newsfirstkannada.com

ಮಗ ಅಲ್ಲ, ಖರ್ಗೆ ಸಿಎಂ ಆಗಬೇಕಿತ್ತು ಎಂದ ದೊಡ್ಡಗೌಡ್ರು.. ಏನಿದು HDD ಹೊಸ ದಾಳ..?

Share :

Published February 8, 2024 at 8:45pm

Update February 8, 2024 at 9:25pm

    ನಾನು ಇಷ್ಟ ಪಡುವಂತ ವ್ಯಕ್ತಿ ಸಿಎಂ ಆಗ್ಬೇಕಿತ್ತು ಅನ್ನೋದೆ ನನ್ನ ಆಸೆ!

    ಮಗನಿಗಿಂತ ಖರ್ಗೆ ಸಿಎಂ ಆಗಬೇಕಿತ್ತು ಎಂದಿದ್ದೇಕೆ ಮಾಜಿ ಪ್ರಧಾನಿ?

    ದೇವೇಗೌಡರ ಹೇಳಿಕೆಗೆ ಕಾಂಗ್ರೆಸ್​ ಕಂಗಾಲು ಒಗ್ಗಟ್ಟು ಒಡೆಯುತ್ತ!

ಲೋಕ ಸಮರಕ್ಕೆ ಇನ್ನೇನು ಎರಡರಿಂದ ಮೂರು ತಿಂಗಳು ಬಾಕಿಯಿದೆ. ಲೋಕ ಅಖಾಡದಲ್ಲಿ ಜಯಕ್ಕಾಗಿ ಪಣ ತೊಟ್ಟಿರುವ ಬಿಜೆಪಿ ಜೆಡಿಎಸ್​ ಜೊತೆ ಮೈತ್ರಿ ಮಾಡಿಕೊಂಡಿರೋದು ಗೊತ್ತೆ ಇದೆ. ಆದ್ರೀಗ ಬಿಜೆಪಿ ಜೊತೆ ಕೈ ಜೋಡಿಸಿರುವ ಮಾಜಿ ಪ್ರಧಾನಿ ಹೆಚ್​​ಡಿ ದೇವಗೌಡರು ಹೊಸ ದಾಳವೊಂದನ್ನ ಉರುಳಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತು ಸುಣ್ಣವಾಗಿದ್ದ ಬಿಜೆಪಿ ಲೋಕ ಸಮರಕ್ಕಾಗಿ ಜೆಡಿಎಸ್ ಜೊತೆ ಕೈ ಜೋಡಿಸಿದೆ.

ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್​ ಲೋಕ ಕದನದಲ್ಲಿ ಕಾಂಗ್ರೆಸ್​ ಟಕ್ಕರ್ ಕೊಡಲು ಸಜ್ಜಾಗಿದೆ. ಲೋಕಸಭೆ ಚುನಾವಣೆ ಹತ್ತಿರವಾಗ್ತಿದ್ದಂತೆ ದೊಡ್ಡಗೌಡರು ಕೈ ನಾಯಕರ ವಿರುದ್ಧ ಹೊಸ ಹೊಸ ಅಸ್ತ್ರಗಳನ್ನ ಪ್ರಯೋಗಿಸ್ತಿದ್ದಾರೆ. ಅದ್ರಂತೆ ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ದೇವೆಗೌಡರು ಮೋದಿ ಮುಂದೆ ನೀಡಿರುವ ಹೇಳಿಕೆ ಸಂಚಲನಕ್ಕೆ ಕಾರಣವಾಗಿದೆ. ದೊಡ್ಡಗೌಡರ ಇದೊಂದು ಹೇಳಿಕೆ ಈಗ ಕೈ ನಾಯಕರಿಗೆ ಬಿಗ್ ಶಾಕ್ ನೀಡಿದೆ. ರಾಜ್ಯಸಭೆಯಲ್ಲಿ ನಿವೃತ್ತಿ ಸದಸ್ಯರಿಗೆ ವಿದಾಯ ಹೇಳೋ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೆಗೌಡರು, ಒಂದ್ವೆಳೆ ಮಲ್ಲಿಕಾರ್ಜುನ್ ಖರ್ಗೆ ಪ್ರಧಾನಿಯಾದ್ರೆ ಕಾಂಗ್ರೆಸ್​ ಸಹಿಸಿಕೊಳ್ಳುತ್ತಾ ಅನ್ನೋ ಪ್ರಶ್ನೆ ಎತ್ತಿ ಕೈ ನಾಯಕರಿಗೆ ಟಕ್ಕರ್ ಕೊಟ್ಟಿದ್ದಾರೆ. ಗೌಡರು ಉರುಳಿಸಿರುವ ಹೊಸ ದಾಳ ಈಗ ಕಾಂಗ್ರೆಸ್​ಗೆ ನುಂಗಲಾರದ ತುತ್ತಾಗಿದೆ.

ಖರ್ಗೆ ಒಳ್ಳೆಯ ವ್ಯಕ್ತಿ.. ಪ್ರಾಮಾಣಿಕ ನಾಯಕ!

ರಾಜ್ಯಸಭೆಯಲ್ಲಿ ಮಾತನಾಡಿದ ದೊಡ್ಡಗೌಡರು ತಮ್ಮ ಭಾಷಣದ ಉದ್ದಕ್ಕೂ ಮಲ್ಲಿಕಾರ್ಜುನ್ ಖರ್ಗೆ ಅವರನ್ನ ಹಾಡಿ ಹೊಗಳಿದ್ದಾರೆ. ಇಂಥಾ ಪ್ರಾಮಾಣಿಕ ವ್ಯಕ್ತಿ ಪ್ರಧಾನಿಯಾದ್ರೆ ಕಾಂಗ್ರೆಸನವರೇ ಸಹಿಸಲ್ಲ ಅಂತ ಹೇಳೋ ಮೂಲಕ ಖರ್ಗೆಯನ್ನ ದೊಡ್ಡ ಗೌಡರು ಕೊಂಡಾಡಿದ್ದಾರೆ.

ಖರ್ಗೆ ಜೀ ನಿಮಗೆ ಈ ದೇಶದ ಪ್ರಧಾನಿಯಾದ್ರೆ? ಕಾಂಗ್ರೆಸ್​ ಅದನ್ನು ಸಹಿಸಿಕೊಳ್ಳುತ್ತಾ? ದಯವಿಟ್ಟು ನನಗೆ ಹೇಳಿ ಕಾಂಗ್ರೆಸ್ ಏನು ಅಂತ ನನಗೆ ಗೊತ್ತಿದೆ. ಇದನ್ನು ಬಿಟ್ಟು ಬೇರೆ ಏನೂ ಹೇಳೋದಿಕ್ಕಿಲ್ಲ. ನೀವು ಕಾಂಗ್ರೆಸ್​​ಗಾಗಿ 30 ರಿಂದ 40 ವರ್ಷ ಕೆಲಸ ಮಾಡಿದ್ದೀರಿ. ಆದ್ರೆ ಆಗಿದ್ದೇನು? ಪ್ರಧಾನಿ ಅಭ್ಯರ್ಥಿಗಾಗಿ ನಿಮ್ಮ ಹೆಸರನ್ನ ಪ್ರಸ್ತಾಪಿಸಿದಾಗ, ನಿಮ್ಮದೇ ಸ್ನೇಹಿತರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. 

– ಮಾಜಿ ಪ್ರಧಾನಿ ದೇವೆಗೌಡ

30 ರಿಂದ 40 ವರ್ಷ ಕಾಂಗ್ರೆಸ್​​ಗಾಗಿ ಜೀವ ಸವಿಸಿರುವ ನಿಮಗೆ ನಿಮ್ಮದೇ ಪಕ್ಷದಲ್ಲಿ ವಿರೋಧಿಗಳಿದ್ದಾರೆ. ನಿಮ್ಮ ಹೆಸರನ್ನ ಪ್ರಧಾನಿ ಅಭ್ಯರ್ಥಿಗಾಗಿ ಸೂಚಿಸಿದಾಗ ನಿಮ್ಮ ಸ್ನೇಹಿತರೇ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ರು ಅಂತ ಖರ್ಗೆ ಬಗ್ಗೆ ಗೌಡರು ಅನುಕಂಪದ ಮಾತುಗಳನಾಡಿದ್ರು. ಮೋದಿ ಮುಂದೆಯೇ ಇಂತಾದೊಂದು ಹೇಳಿಕೆ ನಿಡೋ ಮೂಲಕ ದೇವೆಗೌಡರು ಸದನದಲ್ಲಿದ್ದವರಿಗೆಲ್ಲ ಶಾಕ್ ನೀಡಿದ್ರು. ಈ ಮೂಲಕ ಕೈ ಪಾಳಯದಲ್ಲಿನ ಒಗಟ್ಟಿಗೆ ತಮ್ಮ ಮಾತಿನ ಮೂಲಕವೇ ಮಂಡ್ಯದ ದೇವೇಗೌಡರು ಉಳಿಪೆಟ್ಟು ಕೊಟ್ಟಿದ್ದಾರೆ.

ಮಗನಿಗಿಂತ ಖರ್ಗೆ ಸಿಎಂ ಆಗ್ಬೇಕಿತ್ತು! ಏನಿದು ದೊಡ್ಡಗೌಡರ ಹೊಸ ದಾಳ?

ಇನ್ನು, 2018ರ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಸರಕಾರ ರಚಿಸಿದ ಕುಮಾರಸ್ವಾಮಿ ಮೇ 23, 2018 ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿದ್ರು. ಈ ವೇಳೆ ಖರ್ಗೆಯವರೇ ಮುಖ್ಯಮಂತ್ರಿಯಾಗಬೇಕು ಅನ್ನೋದು ನನ್ನ ಆಸೆಯಾಗಿತ್ತು. ಆದ್ರೆ ಕೈ ಹೈಕಮಾಂಡ್​ ನನ್ನ ಮಗ ಕುಮಾರಸ್ವಾಮಿ ಮುಖ್ಯಮಂತ್ರಿ ಆಗ್ಬೇಕು ಅಂತ ಹೇಳಿದ್ರು. ಕೈ ಹೈಕಮಾಂಡ್ ಕೆಲ ನಾಯಕರು ಬಂದು ನನ್ನ ಬಳಿ ಮನವಿ ಮಾಡ್ದಾಗ ನಾನು ನನ್ನ ಮಗ ಸಿಎಂ ಆಗೋದು ಬೇಡ ಅಂದಿದ್ದೆ. ಖರ್ಗೆ ಅವರು ಸಿಎಂ ಆಗಲಿ ಎಂದಿದ್ದೆ. ಆದ್ರೆ ಹೈಕಮಾಂಡ್ ಕುಮಾರಸ್ವಾಮಿ ಸಿಎಂ ಆಗಲಿ ಅಂತ ಹೇಳಿತ್ತು ಅನ್ನೋ ಮಾತಿನ ಮೂಲಕ ದೇವೆಗೌಡರು ಕೈ ನಾಯಕರ ಕಾಳೆಲೆದಿದ್ದಾರೆ.

ನಾನು ಇಷ್ಟ ಪಡುವಂತ ವ್ಯಕ್ತಿ ಖರ್ಗೆ, ಖರ್ಗೆ ಅವರು ಸಿಎಂ ಆಗ್ಬೇಕಿತ್ತು ಅನ್ನೋದು ನನ್ನ ಆಸೆಯಾಗಿತ್ತು. ಆದ್ರೆ ಕೈ ಹೈಕಮಾಂಡ್​ ನನ್ನ ಮಗ ಕುಮಾರಸ್ವಾಮಿ ಮುಖ್ಯಮಂತ್ರಿ ಆಗ್ಬೇಕು ಅಂತ ಹೇಳಿದ್ರು. ನಾನು ಯಾವ ಹಿರಿಯ ನಾಯಕರ ಹೆಸರನ್ನ ತೆಗೆದುಕೊಳ್ಳೊದಿಕ್ಕೆ ಇಷ್ಟ ಪಡಲ್ಲ. ಕೈ ಹೈಕಮಾಂಡ್ ಕೆಲ ನಾಯಕರು ಬಂದು ನನ್ನ ಬಳಿ ಬಂದಿದ್ರು. ಗುಲಾಂ ನಬೀ ಆಜಾದ್​​ ಅವರು ಮತ್ತು ಇನ್ನು ಕೆಲವರು ಬಂದು ಮನವಿ ಮಾಡ್ದಾಗ ನಾನು ನನ್ನ ಮಗ ಸಿಎಂ ಅಗೋದು ನನಗೆ ಇಷ್ಟ ಇಲ್ಲ ಅಂದಿದ್ದೆ. ಖರ್ಗೆ ಅವರು ಸಿಎಂ ಆಗಲಿ ಅಂತ ಹೇಳಿದ್ದೆ. ಅವರು ಇಲ್ಲೇ ಇದ್ದಾರೆ ಇದಕ್ಕೆ ಉತ್ತರ ಕೊಡಲಿ. ಆದ್ರೆ, ಹೈಕಮಾಂಡ್ ಕುಮಾರಸ್ವಾಮಿ ಅವರು ಸಿಎಂ ಆಗಲಿ ಅಂತ ಹೇಳಿತ್ತು.

ಕಾಂಗ್ರೆಸ್ ನಾಯಕರೇ ಖರ್ಗೆ ಬೆಳವಣಿಗೆ ಸಹಿಸುತ್ತಿಲ್ಲ !

ಭಾಷಣದ ಉದ್ದಕ್ಕೂ ದೊಡ್ಡಗೌಡ್ರು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದರು. ಮಲ್ಲಿಕಾರ್ಜುನ್ ಖರ್ಗೆ ಪಕ್ಷಕ್ಕಾಗಿ ಇಡೀ ಜೀವನವನ್ನೆ ಸವಿಸಿದ್ದಾರೆ. ಆದ್ರೆ ಕೈ ನಾಯಕರೇ ಖರ್ಗೆ ಬೆಳಗವಣಿಗೆ ಸಹಿಸುತ್ತಿಲ್ಲ ಅಂತ ಹೇಳಿ ಕಾಂಗ್ರೆಸ್ ನಾಯಕರ ನಡುವಿನ ಒಗ್ಗಟ್ಟು ಛಿದ್ರಗೊಳಿಸುವ ಬಾಣ ಬಿಟ್ಟಿದ್ದಾರೆ. ಆ ಸಮಯದಲ್ಲಿ ಕುಮಾರಸ್ವಾಮಿ ಸಿಎಂ ಆದ 13 ತಿಂಗಳಲ್ಲಿ ಅವರನ್ನ ಯಾರು ತೆಗೆದಿದ್ದು? ಖರ್ಗೆ ಅವರಲ್ಲ. ಕಾಂಗ್ರೆಸ್ ಲೀಡರ್ಸ್​. ದಯವಿಟ್ಟು ಅರ್ಥ ಮಾಡ್ಕೊಳ್ಳಿ ಖರ್ಗೆ ಪ್ರಾಮಾಣಿಕ ವ್ಯಕ್ತಿ. ಆ ವ್ಯಕ್ತಿ ಉನ್ನತ ಸ್ಥಾನಕ್ಕೆ ಬಂದ್ರೆ ನೀವು ಸಹಿಸಿಕೊಳ್ತಿರಾ? ಇಲ್ಲ ಆಗಲ್ಲ ಆಂಧ್ರದಲ್ಲಿ ಏನಾಯ್ತು ನನಗೆ ಗೊತ್ತು. ಖರ್ಗೆ ಅವರೇ ನನಗೆ ಗೊತ್ತು. ಸರ್ ನಾನು ಪಕ್ಷದಿಂದ ಪಕ್ಷ ಬದಲಾವಣೆ ಮಾಡಿಲ್ಲ. ಇನ್ನು ಇದೇ ವೇಳೆ ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆಯೂ ಮಾತನಾಡಿರುವ ಗೌಡರು, ಕಾಂಗ್ರೆಸ್ ಪಕ್ಷ ನನ್ನ ಪಕ್ಷವನ್ನು ಸರ್ವನಾಶ ಮಾಡೋದಕ್ಕೆ ಮುಂದಾಗಿತ್ತು. ಹೀಗಾಗಿ ನನ್ನ ಪಕ್ಷವನ್ನು ನಾನು ಉಳಿಸಿಕೊಳ್ಳುವ ಕಾರಣಕ್ಕೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇನೆ ಅಂತ ಕಾಂಗ್ರೆಸ್ ಪಕ್ಷದ ಕೆಲ ನಾಯಕರ ಮೇಲೆ ಗಂಭೀರ ಆರೋಪ ಮಾಡಿದ್ರು.

ನಾನು ನನ್ನ ವೈಯುಕ್ತಿಕ ಉದ್ದೇಶಕ್ಕಾಗಿ ಪಕ್ಷದಿಂದ ಪಕ್ಷದ ಬದಲಾಯಿಸಿಲ್ಲ. ನಾನು ನನ್ನ ಪಕ್ಷವನ್ನು ಉಳಿಸಿಕೊಳ್ಳಬೇಕಿತ್ತು. ಕಾಂಗ್ರೆಸ್​​ನ ಕೆಲ ನಾಯಕರು ಜೆಡಿಎಸ್​ ಪಕ್ಷವನ್ನು ನಾಶ ಮಾಡಲು ಮುಂದಾಗಿದ್ದರು. ಅವರು ಹೆಸರನ್ನ ಹೇಳೋದಿಕ್ಕೆ ಇಷ್ಟ ಪಡಲ್ಲ. ಅವರು ಈಗ ಇಲ್ಲಿಲ್ಲ. ನನಗೆ ನನ್ನ ಪರಿಮಿತಿ ಗೊತ್ತು. ಕಾಂಗ್ರೆಸ್ ನಾಯಕರು ನನ್ನ ಪಕ್ಷ ಮುಗಿಸಬೇಕು ಅಂತ ಅಂದುಕೊಂಡಿದ್ರು. ಹೀಗಾಗಿ ನಾನು ಬಿಜೆಪಿಯವರಿಗೆ ಬೆಂಬಲ ಕೊಟ್ಟೆ ಅಷ್ಟೆ. ಅದು ಬಿಟ್ಟು ಬೇರೆ ಏನು ಇಲ್ಲ. ರಾಜ್ಯ ಸಭೆಯಲ್ಲಿ ಖರ್ಗೆ ಪರ ಬ್ಯಾಟ್ ಬೀಸಿದ ದೇವೇಗೌಡರು ಹೊಸ ದಾಳ ಉರುಳಿಸಿದಂತೂ ಸುಳ್ಳಲ್ಲ. ಕಾಂಗ್ರೆಸ್ ನಾಯಕರ ಮೇಲೆ ಹುರಿದು ಬಿದ್ದಿದ್ದ ದೇವೆಗೌಡರು ಹೂಡಿರುವ ಹೊಸ ಅಸ್ತ್ರ ಕೈ ಪಾಳಯದ ಸಂಚಲನಕ್ಕೆ ಕಾರಣವಾಗಿದ್ದಂತು ಪಕ್ಕಾ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಗ ಅಲ್ಲ, ಖರ್ಗೆ ಸಿಎಂ ಆಗಬೇಕಿತ್ತು ಎಂದ ದೊಡ್ಡಗೌಡ್ರು.. ಏನಿದು HDD ಹೊಸ ದಾಳ..?

https://newsfirstlive.com/wp-content/uploads/2024/02/hdd-1.jpg

Load More