/newsfirstlive-kannada/media/post_attachments/wp-content/uploads/2024/08/RCB-1-1.jpg)
ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಮಾಜಿ ಆಟಗಾರ ಶಹಬಾಜ್​​ ಅಹ್ಮದ್​​ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವೈದ್ಯೆ ಶೈಸ್ತಾ ಅಮೀನ್​ ಅವರನ್ನು ವರಿಸಿದ್ದಾರೆ. ಆ ಮೂಲಕ ಹೊಸ ಬಾಳ ಪ್ರಯಾಣ ಶುರು ಮಾಡಿದ್ದಾರೆ.
ಶಹಬಾಜ್​​ ಅಹ್ಮದ್​​ ಆಫ್​ ಸ್ಪಿನ್ನರ್​ ಆಗಿದ್ದು, ಆರ್​ಸಿಬಿಯ ಮಾಜಿ ಆಟಗಾರರಾಗಿ ಗುರುತಿಸಿಕೊಂಡಿದ್ದರು. ಬೆಂಗಳೂರು ತಂಡದಲ್ಲಿ ಆಡುವ ಮೂಲಕ ಐಪಿಎಲ್​ನಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದರು. ಆರ್​ಸಿಬಿ ಬಳಿಕ ಶಹಬಾಜ್​​ ಅಹ್ಮದ್​​ ಹೈದರಾಬಾದ್​​ ಪಾಲಾದರು. ಐಪಿಎಲ್​ನಲ್ಲಿ ಗುರುತಿಸಿಕೊಂಡ ಕಾರಣ 2022ರಲ್ಲಿ ಭಾರತೀಯ ಕ್ರಿಕೆಟ್​​ ತಂಡಕ್ಕೆ ಭಡ್ತಿ ಪಡೆದರು
ಶಹಬಾಜ್​​ ಅಹ್ಮದ್​​ ಮೂಲತಃ ಹರಿಯಾಣದವರು ಆದರೆ ಬಂಗಾಳದಲ್ಲಿ ವಾಸಿಸುತ್ತಿದ್ದಾರೆ. ಎಂಜಿನಿಯರಿಂಗ್​ ಪದವಿ ಪೂರ್ಣಗೊಳಿಸಿದ್ದಾರೆ. 29 ವರ್ಷದ ಅಹ್ಮದ್ ವೈದ್ಯೆ ಜೊತೆಗೆ ವಿವಾಹಬಂಧಿಯಾಗಿದ್ದಾರೆ. ಇಂದು ಹರಿಯಾಣದಲ್ಲಿ ಅವರ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ