/newsfirstlive-kannada/media/post_attachments/wp-content/uploads/2024/12/Vinod-kambli-2.jpg)
ವಿನೋದ್ ಕಾಂಬ್ಳಿ ಅವರ ಆರ್ಥಿಕ ದುಸ್ಥಿತಿ ಜಗತ್ತಿಗೆ ಬಹಿರಂಗವಾಗಿದೆ. 52 ವರ್ಷದ ಮಾಜಿ ಕ್ರಿಕೆಟಿಗನ ಬಳಿ ಕಳೆದ 6 ತಿಂಗಳಿಂದ ಫೋನ್ ಇಲ್ಲ ಎಂಬ ಅಂಶ ಬಹಿರಂಗವಾಗಿದೆ. ಐಫೋನ್ ರಿಪೇರಿಗಾಗಿ 15,000 ರೂಪಾಯಿ ಪಾವತಿಸಲು ವಿಫಲರಾಗಿದ್ದಾರೆ. ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕ ಕಾಂಬ್ಳಿಯಿಂದ ಫೋನ್ ವಾಪಸ್ ಪಡೆದಿದ್ದು, ಹಲವು ತಿಂಗಳಿಂದ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ.
/newsfirstlive-kannada/media/post_attachments/wp-content/uploads/2024/12/VINOD-KAMBLI.jpg)
ಸದ್ಯ ಮಹಾರಾಷ್ಟ್ರದ ಥಾಣೆಯ ಆಕೃತಿ ಆಸ್ಪತ್ರೆಯಲ್ಲಿ ಕಾಂಬ್ಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ಪರೀಕ್ಷೆಯಲ್ಲಿ ಕಾಂಬ್ಳಿಗೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಪತ್ತೆಯಾಗಿದೆ. ಮೂತ್ರದ ಸೋಂಕಿನ ಸಮಸ್ಯೆಯೂ ಇದೆ. ಆದರೆ ಅವರ ಸ್ಥಿತಿ ಮೊದಲಿಗಿಂತ ಉತ್ತಮವಾಗಿದೆ. ತಮ್ಮ ಜ್ಞಾಪಕಶಕ್ತಿಯನ್ನು ಕಳೆದುಕೊಂಡಿದ್ದಾರೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಪುನರ್ವಸತಿ ಕೇಂದ್ರದಲ್ಲಿ ಅವರು ಸಮಯ ಕಳೆದರೆ ಶೇ.80-90ರಷ್ಟು ಸ್ಮರಣಶಕ್ತಿಯನ್ನು ಮರಳಿ ಪಡೆಯಬಹುದು ಎಂದು ಚಿಕಿತ್ಸೆ ನೀಡುತ್ತಿರುವ ಡಾ.ದ್ವಿವೇದಿ ತಿಳಿಸಿದ್ದಾರೆ.
ಇಷ್ಟೆಲ್ಲಾ ತೊಂದರೆಗಳ ನಡುವೆಯೂ ವಿನೋದ್ ಕಾಂಬ್ಳಿ ಸಕಾರಾತ್ಮಕ ಮನೋಭಾವ ಹೊಂದಿದ್ದಾರೆ. ಆಸ್ಪತ್ರೆಯಲ್ಲಿ ನೃತ್ಯವನ್ನು ಸಹ ಮಾಡಿದ್ದಾರೆ. ತಮ್ಮ ಅಭಿಮಾನಿಗಳು ಮತ್ತು ಆತ್ಮೀಯರ ಬೆಂಬಲದಿಂದ ಇಲ್ಲಿಯವರೆಗೆ ಜೀವನ ಸಾಗಿಸಲು ಸಾಧ್ಯವಾಯಿತು ಎಂದಿದ್ದಾರೆ.
ಒಂದು ಕಾಲದಲ್ಲಿ ಕಾಂಬ್ಳಿ ಅವರ ನಿವ್ವಳ ಮೌಲ್ಯ 13 ಕೋಟಿ ರೂ. ಈಗ ಬಿಸಿಸಿಐ ನೀಡುವ ಪಿಂಚಣಿಯಿಂದ ಅವರ ಕುಟುಂಬ ಜೀವನ ನಡೆಸ್ತಿದೆ. ಮಾಜಿ ಕ್ರಿಕೆಟ್ ಆಟಗಾರರಾಗಿರುವ ಅವರಿಗೆ ಬಿಸಿಸಿಐ ಮಾಸಿಕವಾಗಿ 30 ಸಾವಿರ ರೂಪಾಯಿ ಪಿಂಚಣಿ ನೀಡುತ್ತದೆ.
ಇದನ್ನೂ ಓದಿ:ಸಚಿನ್ ಕೈ ಹಿಡಿದ ವಿನೋದ್ ಕಾಂಬ್ಳಿ.. ಬಾಲ್ಯದ ಗೆಳೆಯರ ಅಪರೂಪದ ವಿಡಿಯೋ ಫುಲ್ ವೈರಲ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us