ಬರೋಬ್ಬರಿ 33 ಕೆಜಿ ತೂಕ ಇಳಿಸಿ ಫುಲ್ ಫಿಟ್ ಆದ ನವಜೋತ್ ಸಿಂಗ್ ಸಿಧು; ಏನಿದರ ಗುಟ್ಟು?

author-image
Veena Gangani
Updated On
ಬರೋಬ್ಬರಿ 33 ಕೆಜಿ ತೂಕ ಇಳಿಸಿ ಫುಲ್ ಫಿಟ್ ಆದ ನವಜೋತ್ ಸಿಂಗ್ ಸಿಧು; ಏನಿದರ ಗುಟ್ಟು?
Advertisment
  • ನವಜೋತ್ ಸಿಂಗ್ ಸಿಧು ತೂಕ ಇಳಿಕೆಯ ಜರ್ನಿ ಬಗ್ಗೆ ನೀವು ತಿಳಿದುಕೊಳ್ಳಿ
  • ರಾಜಕಾರಣಿ ನವಜೋತ್ ಸಿಂಗ್ ಸಿಧು ದಿಢೀರ್​ ಬದಲಾವಣೆ ಕಂಡು ಶಾಕ್
  • ಜಿಮ್​ಗೆ ಹೋಗಿಲಿಲ್ಲ, ಆದ್ರೂ ಸಖತ್​ ಸ್ಲಿಮ್​ ಆದ ಮಾಜಿ ಕ್ರಿಕೆಟಿಗ ಹೇಗೆ?

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಂದಿ ದೇಹದ ತೂಕ ಕಳೆದುಕೊಳ್ಳುವುದರ ಬಗ್ಗೆ ಗಮನ ಹರಿಸುತ್ತಿದ್ದಾರೆ. ಹೀಗಾಗಿ ಜಿಮ್​, ಡಯಟ್​ ಅಂತೆಲ್ಲಾ ಪ್ರಯತ್ನಪಟ್ಟರೂ ತೂಕ ಇಳಿಸಿಕೊಳ್ಳಲು ಸಾಧ್ಯವಾಗದೆ ಹಲವರು ಅಸಮಾಧಾನ ಹೊರಹಾಕುತ್ತಾರೆ. ಆದ್ರೆ ಇದೀಗ ಮಾಜಿ ಕ್ರಿಕೆಟಿಗ, ರಾಜಕಾರಣಿ ನವಜೋತ್ ಸಿಂಗ್ ಸಿಧು ತಮ್ಮ ತೂಕ ಇಳಿಕೆಯ ಜರ್ನಿಯ ಫೋಟೊವನ್ನು ಶೇರ್ ಮಾಡಿಕೊಳ್ಳುವ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಮಹಾಕುಂಭಮೇಳದಿಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ ಉಚ್ಛಾಟನೆ; ಕಾರಣವೇನು?

publive-image

ಹೌದು, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನವಜೋತ್ ಸಿಂಗ್ ಸಿಧು ಮೊದಲು ಮತ್ತು ನಂತರ ಎಂದು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಆಗಸ್ಟ್‌ನಿಂದ ಐದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಅದು ಕೂಡ ಮನೆಯಲ್ಲಿ 33 ಕೆಜಿ ತೂಕ ಕಳೆದುಕೊಂಡಿದ್ದಾರೆ. ಶೇರ್ ಮಾಡಿಕೊಂಡ ಫೋಟೋದ ಜೊತೆಗೆ ಫಿಟ್‌ನೆಸ್ ಗುರಿಯನ್ನು ಸಾಧಿಸಲು ಆಹಾರ, ಪ್ರಾಣಾಯಾಮ ಮತ್ತು ದೀರ್ಘ ನಡಿಗೆ ಹೇಗೆ ಸಹಾಯ ಮಾಡಿತು ಎಂಬುದನ್ನು ಹಂಚಿಕೊಂಡಿದ್ದಾರೆ.

ಇದು ಇಚ್ಛಾಶಕ್ತಿ, ನಿರ್ಣಯ, ಪ್ರಕ್ರಿಯೆ ಮತ್ತು ಪ್ರಾಣಾಯಾಮ, ತೂಕ ತರಬೇತಿ ಮತ್ತು ದೀರ್ಘ ನಡಿಗೆಗಳಿಂದ ಸುಗಮಗೊಳಿಸಲ್ಪಟ್ಟ ಶಿಸ್ತುಬದ್ಧ ಆಹಾರದ ಬಗ್ಗೆ, ಇದು ಅಸಾಧ್ಯವಲ್ಲ, ಆರೋಗ್ಯಕರ ದೇಹವನ್ನು ಹೊಂದುವುದು ದೊಡ್ಡ ಆಶೀರ್ವಾದ ಎಂದು ಕಾಂಗ್ರೆಸ್ ನಾಯಕ ಬರೆದುಕೊಂಡಿದ್ದಾರೆ. ಸದ್ಯ ನವಜೋತ್ ಸಿಂಗ್ ಸಿಧು ಶೇರ್ ಮಾಡಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇನ್ನೂ, ಸಿಧು ಅವರ ಪೋಸ್ಟ್ ಹಲವಾರು ಮಂದಿ ಕಾಮೆಂಟ್ಸ್​ ಹಾಕಿದ್ದಾರೆ. ಕೆಲವರು ಸಿಧು ಅವರ ಅದ್ಭುತ ಚೇಂಚ್​ಗೆ ಹಾಡಿ ಹೊಗಳುತ್ತಿದ್ದಾರೆ.

publive-image

ಇನ್ನೂ, ಕಳೆದ ವರ್ಷ ನವೆಂಬರ್‌ನಲ್ಲಿ ತಮ್ಮ ಧರ್ಮಪತ್ನಿ ನವಜೋತ್ ಕೌರ್ ಸಿಧುಗೆ ಸ್ತನ ಕ್ಯಾನ್ಸರ್ ಇರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ಸಿಧು, ಪತ್ನಿಗೆ ಸ್ತನ ಕ್ಯಾನ್ಸರ್ ಪತ್ತೆಯಾಗಿ, ಅದು 4ನೇ ಹಂತದ ಕ್ಯಾನ್ಸರ್‌ಗೆ ತಿರುಗಿತ್ತು. ವೈದ್ಯರ ಬಳಿ ಪರಿಶೀಲನೆ ಮಾಡಿಸಿದಾಗ, ಆಕೆ ಬದುಕುವುದು ಅನುಮಾನ. ಬದುಕುಳಿಯುವ ಸಾಧ್ಯತೆ ಶೇ.3ರಷ್ಟು ಮಾತ್ರವಿದೆ ಎಂದಿದ್ದರು. ಕೇವಲ 40 ದಿನಗಳಲ್ಲಿ ಆಕೆ ತೆಗೆದುಕೊಂಡ ನಿಂಬೆ, ಬೇವು, ಹಸಿ ಹರಿಶಿಣ, ಶುಂಠಿ ಡಯಟ್ ಕ್ರಮವೇ ಕ್ಯಾನ್ಸರ್‌ನಿಂದ ಬದುಕುಳಿಸಿತು ಎಂದು ಹೇಳಿಕೆ ನೀಡಿದ್ದರು. ಈ ವಿಚಾರ ವೈದ್ಯ ಲೋಕಕ್ಕೆ ಸವಾಲಿನ ಪ್ರಶ್ನೆಯಾಗಿ ಕಾಡಿದ ಬೆನ್ನಲ್ಲೇ ವ್ಯಾಪಕ ವಿರೋಧಗಳು ವ್ಯಕ್ತವಾಯಿತು. ಅನೇಕ ಹಿರಿಯ ವೈದ್ಯರು ಸಿಧು ಹೇಳಿಕೆಯನ್ನು ಖಂಡಿಸಿ, ತಿರುಗೇಟು ನೀಡಿದರು. ಇದು ದೊಡ್ಡ ವಿವಾದಕ್ಕೂ ಕಾರಣವಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment