newsfirstkannada.com

ಸಿದ್ದರಾಮಯ್ಯಗೆ ಅಕ್ಕಿ ಮೇಲೆ, ಅಕ್ಕನ ಮೇಲೆ ಪ್ರೀತಿ ಇದೆ.. ಸಿಎಂ ವಿರುದ್ಧ ಮಾಜಿ ಸಚಿವ ಆರಗ ಜ್ಞಾನೇಂದ್ರ ವ್ಯಂಗ್ಯ

Share :

Published January 14, 2024 at 8:35am

    ಸಿಎಂ ಸಿದ್ದರಾಮಯ್ಯ ಅಯೋಧ್ಯೆಗೆ ಹೋಗಲ್ಲ ಎಂಬ ವಿಚಾರ

    ನಾನು ಕಾರ್ಯಕ್ರಮ ಮುಗಿದ ಮೇಲೆ ಹೋಗ್ತಿನಿ ಎಂದ ಸಿಎಂ

    ರಾಮ ಯಾರನ್ನು ಬಿಡಲ್ಲ. ಅಲ್ಲಿಗೆ ಕರೆಸಿಕೊಳ್ತಾನೆ-ಆರಗ ಜ್ಞಾನೇಂದ್ರ

ಶಿವಮೊಗ್ಗ: ಸಿದ್ದರಾಮಯ್ಯ ಅವರು ಯಾವಾಗ ಏನು ಹೇಳ್ತಾರೆ, ಯಾರಿಗೂ ಗೊತ್ತಾಗಲ್ಲ. ಅವರಿಗೆ ಅಕ್ಕಿ ಮೇಲೆ, ಅಕ್ಕನ ಮೇಲೆ ಪ್ರೀತಿ ಇದೆ. ಮುಸ್ಲಿಂರ ವೋಟ್ ಬ್ಯಾಂಕ್ ಮೇಲೆ ಬಹಳ ಪ್ರೀತಿ ಇದೆ. ಹಿಂದೂಗಳ ವಿರೋಧ ಆಗುತ್ತೇನೋ ಎಂಬ ಭಯವೂ ಇದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಹೋಗ್ತೇನೆ ಎಂಬ ವಿಚಾರವಾಗಿ ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರರವರು, ಮೊನ್ನೆ ಮೊನ್ನೆವರೆಗೂ ನಾವು ಹೋಗಲ್ಲ ಎಂದು ಹೇಳಿದ್ದರು. ನಾನು ಯಾಕೇ ಹೋಗಬೇಕು‌.? ಆಯೋಧ್ಯೆನಲ್ಲೇ ರಾಮ ಇರೋದಾ..? ಇಲ್ಲಿ ಎಲ್ಲೂ ಇಲ್ವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು. ಈಗ ಅವರೇ ನಾನು ಕಾರ್ಯಕ್ರಮ ಮುಗಿದ ಮೇಲೆ ಹೋಗ್ತಿನಿ ಎಂದಿದ್ದಾರೆ ಎಂದು ಹೇಳಿದ್ದಾರೆ.

ಬಳಿಕ ರಾಮ ಯಾರನ್ನು ಬಿಡೋದಿಲ್ಲ ರೀ. ಅಲ್ಲಿಗೆ ಕರೆಸಿಕೊಳ್ತಾನೆ. ಎಲ್ಲರೂ ಹೋಗ್ತಾರೆ. ಅಯೋಧ್ಯೆ ಈ ದೇಶದ ಸಾಂಸ್ಕೃತಿಕ ಹೃದಯ ಇದ್ದಂತೆ. ತ್ಯಾಗ, ಬಲಿದಾನ, ಹೋರಾಟದ ಪ್ರತೀಕ ಆಯೋಧ್ಯೆ ರಾಮ ಮಂದಿರ. ಈ ದೇಶದ ಏಕತೆ, ಸಮ್ರಗತೆ ಹಾಗೂ ಹಿಂದೂ ಧರ್ಮದ ಮೌಲ್ಯಗಳ ಪ್ರತೀಕ ರಾಮಮಂದಿರ. ಬಾಬರ್ ಸೇನೆಯ ದಾಳಿಯಿಂದ ರಾಮಮಂದಿರ ನಾಶವಾಗಿತ್ತು. 1992 ರಲ್ಲಿ ನಾನು ಸೇರಿದಂತೆ ತೀರ್ಥಹಳ್ಳಿ ಸಾಕಷ್ಟು ಜನ ಹೋಗಿದ್ದೇವು. ಹೊಸ ರಾಮಮಂದಿರ ನಿರ್ಮಾಣ ಆಗ್ತಿದೆ. ನನ್ನ ಜೀವನದಲ್ಲಿ ಅದನ್ನ ನೋಡ್ತಿದ್ದೇನೆ. ಸಂತೋಷ ಆಗುತ್ತೆ. 22 ರ ಕಾರ್ಯಕ್ರಮ ಯಶಸ್ಸು ಆಗಲಿ. ಸಿದ್ದರಾಮಯ್ಯ ಬಿಟ್ಟು ಎಲ್ಲರು ರಾಮಮಂದಿರಕ್ಕೆ ಹೋಗಲಿ. ಪಾಪ ಎಲ್ಲವನ್ನೂ ತೊಳೆದುಕೊಂಡು ಬರಲಿ. ಒಳ್ಳೆಯಾಗಲಿ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿದ್ದರಾಮಯ್ಯಗೆ ಅಕ್ಕಿ ಮೇಲೆ, ಅಕ್ಕನ ಮೇಲೆ ಪ್ರೀತಿ ಇದೆ.. ಸಿಎಂ ವಿರುದ್ಧ ಮಾಜಿ ಸಚಿವ ಆರಗ ಜ್ಞಾನೇಂದ್ರ ವ್ಯಂಗ್ಯ

https://newsfirstlive.com/wp-content/uploads/2024/01/AAraga-Jnanedra.jpg

Load More