮತ್ತೊಂದು ಬಾರಿ ರಕ್ತ ರಾಜಕೀಯಕ್ಕೆ ಸಾಕ್ಷಿಯಾಯ್ತು.

ಪಲ್ನಾಡು ಜಿಲ್ಲೆಯಲ್ಲಿ ಜುಲೈ 17ನೇ ತಾರೀಖಿನ ರಾತ್ರಿ ಸುಮಾರು 8.30ಕ್ಕೆ ಬರ್ಬರ ಹತ್ಯೆಯೊಂದು ಈಗ ಆಂಧ್ರಪ್ರದೇಶದ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಎಸ್​.ಕೆ ಜೈಲಾನಿ ಅನ್ನೋ ವ್ಯಕ್ತಿ ರಶೀದ್​ ಎಂಬು 25 ವರ್ಷದ ಯುವಕನನ್ನು ನಟ್ಟನಡು ರಸ್ತೆಯಲ್ಲಿಯೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ. ಹತ್ಯೆಯಾದ ಯುವಕ ರಶೀದ್​ನನ್ನು ವೈಎಸ್​ಆರ್​ಪಿ ಕಾಂಗ್ರೆಸ್​ನ ಯುವ ಘಟಕದ ಸದಸ್ಯ ಎಂದು ಗುರುತಿಸಲಾಗಿದೆ. ಚಾಕುವಿನಿಂದ ಇರಿದು ಕೊಂದಿದ್ದಲ್ಲದೇ ಆತನ ಕೈಗಳನ್ನು ಕತ್ತರಿಸಿ ಹಾಕಲಾಗಿತ್ತು. ಜನನಿಬೀಡ ಪ್ರದೇಶದಲ್ಲಿಯೇ, ನಟ್ಟ ನಡು ರಸ್ತೆಯಲ್ಲಿಯೇ ನಡೆದು ಹೋದ ಈ ಭೀಕರ ಹತ್ಯೆ ಕಂಡ ಜನರು ಬೆಚ್ಚಿ ಬಿದ್ದು ಹೋಗಿದ್ದರು. ಈ ಒಂದು ಕೊಲೆ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಟಿಡಿಪಿ ಮತ್ತು ವೈಎಸ್​ಆರ್​ ಕಾಂಗ್ರೆಸ್ ನಾಯಕರ ನಡುವೆ ಜೋರಾದ ವಾಗ್ಯುದ್ಧಗಳಿಗೆ ಸಾಕ್ಷಿಯಾಗಿದೆ.

ಎಕ್ಸ್ ಖಾತೆಯಲ್ಲಿ ಉಭಯ ಪಾರ್ಟಿಗಳ ನಾಯಕರು ಒಬ್ಬರ ಮೇಲೋಬ್ಬರು ಮುಗಿಬೀಳುತ್ತಿದ್ದಾರೆ. ಟಿಡಿಪಿ ಸರ್ಕಾರ ರಚನೆಯಾಗಿ ಕೇವಲ ಒಂದೇ ಒಂದು ತಿಂಗಳಲ್ಲಿ ಒಟ್ಟು 31 ಜನರ ಹತ್ಯೆಯಾಗಿದೆ. 300 ಜನರ ಮೇಲೆ ಮಾರಣಾಂತಿಕ ಹಲ್ಲೆಗಳಾಗಿವೆ. 35 ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ ಇವೆಲ್ಲವೂ ಕೂಡ ಟಿಡಿಪಿ ಪಕ್ಷದ ನಾಯಕರ ಶೋಷಣೆಯಿಂದಲೇ ನಡೆದಿವೆ. ಇಷ್ಟು ಮಾತ್ರವಲ್ಲ 560 ಖಾಸಗಿಯವರ ಆಸ್ತಿಗಳನ್ನು ಧ್ವಂಸಗೊಳಿಸಲಾಗಿದೆ. 490 ಸರ್ಕಾರಿ ಆಸ್ತಿಗಳ ಮೇಲೆ ದಾಳಿ ನಡೆದಿದೆ. 2700 ಜನರು ತಮ್ಮ ಹಳ್ಳಿಗಳನ್ನು ತೊರೆದು ಬೇರೆಡೆಗೆ ಹೋಗಿದ್ದಾರೆ. ಇವೆಲ್ಲವೂ ಟಿಡಿಪಿ ಪಕ್ಷದ ಶೋಷಣೆ, ದುರ್ವತನೆಯಿಂದಲೇ ನಡೆಯುತ್ತಿವೆ ಎಂದು ವೈಎಸ್​ಆರ್​ ಕಾಂಗ್ರೆಸ್ ನಾಯಕರು ನಾಯ್ಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಪ್ರಣಯದೂರಿನಲ್ಲಿ ಪದಕಗಳ ಬೇಟೆಗೆ ವೇದಿಕೆ ಸಜ್ಜು: ಹೊನ್ನಿನ ಪದಕ ಹೊತ್ತು ತರುವ ಭಾರತೀಯ ಸ್ಪರ್ಧಿಗಳು ಯಾರು?

ವೈಎಸ್​ಆರ್​ ಕಾಂಗ್ರೆಸ್​ನ ಮುಖ್ಯಸ್ಥ ಹಾಗೂ ಮಾಜಿ ಸಿಎಂ ಜಗನ್ ಮೋಹನ ರೆಡ್ಡಿ ಚಂದ್ರಬಾಬು ನಾಯ್ಡು ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ ಅನ್ನೋ ಮೂಲಕ ಟಿಡಿಪಿ ಪಕ್ಷವನ್ನು ಜಾಡಿಸಿದ್ದಾರೆ. ಜಗನ್​ ಮಾತಿಗೆ ಕೌಂಟರ್ ಆಗಿ ಟಿಡಿಪಿ ನಾಯಕರು ಕೂಡ ಶಾಬ್ದಿಕ ಸಮರ ಹೂಡಿದ್ದಾರೆ. ರಶೀದ್ ಹಾಗೂ ಜೈಲಾನಿ ನಡುವೆಯಾದದ್ದು ವೈಯಕ್ತಿಕ ದ್ವೇಷದ ಪ್ರತಿಫಲ ಇದನ್ನು ರಾಜಕೀಯಕ್ಕೆ ಎಳೆಯಬೇಡಿ ಅಂತ ಟಿಡಿಪಿ ನಾಯಕರು ಜಗನ್ ಹೇಳಿಕೆಗೆ ಕೌಂಟರ್ ಕೊಡುತ್ತಿದ್ದಾರೆ. ಈ ಯುದ್ಧ ಈಗ ಮತ್ತೊಂದು ಮಜಲಿಗೆ ಹೋಗಿದೆ. ಆಂಧ್ರಪ್ರದೇಶದ ಮಾಜಿ ಸಿಎಂ ಜಗನ್ ಮೋಹನ ರೆಡ್ಡಿ ಪ್ರಧಾನಿಗೆ ಪತ್ರ ಬರೆಯುವುದರ ಮೂಲಕ ಹೊಸ ರಾಜಕೀಯ ಚರ್ಚೆಯೊಂದನ್ನು ಹುಟ್ಟು ಹಾಕಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಜಗನ್: ಪಕ್ಷವನ್ನು ಪಾತಾಳಕ್ಕೆ ತಳ್ಳಲು ಸಿದ್ಧತೆ ನಡೆದಿದೆ ಎಂದು ದೂರು

ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ನಡೆದ ಒಂದು ಕೊಲೆ ಈಗ ರಾಷ್ಟ್ರವ್ಯಾಪಿಯಾಗಿ ಸುದ್ದಿಯಾಗುತ್ತಿದೆ. ಆಡಳಿತ ಪಕ್ಷದ ವಿರುದ್ಧ ಗುಡುಗಿರುವ ಜಗನ್ ಮೋಹನ್ ರೆಡ್ಡಿ ಈಗ ಇದೇ ವಿಚಾರವಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಜಗನ್ ಮೋಹನ್ ತಮ್ಮ ಪತ್ರದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅನ್ನೋದು ಸಂಪೂರ್ಣವಾಗಿ ಕುಸಿದು ಹೋಗಿದೆ. ಕಳೆದ 45 ದಿನಗಳಲ್ಲಿ ಹಲವಾರು ಹತ್ಯಾ ಪ್ರಕರಣಗಳು ನಡೆದಿವೆ. ಇವೆಲ್ಲವೂ ಕೇಂದ್ರ ತನಿಖಾ ಸಂಸ್ಥೆಗಳಿಂದಲೇ ತನಿಖೆಯಾಗಬೇಕು. ಈ ವಿಚಾರದಲ್ಲಿ ಕೇಂದ್ರ ಮಧ್ಯಪ್ರವೇಶಿಸಬೇಕು. ನಮ್ಮ ಪಕ್ಷವನ್ನು ಮುಗಿಸಿ ಹಾಕಲು ದುಷ್ಟಕೂಟವೊಂದು ಬ್ಲ್ಯೂಪ್ರಿಂಟ್ ರೆಡಿ ಮಾಡಿಟ್ಟುಕೊಂಡಿದೆ. ಹೀಗಾಗಿ ಕೂಡಲೇ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಬೇಕು ಎಂದು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ಕೊಡಗಿನಲ್ಲಿ ಪತ್ನಿಯ ಬರ್ಬರ ಹತ್ಯೆ.. ಕೋವಿ ಸಮೇತ ಪೊಲೀಸರಿಗೆ ಶರಣಾದ ಬೋಪಣ್ಣ; ಕಾರಣವೇನು?

ಟಿಡಿಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಆಂಧ್ರಪ್ರದೇಶ ಕೇವಲ ರಕ್ತ ರಾಜಕೀಯ ವಿಚಾರವಾಗಿಯೇ ಸುದ್ದಿಯಾಗುತ್ತಿದೆ. ಉಭಯ ಪಕ್ಷಗಳ ಕಾರ್ಯಕರ್ತರು ವೈರತ್ವದ ಸೀಮೆ ದಾಟಿ ಬಡಿದಾಡಿಕೊಳ್ಳುತ್ತಿದ್ದಾರೆ. ಆಂಧ್ರಪ್ರದೇಶದಲ್ಲಿ ಈ ರಾಹಕೀಯ ಬಣ ಬಡಿದಾಟ ಹೊಸದಲ್ಲ. ಶತಮಾನಗಳಿಂದಲೂ ಇಂಥಹದೊಂದು ಕರಾಳ ಚರಿತ್ರೆ ಇಲ್ಲಿ ನಡೆದುಕೊಂಡೇ ಬಂದಿದೆ. ಪಲ್ನಾಡು ರಾಯಲಸೀಮೆ ಇವೆಲ್ಲವೂ ಕಳೆದ ಹಲವು ಶತಮಾನಗಳಿಂದ ರಾಜಕೀಯ ಬಡಿದಾಡಕ್ಕೆ ರಕ್ತಚರಿತ್ರೆಗೆ ಸಾಕ್ಷಿಗಳನ್ನು ಹೇಳುತ್ತಲೇ ಬಂದಿವೆ. ಅದು 21ನೇ ಶತಮಾನಕ್ಕೂ ಮುಂದುವರಿದಿದೆ. ಈ ರಾಜಕೀಯ ಹತ್ಯೆಗಳು, ಹಲ್ಲೆಗಳು, ಅಪಹರಣಗಳಿಂದ ಮುಕ್ತಿ ಹೊಂದಿ ಒಂದು ಸ್ವಚ್ಛ ಆಡಳಿತವನ್ನು ಕಾಣುವ ಅದೃಷ್ಟ ಮುಂಬರುವ ದಿನಗಳಲ್ಲಿ ಆಂಧ್ರಪ್ರದೇಶ ಕಾಣಲಿದೆಯಾ ಅಥವಾ ಈ ಕ್ಷುದ್ರ ಪರಂಪರೆ ಮುಂದುವರೆಯುತ್ತಲೇ ಸಾಗಲಿದೆಯಾ ಅನ್ನೋದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

40 ದಿನಕ್ಕೆ 31 ಹತ್ಯೆ, 300 ಜನರ ಮೇಲೆ ಹಲ್ಲೆ.. ಆಂಧ್ರದಲ್ಲಿ ಮತ್ತೆ ರಕ್ತ ರಾಜಕೀಯ? ಸ್ಫೋಟಕ ಮಾಹಿತಿ ಇಲ್ಲಿದೆ

https://newsfirstlive.com/wp-content/uploads/2024/02/JAGAN.jpg

Load More