Advertisment

ರೇವಣ್ಣ ವಿರುದ್ಧದ ಕಿಡ್ನಾಪ್ ಆರೋಪ ಪ್ರಕರಣ.. ಸಾರಾ ಮಹೇಶ್​​ಗೂ ಎದುರಾಗುತ್ತಾ ಸಂಕಷ್ಟ..?

author-image
AS Harshith
Updated On
ರೇವಣ್ಣ ವಿರುದ್ಧದ ಕಿಡ್ನಾಪ್ ಆರೋಪ ಪ್ರಕರಣ.. ಸಾರಾ ಮಹೇಶ್​​ಗೂ ಎದುರಾಗುತ್ತಾ ಸಂಕಷ್ಟ..?
Advertisment
  • ರಿಮ್ಯಾಂಡ್ ಅರ್ಜಿಯಲ್ಲಿ ಸಾರಾ ಮಹೇಶ್ ಹೆಸರು ಉಲ್ಲೇಖ
  • ಕಿಡ್ನಾಪ್ ಆಗಿಲ್ಲ ಅಂತ ಸುದ್ದಿಗೋಷ್ಠಿ ಮಾಡಲು ಸಂತ್ರಸ್ತೆಗೆ ಒತ್ತಾಯ
  • ರೇವಣ್ಣನನ್ನು ವಿಚಾರಣೆಗೆ ಕರೆದ ಕಾರಣ ರದ್ದಾಗಿದ್ದ ಸುದ್ದಿಗೋಷ್ಠಿ

ರೇವಣ್ಣ ವಿರುದ್ಧದ ಕಿಡ್ನಾಪ್ ಆರೋಪ ಪ್ರಕರಣ ಬೆನ್ನಲ್ಲೇ ಮಾಜಿ ಶಾಸಕ ಸಾರಾ ಮಹೇಶ್​ ಇದೀಗ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. SIT ಅಧಿಕಾರಿಗಳು ಅವರಿಗೂ ನೊಟೀಸ್ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ.

Advertisment

ಎಸ್​ಐಟಿ ಅಧಿಕಾರಿಗಳು ಸಲ್ಲಿಸಿದ್ದ ರಿಮ್ಯಾಂಡ್ ಅರ್ಜಿಯಲ್ಲಿ ಸಾರಾ ಮಹೇಶ್ ಹೆಸರು ಉಲ್ಲೇಖಿಸಲಾಗಿದ್ದು, ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಿಂದ ಎಸ್ ಐಟಿ ಗೆ ಮಾಹಿತಿ ತಿಳಿಸಿದ್ದಾರಂತೆ. ತಾನು ಕಿಡ್ನಾಪ್ ಆಗಿಲ್ಲ ಅಂತ ಸುದ್ದಿಗೋಷ್ಠಿ ಮಾಡಲು ಸಂತ್ರಸ್ತೆಗೆ ಒತ್ತಾಯ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಪ್ರಜ್ವಲ್​ ರೇವಣ್ಣ​ ತನಿಖೆ ಹೇಗೆ ನಡೆಯಲಿದೆ? ಮದರ್​ ಡಿವೈಸ್ ಸಾಕ್ಷಿ ನಾಶ ಮಾಡಿದ್ರೆ ಏನಾಗುತ್ತೆ? 

ಅಧಿಕಾರಿಗಳ ಮುಂದೆ ಆರೋಪಿಗಳು ಸಾರಾ ಮಹೇಶ್ ಒತ್ತಾಯ ಮಾಡಿರೋದಾಗಿ ಹೇಳಿಕೆ ನೀಡಿದ್ದು, ಸಂತ್ರಸ್ಥ ಮಹಿಳೆಯನ್ನ ಕರೆದೊಯ್ದು ಸುದ್ದಿಗೋಷ್ಠಿ ಮಾಡಲು ಪ್ರಯತ್ನಿಸಿದ್ದರು ಎಂದು ಆರೋಪಿ ಆರೋಪಿಸಿದ್ದಾರೆ. ಆದರೆ ಅವತ್ತೆ ರೇವಣ್ಣನನ್ನು ವಿಚಾರಣೆಗೆ ಕರೆದ ಕಾರಣ ಸುದ್ದಿಗೋಷ್ಠಿ ರದ್ದಾಗಿತ್ತು ಅಂತ ಬಂಧಿತ ಆರೋಪಿ ಕೀರ್ತಿ ಹೇಳಿಕೆ ನೀಡಿದ್ದಾರೆ.

Advertisment

ಇದನ್ನೂ ಓದಿ: ಪ್ರಜ್ವಲ್​ಗೆ ಜರ್ಮನಿಯಲ್ಲಿ ಸಹಾಯ ಮಾಡಿದ್ದು ಯಾರು ಗೊತ್ತಾ? ಮೊಬೈಲ್​ ವಶಕ್ಕೆ ಪಡೆದ ಮೇಲೆ ಏನಾಯ್ತು?

ಸಾರಾ ಮಹೇಶ್ ಕಿಡ್ನಾಪ್​ ಆಗಿದ್ದಾಗಲೇ ಸುದ್ದಿಗೋಷ್ಠಿ ಮಾಡಲು ಒತ್ತಾಯಿಸಿದ್ದಾಗಿ ಆರೋಪಿ ಹೇಳಿಕೆ ನೀಡಿದ್ದಾರೆ. ಸಂತ್ರಸ್ಥೆಯಿಂದ ಸುದ್ದಿಗೋಷ್ಠಿ ಮಾಡಿಸಲು ಆಗದ ಕಾರಣ ಸಂತ್ರಸ್ಥೆಯಿಂದ ವಿಡಿಯೋ ಮಾಡಿ ಹರಿಬಿಟ್ಟಿರೋ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ಮಾಜಿ ಶಾಸಕನಿಗೂ ಎಸ್​ಐಟಿ ನೊಟೀಸ್ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment