‘ತಂಡದಲ್ಲಿ ಒಂದು ಸಂಸ್ಕೃತಿ ಇರಲಿಲ್ಲ, ಅದ್ಕೆ ಕಪ್ ಗೆದ್ದಿಲ್ಲ’
ನಾನೂ ತಂಡದ ಭಾಗವಾಗಿದ್ದೆ, ನಮ್ಮನ್ನು ನೋಡ್ತಿದ್ದ ರೀತಿಯೇ ಬೇರೆ
ಆರ್ಸಿಬಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಆಟಗಾರ ಯಾರು?
ಟೀಂ ಇಂಡಿಯಾದ ಮಾಜಿ ವಿಕೆಟ್ಕೀಪರ್ ಅಂಡ್ ಬ್ಯಾಟ್ಸ್ಮನ್ ಪಾರ್ಥಿವ್ ಪಟೇಲ್ ಆರ್ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ಹರಿಹಾಯ್ದಿದ್ದಾರೆ. ತಂಡದಲ್ಲಿ ಸ್ಟಾರ್ ಆಟಗಾರರಿಗೆ ಮಾತ್ರ ಗೌರವ ಸಿಗುತ್ತದೆ. ಇತರೆ ಆಟಗಾರರಿಗೆ ವಿಶೇಷ ಗಮನ ನೀಡುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಇದೇ ಕಾರಣಕ್ಕೆ ಆರ್ಸಿಬಿ ಇನ್ನೂ ಕಪ್ ಗೆದ್ದಿಲ್ಲ. ಒಂದೇ ಒಂದು ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ನಾನು ತಂಡದ ಭಾಗವಾಗಿದ್ದಾಗ ಅಲ್ಲಿ ಟೀಂ ಸಂಸ್ಕೃತಿ ಇರಲಿಲ್ಲ. ಈ ಎಲ್ಲ ಕಾರಣಗಳಿಂದ ತಂಡಕ್ಕೆ ಇಲ್ಲಿಯವರೆಗೂ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ನಾನು RCBಗಾಗಿ ಆಡಿದ್ದೇನೆ. ನಾನಿದ್ದಾಗ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್ಗೆ ಸಿಗುತ್ತಿದ್ದ ಪ್ರಾಶಸ್ತ್ಯ ಬೇರೆ ಯಾರಿಗೂ ಸಿಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಕೊಚ್ಚಿ ಹೋದ ಯುವಕ.. 2 ದಿನದ ಮಳೆಗೆ 8 ಸಾವು.. ವರುಣದೇವ ಕರುಣೆ ತೋರು ಅಂತಿದ್ದಾರೆ ಜನ..!
RCB ಇಲ್ಲಿಯವರೆಗೆ ಒಂದೇ ಒಂದು IPL ಟ್ರೋಫಿಯನ್ನು ಗೆದ್ದಿಲ್ಲ. ಆದರೆ ಆರ್ಸಿಬಿ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದೆ. ಐಪಿಎಲ್ 2024 ರಲ್ಲಿ ಆರ್ಸಿಬಿ ಸೂಪರ್-4 ಹಂತಕ್ಕೆ ತಲುಪಿತ್ತು. ಹೀನಾಯ ಸೋಲುಗಳನ್ನು ಕಂಡಿದ್ದ ಆರ್ಸಿಬಿ ಮುಂದೆ ಸತತ 6 ಪಂದ್ಯಗಳನ್ನು ಗೆದ್ದು ಸೂಪರ್-4ಕ್ಕೆ ಆಗಮಿಸಿತ್ತು. ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲನ್ನು ಎದುರಿಸಬೇಕಾಯಿತು.
ಇದನ್ನೂ ಓದಿ:ದೇಗುಲದ ದ್ವಾರ ಬಾಗಿಲಲ್ಲೇ ಪ್ರಾಣಬಿಟ್ಟ ಮಹಿಳೆ; ಸಾವಿಗೆ ಕಾರಣ ಒಂದು ಮಂಗ..
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್