ಪಾಕಿಸ್ತಾನದ ಮಾಜಿ ಸಂಸದ, ಭಾರತದಲ್ಲಿ ಕುಲ್ಫಿ ಐಸ್ ಕ್ರೀಮ್ ಮಾರಾಟ ಮಾಡ್ತಾರೆ.. ಈಗ ಎಲ್ಲಿದ್ದಾರೆ?

author-image
Bheemappa
Updated On
ಪಾಕಿಸ್ತಾನದ ಮಾಜಿ ಸಂಸದ, ಭಾರತದಲ್ಲಿ ಕುಲ್ಫಿ ಐಸ್ ಕ್ರೀಮ್ ಮಾರಾಟ ಮಾಡ್ತಾರೆ.. ಈಗ ಎಲ್ಲಿದ್ದಾರೆ?
Advertisment
  • ಕ್ಷೇತ್ರದಲ್ಲಿ ಸಂಸದರಾಗಿದ್ದವರು ದೇಶವನ್ನೇ ಬಿಟ್ಟು ಬರಲು ಕಾರಣವೇನು?
  • ವೋಟರ್​ ಐಡಿ ಮಾಡಲು ಬಂದವರು ಹೆಸರು ಬದಲಾವಣೆ ಮಾಡಿದರು
  • ಮನೆಯ ಮಹಿಳೆಯನ್ನು ಅಪಹರಣ​ ಮಾಡಿ ಬಲವಂತದಿಂದ ಮದುವೆ

ನವದೆಹಲಿ: ಕಾಶ್ಮೀರದ ಪಹಲ್ಗಾಮ್​​ನಲ್ಲಿ ಉಗ್ರರು ದಾಳಿ ನಡೆಸಿದ ಬಳಿಕ ಪಾಕಿಸ್ತಾನ ಹಾಗೂ ಭಾರತದ ನಡುವೆ ಘರ್ಷಣೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಪಾಕಿಸ್ತಾನಿಗಳನ್ನು ಭಾರತ ಬಿಟ್ಟು ತೊಲಗಬೇಕು ಎಂದು ಹೇಳಲಾಗಿತ್ತು. ಇದರ ಬೆನ್ನಲ್ಲೇ ಯಾರು ನಂಬದೇ ಇರುವ ಸಂಗತಿಯೊಂದು ಹೊರ ಬಿದ್ದಿದೆ. ಅದು ಏನಂದ್ರೆ, ಪಾಕಿಸ್ತಾನದ ಮಾಜಿ ಸಂಸದರೊಬ್ಬರು ಭಾರತದಲ್ಲಿ ಕುಲ್ಫಿ ಐಎಸ್​​ಕ್ರೀಮ್ ಮಾರಾಟ ಮಾಡುತ್ತಿದ್ದಾರೆ.

ಪಾಕಿಸ್ತಾನದ ಮಾಜಿ ಸಂಸದನಾಗಿರುವ ದಬಯಾ ರಾಮ್ ಅವರು ಕುಟುಂಬ ಸಮೇತ ಹರಿಯಾಣದ ಫತೇಹಾಬಾದ್ ಜಿಲ್ಲೆಯ ರಾಟಿಯಾ ತಹಸಿಲ್‌ನ ರತ್ತಂಗಢ ಗ್ರಾಮದಲ್ಲಿ ವಾಸವಾಗಿದ್ದಾರೆ. ಏಪ್ರಿಲ್​ 22 ರಂದು ನಡೆದ ಉಗ್ರರ ದಾಳಿ ಬೆನ್ನಲ್ಲೇ ದಬಯಾ ರಾಮ್ ಕುಟುಂಬವನ್ನು ಅಲ್ಲಿನ ಪೊಲೀಸರು ಕರೆದು ಸರ್ಕಾರದ ನಿರ್ದೇಶನಗಳನ್ನು ಪಾಲಿಸುವಂತೆ ತಿಳಿಸಿದ್ದರು. ಅದರಂತೆ ಅವರ ಕುಟುಂಬಕ್ಕೆ ಪ್ರಶ್ನೆಗಳನ್ನು ಕೇಳಿ ವಾಪಸ್​ ಮನೆಗೆ ಕಳುಹಿಸಲಾಗಿದೆ.

publive-image

ಈಗಾಗಲೇ ದಬಯಾ ರಾಮ್ ಕುಟುಂಬದ 34 ಮಂದಿ ಪೈಕಿ ಕೇವಲ 6 ಜನರು ಮಾತ್ರ ಭಾರತದ ಪೌರತ್ವವನ್ನು ಪಡೆದುಕೊಂಡಿದ್ದಾರೆ. ಉಳಿದ 28 ಜನರು ಇಲ್ಲಿನ ಶಾಶ್ವತ ನೆಲೆಗಾಗಿ ಭಾರತದ ಪೌರತ್ವವನ್ನು ಪಡೆಯಲು ಸರ್ಕಾರಕ್ಕೆ ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದಾರೆ. ಇವರು ಜೀವನಕ್ಕಾಗಿ ಹರಿಯಾಣದಲ್ಲಿ ಐಸ್​ ಕ್ರೀಮ್ ಹಾಗೂ ಕುಲ್ಫಿ ಐಸ್ ಮಾರಾಟ ಮಾಡುತ್ತಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ವಿಭಜನೆ ಆಗುವುದಕ್ಕೂ ಎರಡು ವರ್ಷ ಮೊದಲೇ ದಬಯಾ ರಾಮ್ ಪಾಕಿಸ್ತಾನದ ಪಂಜಾಬ್​ನಲ್ಲಿ ಜನಿಸಿದರು. ಇವರು ಜನಿಸಿದಾಗ ದೇಶ್​ರಾಜ್​ ಎಂದು ಹೆಸರನ್ನು ತಂದೆ, ತಾಯಿ ನಾಮಕರಣ ಮಾಡಿದ್ದರು. ಆದ್ರೆ ನಂತರದ ದಿನಗಳಲ್ಲಿ ವೋಟರ್​ ಐಡಿ ಮಾಡಲು ಅಧಿಕಾರಿಗಳು ಮನೆಗೆ ಬಂದಾಗ ಹೆಸರನ್ನು ಬದಲಾಯಿಸಿ ದಬಾಯಾ ರಾಮ್ ಎಂದು ಬದಲಾವಣೆ ಮಾಡಿದ್ದರು. 1988ರ ಪಾಕ್​ನ ಸಂಸದರ ಸದಸ್ಯರ ಪಟ್ಟಿಯಲ್ಲಿ ಇವರ ಹೆಸರು ಈಗಲೂ ಅಲ್ಲಾ ದಬಾಯಾ ಎಂದು ಇದೆ.

ಇದನ್ನೂ ಓದಿ: ತಿಮ್ಮಪ್ಪನ ದರ್ಶನ ಪಡೆದ RCB ಕ್ಯಾಪ್ಟನ್​, ವಿಕೆಟ್​ ಕೀಪರ್.. 18 ವರ್ಷಗಳ ಸತತ ಹೋರಾಟಕ್ಕೆ ಬ್ರೇಕ್ ಬೀಳುತ್ತಾ?

publive-image

ನಂತರದ ಬದುಕಿನಲ್ಲಿ ಪಾಕ್​ನಲ್ಲಿ ನಡೆಯುತ್ತಿದ್ದ ಮತಾಂತರವನ್ನು ರಾಮ್ ಮತ್ತು ಅವರ ಕಟುಂಬ ಬಲವಾಗಿ ವಿರೋಧ ಮಾಡಿತು. ಇದರ ಲಾಭದಿಂದ 1988ರಲ್ಲಿ ನಡೆದ ಎಲೆಕ್ಷನ್​​ನಲ್ಲಿ ಲೋಹಿಯಾ ಮತ್ತು ಬಖರ್​ ಜಿಲ್ಲೆಗಳಿಗೆ ಸಂಸದರಾಗಿ ದಬಯಾ ರಾಮ್ ಆಯ್ಕೆ ಆಗಿದ್ದರು. ಇವರು ಸಂಸದರಾಗಿ ಆಯ್ಕೆಯಾದ ಮೇಲೆ ಅಲ್ಲಿನ ಬಹುಸಂಖ್ಯ ಧರ್ಮಿಯರಿಂದ ಭಾರೀ ವಿರೋಧ ವ್ಯಕ್ತವಾಯಿತು. ರಾಮ್ ಅವರ ಮನೆಯ ಮಹಿಳೆಯನ್ನು ಅಪಹರಿಸಿ ಒತ್ತಾಯದಿಂದ ಮದುವೆ ಆದರು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದಾಗ, ನ್ಯಾಯಾಲಯ ಅರ್ಜಿಯನ್ನು ತಿರಸ್ಕಾರ ಮಾಡಿತ್ತು. ಇದರಿಂದ ತಮ್ಮ ಸುರಕ್ಷತೆ ಬಗ್ಗೆ ಭಯಗೊಂಡ ರಾಮ್, 2000ರಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬಂದರು. ಕುಟುಂಬದವರ ಒಬ್ಬರ ಅಂತಿಮ ಸಂಸ್ಕಾರಕ್ಕಾಗಿ 1 ತಿಂಗಳ ವೀಸಾ ಮೇಲೆ ಭಾರತಕ್ಕೆ ಬಂದವರು ಅಂದಿನಿಂದ ಇಲ್ಲೇ ಇರಲು ಪ್ರಾರಂಭಿಸಿದರು.

publive-image

ಮೊದಲು ಇವರು ರಾಜಸ್ಥಾನನ ರತ್ನಘರ್​ನಲ್ಲಿ ವಾಸವಿದ್ದರು. ನಂತರದಲ್ಲಿ ಹರಿಯಾಣದಲ್ಲಿ ನೆಲೆ ಕಂಡರು. ಅಂದಿನಿಂದಲೂ ತನ್ನ ದೊಡ್ಡ ಕುಟುಂಬವನ್ನು ಸಾಕಿ ಸಲುವಲು ಸೈಕಲ್ ರಿಕ್ಷಾದಲ್ಲಿ ಕುಲ್ಫಿ ಐಸ್​ ಕ್ರೀಮ್ ಸೇರಿದಂತೆ ಕೆಲ ಐಸ್​ಕ್ರೀಮ್​ ಮಾರಾಟ ಮಾಡುತ್ತಿದ್ದಾರೆ. ಭಾರತದಲ್ಲಿ ಹೊಸ ಜೀವನ ಕಟ್ಟಿಕೊಳ್ಳಲು ಅಂದಿನಿಂದಲೂ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೇ ಇವರ 7 ಮಕ್ಕಳು ಭಾರತದಲ್ಲೇ ಮದುವೆಯಾಗಿದ್ದು ಇಲ್ಲೇ ನೆಲೆ ಕಂಡಿದ್ದಾರೆ. ರಾಜಕೀಯ ನಾಯಕರ ಸಹಾಯ ಹಾಗೂ ತಮ್ಮ ಸಮುದಾಯದ ನಾಯಕರಿಂದ ರಾಮ್ ಇಲ್ಲಿನನ ಪೌರತ್ವ ಪಡೆದುಕೊಂಡಿದ್ದಾರೆ. ಇಲ್ಲಿನ ಭದ್ರತೆ ಹಾಗೂ ಸಹೋದರತ್ವವವನ್ನು ಕಂಡು ಭಾರತವನ್ನು ಪ್ರತಿ ಹಂತದಲ್ಲಿಯೂ ಹೊಗುಳುತ್ತಾರೆ. ಇಡೀ ಭಾರತಕ್ಕೆ ಕೃತಜ್ಞತೆ ಸಲ್ಲಿಸುತ್ತಾರೆ.

ಭಾರತ ಸರ್ಕಾರದಲ್ಲಿ ತನ್ನ ಮಕ್ಕಳು, ಮೊಮ್ಮಕ್ಕಳು ಸರ್ಕಾರಿ ಉದ್ಯೋಗ ಪಡೆಯಬೇಕು ಎನ್ನುವುದು ದಬಾಯಾ ರಾಮ್ ಅವರ ಪ್ರಮುಖ ಆಸೆ ಆಗಿದೆ. 34 ಸದಸ್ಯರು ಇರುವ ಕುಟುಂಬದ ಕಳೆದ 25 ವರ್ಷದಿಂದ ಭಾರತೀಯ ಪೌರತ್ವಕ್ಕಾಗಿ ಅಲೆಯುತ್ತಿದೆ. ಸದ್ಯ ಇದರಲ್ಲಿ ಇಬ್ಬರು ಮಹಿಳೆಯರು, 6 ಸದಸ್ಯರು ಇಲ್ಲಿನ ಪೌರತ್ವವನ್ನು ಪಡೆದಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment