/newsfirstlive-kannada/media/post_attachments/wp-content/uploads/2024/07/DARSHAN-9.jpg)
ಮಹಾರಾಷ್ಟ್ರದಲ್ಲಿ 50 ವರ್ಷದ ಮಹಿಳೆಯನ್ನು ದಟ್ಟ ಕಾಡಿನ ನಡುವೆ ಮರಕ್ಕೆ ಕಟ್ಟಿ ಹಾಕಿ ಹೋಗಿದ್ದ ಕರುಣಾಜನಕ ಘಟನೆಯೊಂದು ಸಿಂಧುದುರ್ಗ ಜಿಲ್ಲೆಯಲ್ಲಿ ನಡೆದಿತ್ತು. ಈಗ ಪೊಲೀಸರು ಆ ಮಹಿಳೆಯ ಮಾಜಿ ಪತಿಯ ವಿರುದ್ಧ ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದ ಕಾಡಿನಲ್ಲಿ ಅಮೆರಿಕ ಮಹಿಳೆಯ ಚೀರಾಟ.. ಆರ್ತನಾದ ಕೇಳಿ ಬೆಚ್ಚಿ ಬಿದ್ದ ಜನ; ಆಗಿದ್ದೇನು?
ಈ ಬಗ್ಗೆ ಮಾತನಾಡಿರುವ ಸಿಂಧುದುರ್ಗ ಜಿಲ್ಲೆಯ ಪೊಲೀಸರು ಸಂತ್ರಸ್ತ ಮಹಿಳೆ ಲಿಖಿತ ಹೇಳಿಕೆಯ ಆಧಾರದ ಮೇಲೆ ಈ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಅವರು ಬರೆದಿರುವ ಪ್ರಕಾರ ಮಹಿಳೆಯ ಮಾಜಿ ಪತಿಯೇ ಆಕೆಯನ್ನು ತಂದು ಇಲ್ಲಿ ಕಬ್ಬಿಣದ ಚೈನ್ನಿಂದ ಕಟ್ಟಿ ಹೋಗಿದ್ದಾನೆ. 450 ಕಿಲೋಮೀಟರ್ ದೂರದಿಂದ ಕರೆದುಕೊಂಡು ಬಂದು ಇಲ್ಲಿ ಈ ರೀತಿ ಹೀನಾಯವಾಗಿ ಕಾಡಿನಲ್ಲಿ ಬಿಟ್ಟು ಹೋಗಿದ್ದಾನೆ ಎಂದು ಲಿಖಿತ ಹೇಳಿಕೆಯನ್ನು ನೀಡಿದ್ದಾರೆ. ಇದರ ಆಧಾರದ ಮೇಲೆ ಆಕೆಯ ಮಾಜಿ ಪತಿಯ ಮೇಲೆ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: Landslide: 5 ವರ್ಷದ ಹಿಂದೆ ಕೇರಳ ಪುತ್ತುಮಲೆ ದುರಂತ.. ಅದೇ ಜಾಗದಿಂದ 2 ಕಿಮೀ ದೂರದಲ್ಲಿ ಪರ್ವತ ಪ್ರವಾಹ..!
ಕಳೆದ ಶನಿವಾರ ಸಾಯಂಕಲಾ ಸಿಂಧುದುರ್ಗ ಜಿಲ್ಲೆಯ ಸುರರ್ಲಿ ಎಂಬ ಹಳ್ಳಿಯೊಂದಿಗೆ ಅಂಟಿಕೊಂಡಿರುವ ಕಾಡಿನಲ್ಲಿ 50 ವರ್ಷದ ಮಹಿಳೆಯನ್ನು ಕಂಬಕ್ಕೆ ಚೈನ್ನಿಂದ ಕಟ್ಟಿದ್ದನ್ನು ಅದೇ ಗ್ರಾಮದ ಒಬ್ಬ ಕುರಿಗಾಹಿ ನೋಡಿದ್ದ. ಅದನ್ನು ಪೊಲೀಸರಿಗೆ ತಿಳಿಸಿದ್ದ. ಸ್ಥಳಕ್ಕೆ ಬಂದ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಆಕೆಯ ಬಳಿ ಇದ್ದ ಚೀಲವನ್ನು ಹುಡುಕಿದಾಗ, ಆಕೆ ಮೂಲತಃ ಅಮೆರಿಕಾದವಳು ಎಂದು ತಿಳಿದು ಬಂದಿತ್ತು. ಅಲ್ಲದೇ ತಮಿಳುನಾಡಿನ ವಿಳಾಸವಿರುವ ಆಧಾರ್ಕಾರ್ಡ್ ಕೂಡ ಸಿಕ್ಕಿತ್ತು. ಇದರ ಆಧಾರದ ಮೇಲೆ ಆಕೆಯ ಹೆಸರು ಲಲಿತಾ ಕಾಯಿ ಎಂಬುದು ಕೂಡ ತಿಳಿದು ಬಂದಿತ್ತು. ಕಾಡಿನಲ್ಲಿ ಸಿಕ್ಕಾಗ 50ರ ವೃದ್ಧೆ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಈಗ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿರುವ ಲಲಿತಾ ಕಾಯಿ ಲಿಖಿತ ಹೇಳಿಕೆಯನ್ನು ನೀಡಿದ್ದಾಳೆ ಅದರ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತಾ ಕಾಯಿದೆ ಅಡಿಯಲ್ಲಿ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಸಿಂಧುದುರ್ಗದ ಎಸ್ಪಿ ಸೌರಭ ಅಗರವಾಲ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ