ತಮಿಳುನಾಡಿನ ದೇವಸ್ಥಾನದ ಅಂಗಳದಲ್ಲಿ ಮಿಂಚಿದ ಮಾಜಿ ನೀಲಿತಾರೆ ಪೋಸ್ಟರ್: ಆಮೇಲೇನಾಯ್ತು?

author-image
Gopal Kulkarni
Updated On
ತಮಿಳುನಾಡಿನ ದೇವಸ್ಥಾನದ ಅಂಗಳದಲ್ಲಿ ಮಿಂಚಿದ ಮಾಜಿ ನೀಲಿತಾರೆ ಪೋಸ್ಟರ್: ಆಮೇಲೇನಾಯ್ತು?
Advertisment
  • ತಮಿಳುನಾಡಿನ ದೇವಸ್ಥಾನವೊಂದರಲ್ಲಿ ಮಿಯಾ ಖಲೀಫಾ ಪೋಸ್ಟರ್
  • ಹಿಂದೂ ದೇವತೆಗಳ ಜೊತೆ ಮಿಯಾ ಖಲೀಫಾ ಫೋಟೋ ಇರುವ ಕಟೌಟ್​
  • ಆದಿ ಪೆರಕ್ಕು ಹಬ್ಬದಂದೇ ಇಂತಹ ಹುಚ್ಚಾಟ ಮೆರೆದ ಕಿಡಿಗೇಡಿಗಳು

ಚೆನ್ನೈ: ಮಿಯಾ ಖಲೀಫಾ ಅಂದ್ರೆ ಲಂಪಟ ದೃಶ್ಯಗಳಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಕದಿಯುವ ಪಕ್ಕಾ ಹಾಟ್ ಬೆಡಗಿ. ಹದಿ ಹರೆಯದ ಹುಡುಗರ ಬೆಡ್​ರೂಮ್​ಗಳಲ್ಲಿ, ಬಾಯ್ಸ್ ಹಾಸ್ಟೆಲ್​ಗಳಲ್ಲಿ ಈ ಮಾಜಿ ಪೋರ್ನ್​ ಸ್ಟಾರ್ ನಟಿಯ ಪೋಸ್ಟರ್​ಗಳು ರಾರಾಜಿಸುವುದು ಕಾಮನ್. ಆದ್ರೆ ತಮಿಳುನಾಡಿನ ಹಬ್ಬವೊಂದರಲ್ಲಿ ದೇವಸ್ಥಾನದ ಎದುರುಗಡೆ ಮಿಯಾ ಖಲೀಫಾಳ ಪೋಸ್ಟರ್ ರಾರಾಜಿಸಿ ನಗೆಪಾಟಲಿಗೆ ಈಡಾದ ಘಟನೆ ನಡೆದಿದೆ.

ಇದನ್ನೂ ಓದಿ:ಮೈ ಮೇಲೆ ಸೀರೆ ಇರಲ್ಲ, ಆದ್ರೂ ರೇಪ್ ಆಗಿರಲ್ಲ; ಒಂದೇ ರೀತಿ 9 ಮಹಿಳೆಯರ ಹತ್ಯೆ; ಬೆಚ್ಚಿ ಬೀಳಿಸಿದ ಸ್ಯಾರಿ ಕಿಲ್ಲರ್‌!


">August 8, 2024

ಆದಿ ಪೆರುಕ್ಕು, ತಮಿಳುನಾಡಿನಲ್ಲಿ ಅತ್ಯಂತ ಶ್ರೇಷ್ಠ ಹಬ್ಬಗಳಲ್ಲಿ ಒಂದು. ಈ ವೇಳೆ ದೇವಸ್ಥಾನಕ್ಕೆ ತೆರಳಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಹಾಲು ಹಾಕಿ ಬರುವ ಪ್ರತೀತಿ ಇದೆ. ಇದು ಸಾಮಾನ್ಯವಾಗಿ ತಮಿಳು ತಿಂಗಳ 18ನೇ ದಿನದಂದು ನಡೆಯುತ್ತದೆ. ಇಂಥಹ ಪವಿತ್ರ ಹಬ್ಬದಂದು, ತಮಿಳುನಾಡಿನ ಕುರುವಿಮಲೈ ಎಂಬಲ್ಲಿಯ ಒಂದು ದೇವಸ್ಥಾನದಲ್ಲಿ ಕಿಡಿಗೇಡಿಗಳು ಮಿಯಾ ಖಲೀಫಾ ಭಾವಚಿತ್ರವಿರುವ ಕಟೌಟ್​ನನ್ನು ನಿಲ್ಲಿಸಿ ವಿವಾದಕ್ಕೆ ಕಾರಣವಾಗಿದ್ದಾರೆ. ಈ ಹಬ್ಬದಂದು ಸಾಮಾನ್ಯವಾಗಿ ಸಾವಿರಾರು ಜನ ದೇವಸ್ಥಾನಕ್ಕೆ ಭೇಟಿ ನೀಡಿ ಹಾಲು ಎರೆದು ಬರುತ್ತಾರೆ. ಅಂತಹ ದೇವಸ್ಥಾನದಲ್ಲಿ ಹಿಂದೂ ದೇವತೆಗಳ ಫೋಟೋದೊಂದಿಗೆ ಮಿಯಾ ಖಲೀಫಾ ಹಾಲಿನ ಬಿಂದಿಗೆಯನ್ನು ತಲೆ ಮೇಲೆ ಹಿಡಿದುಕೊಂಡಂತಹ ಫೋಟೋ ಹಾಕಿ ವಿವಾದ ಸೃಷ್ಟಿಸಿದ್ದಾರೆ. ಕೊನೆಗೆ ಸ್ಥಳೀಯ ಪೊಲೀಸರು ಬಂದು ಆ ಕಟೌಟನ್ನು ತೆರವುಗೊಳಿಸಿದ ಪರಿಸ್ಥಿತಿ ಕೈ ಮೀರದಂತೆ ನೋಡಿಕೊಂಡು ಮುನ್ನೆಚ್ಚರಿಕೆ ಮೆರೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment