ಓಂ ಪ್ರಕಾಶ್ ಹತ್ಯೆ ತನಿಖೆಯಲ್ಲಿ ಮಹತ್ವದ ಸುಳಿವು.. FSL ತಂಡಕ್ಕೆ ಸಿಕ್ಕ ಕ್ಲೂ ಏನು..?

author-image
Ganesh
Updated On
ಓಂಪ್ರಕಾಶ್ ಹತ್ಯೆಗೆ ಮೊದಲೇ ಪ್ಲಾನ್.. ಅನುಮಾನ ಹೆಚ್ಚಿಸಿದ ಪತ್ನಿ, ಪುತ್ರಿಯ ಈ ನಡೆ..
Advertisment
  • ನಿವೃತ್ತ ಐಪಿಎಸ್​ ಅಧಿಕಾರಿಯ ಬರ್ಬರ ಹತ್ಯೆ
  • ಪತ್ನಿಯಿಂದಲೇ ಕೊಲೆಯಾದ ನಿವೃತ್ತ ಅಧಿಕಾರಿ
  • FSL ಅಧಿಕಾರಿಗಳಿಗೆ ಸಿಕ್ಕಿದೆ ಮಹತ್ವದ ಎವಿಡೆನ್ಸ್

ಬೆಂಗಳೂರು: ನಿವೃತ್ತ ಡಿಜಿ ಓಂ ಪ್ರಕಾಶ್ ಕೊಲೆ ಪ್ರಕರಣದಲ್ಲಿ ತನಿಖೆ ನಡೆಸ್ತಿರುವ ಪೊಲೀಸ್ ಅಧಿಕಾರಿಗಳಿಗೆ ಮಹತ್ವದ ಸಾಕ್ಷಿ ಸಿಕ್ಕಿದೆ ಎನ್ನಲಾಗಿದೆ. ಎಫ್​ಎಸ್​ಎಲ್ ಅಧಿಕಾರಿಗಳು ಪರಿಶೀಲನೆ ಮಾಡುವಾಗ ಮತ್ತೊಂದು ಕ್ಲೂ ಸಿಕ್ಕಿದೆಯಂತೆ.

ಸದ್ಯ ಓಂ ಪ್ರಕಾಶ್ ಅವರನ್ನು ಸಾಯಿಸಿದ್ದು ನಾನೇ ಅಂತಾ ಅವರ ಪತ್ನಿ ಪಲ್ಲವಿ ಒಪ್ಪಿಕೊಂಡಿದ್ದಾರೆ. ಅಂತೆಯೇ ಹೆಚ್​ಎಸ್​ಆರ್​​ ಲೇಔಟ್ ಠಾಣೆ ಪೊಲೀಸರು ಪಲ್ಲವಿಯನ್ನ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಸಿದ್ದಾರೆ. ಇದರ ನಡುವೆ FSL ಅಧಿಕಾರಿಗಳಿಗೆ ಎರಡು ಫಿಂಗರ್ ಪ್ರಿಂಟ್ಸ್ ಸಿಕ್ಕದೆಯಂತೆ.

ಇದನ್ನೂ ಓದಿ: ಮುಖದಲ್ಲಿ ಕೊಂಚವೂ ಪಶ್ಚಾತ್ತಾಪ ಇರಲಿಲ್ಲ.. ಪರಪ್ಪನ ಅಗ್ರಹಾರ ಸೇರುವಾಗ ಓಂ ಪ್ರಕಾಶ್ ಪತ್ನಿ ಹೇಳಿದ್ದೇನು..?

publive-image

ಪರಿಶೀಲನೆ ವೇಳೆಯಲ್ಲಿ ಎರಡು ಫಿಂಗರ್ ಪ್ರಿಂಟ್ ಗುರುತು ಪತ್ತೆಯಾಗಿದ್ದು, ಚಾಕುವಿನ ಮೇಲೆ‌ ಎರಡೆರಡು ಪಿಂಗರ್ ಪ್ರಿಂಟ್ಸ್ ಪತ್ತೆಯಾಗಿದೆ ಎನ್ನಲಾಗಿದೆ. ಇತ್ತ ನಾನು ಒಬ್ಬಳೆ ಕೊಲೆ ಮಾಡಿರೋದಾಗಿ ಪತ್ನಿ ಪಲ್ಲವಿ ಹೇಳಿದ್ದಾಳೆ. ಈ ಪ್ರಕರಣದಲ್ಲಿ ಮಗಳ ಪಾತ್ರ ಇಲ್ಲ ಅಂತ ಪಲ್ಲವಿ ಹೇಳಿದ್ದಾಳೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ, ಪಲ್ಲವಿ ಹಾಗೂ ಮಗಳು ಕೃತಿ ವಿರುದ್ಧ ಆರೋಪ ಕೇಳಿಬಂದಿತ್ತು.

ಎರಡು ಫಿಂಗರ್ ಪ್ರಿಂಟ್ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳಿಗೆ ಮತಷ್ಟು ಅನುಮಾನ ಶುರುವಾಗಿದೆ. ಈ ಪ್ರಕರಣದಲ್ಲಿ ಇನ್ನೊಬ್ಬರು ಯಾರಾದ್ರೂ ಎಂಟ್ರಿಯಾದ್ರಾ ಅನ್ನೋದರ ಬಗ್ಗೆ ತನಿಖೆ ಶುರುವಾಗಿದೆ. ಜೊತೆಗೆ ಮಗಳನ್ನ ಪಾರು ಮಾಡಲು ಈ ರೀತಿಯ ಹೇಳಿಕೆ ನೀಡಿದರಾ? ಮಗಳು ಕೃತಿ ಫಿಂಗರ್ ಪ್ರಿಂಟ್​ಗೂ, ಸಿಕ್ಕಿರೋ ಪ್ರಿಂಟ್​​ಗೂ ಮ್ಯಾಚ್ ಅಗುತ್ತಾ ಅನ್ನೋದರ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾರೆ. ಮಗಳ ಫಿಂಗರ್ ಪ್ರಿಂಟ್ ಮ್ಯಾಚ್ ಆದರೆ ಕೃತಿಗೆ ಸಂಕಷ್ಟ ಎದುರಾಗಲಿದೆ. ಒಂದು ವೇಳೆ ಮ್ಯಾಚ್ ಆಗಲಿಲ್ಲ ಅಂದರೆ ಇನ್ನೊಬ್ಬ ಆರೋಪಿ ಯಾರು ಅನ್ನೋದರ ಬಗ್ಗೆ ತನಿಖೆಯಾಗಲಿದೆ.

ಇದನ್ನೂ ಓದಿ: ಸ್ಟಾರ್ ನಟ ಮಹೇಶ್​ ಬಾಬುಗೆ ED ಸಂಕಷ್ಟ.. ನಡೆದಿದೆಯಾ ಕೋಟಿ ಕೋಟಿ ಅವ್ಯವಹಾರ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment