Advertisment

ಇಬ್ಬರಿಗೆ ಕೈ ಕೊಟ್ಟು 3ನೇ ಮದುವೆ.. ಕುಮಾರನ ಕಲ್ಯಾಣದಲ್ಲಿ ಮಾಜಿ ಪತ್ನಿಯರ ಗಲಾಟೆ; ಏನಿದರ ಹಿನ್ನೆಲೆ?

author-image
admin
Updated On
ಇಬ್ಬರಿಗೆ ಕೈ ಕೊಟ್ಟು 3ನೇ ಮದುವೆ.. ಕುಮಾರನ ಕಲ್ಯಾಣದಲ್ಲಿ ಮಾಜಿ ಪತ್ನಿಯರ ಗಲಾಟೆ; ಏನಿದರ ಹಿನ್ನೆಲೆ?
Advertisment
  • ಮೊದಲ ಪತ್ನಿ ಜೊತೆ ನನಗೂ ಮೋಸ ಮಾಡಿದ್ದಾನೆ ಎಂದ ಮಹಿಳೆ!
  • ನನಗೆ ಎರಡು ಮಕ್ಕಳು ಕೊಟ್ಟು ಈಗ ನನ್ನ ಮಕ್ಕಳೇ ಅಲ್ಲ ಎನ್ನುತ್ತಾರೆ
  • ನನ್ನ ಗಂಡ ತುಂಬಾ ಜನರಿಗೆ ಮೋಸ ಮಾಡಿದ್ದಾರೆ ಅಂತ ಆರೋಪ

3ನೇ ಮದುವೆಗೆ ತಯಾರಿ ನಡೆಯುತ್ತಿದ್ದಾಗ ಕಲ್ಯಾಣ ಮಂಟಪಕ್ಕೆ ಇಬ್ಬರು ಮಾಜಿ ಪತ್ನಿಯರು ಎಂಟ್ರಿ ಕೊಟ್ಟ ವಿಚಿತ್ರ ಘಟನೆ ವಿಜಯನಗರ ಜಿಲ್ಲೆಯ ಬಿಕ್ಕಿಮಟ್ಟಿ ತಾಂಡದಲ್ಲಿ ನಡೆದಿದೆ.

Advertisment

ಕುಮಾರ್ ನಾಯ್ಕ್ ಎಂಬುವರ ಮದುವೆಗೆ ಬಂದು ಮೊದಲ ಪತ್ನಿ ಗಲಾಟೆ ಮಾಡಿದ್ರೆ ನನಗೂ ಮೋಸ ಮಾಡಿದ್ದಾನೆ ಎಂದು ಮತ್ತೊಬ್ಬ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ.

publive-image

ಇಬ್ಬರು ಮಹಿಳೆಯರ ಗಲಾಟೆಗೆ ಮದುವೆ ಮನೆಯಲ್ಲಿ ಸಂಬಂಧಿಕರು ಸುಸ್ತಾಗಿದ್ದು, ಕೊನೆಗೆ ಕುಮಾರ್ ನಾಯ್ಕ್‌ ಅವರ 3ನೇ ಮದುವೆ ನಿಂತೇ ಹೋಗಿದೆ.

ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಯುವತಿಯರ ಖಾಸಗಿ ವಿಡಿಯೋ ತೆಗೆದು ಅಪ್ಲೋಡ್; ವಿಕೃತ ಕಾಮಿಯ ಕಳ್ಳಾಟ! 

Advertisment

ಮಹಿಳೆಯರ ಆರೋಪ ಏನು?
18 ವರ್ಷದ ಹಿಂದೆ ಕುಮಾರ್​ನಾಯ್ಕ್​ ಅವರಿಗೆ ಮೊದಲ ಮದುವೆ ಆಗಿದೆ. 2ನೇ ಮದುವೆ ಆಗುತ್ತಿದ್ದ ಸುದ್ದಿ ಕೇಳಿ ಮೊದಲ ಪತ್ನಿ ಮದುವೆ ನಿಲ್ಲಿಸಲು ಬಂದಿದ್ದಾರೆ.

publive-image

ಕುಮಾರ್ ನಾಯ್ಕ್ ಅವರು ಮೊದಲ ಪತ್ನಿಯಿಂದ ಡಿವೋರ್ಸ್​ಗೆ ಅಪ್ಲೈ ಮಾಡಿ ಡಿವೋರ್ಸ್ ಕೂಡ ಪಡೆದಿದ್ದರು. ಆದರೆ ಡಿವೋರ್ಸ್​ ವಿರುದ್ಧ ಕುಮಾರ್​ ಮೊದಲನೇ ಪತ್ನಿ ತಡೆಯಾಜ್ಞೆ ತಂದಿದ್ದಾರೆ.

publive-image

ಮದುವೆ ಮನೆಗೆ ಬಂದ ಮೊದಲ ಪತ್ನಿ, ನನ್ನ ಗಂಡ ತುಂಬಾ ಜನರಿಗೆ ಮೋಸ ಮಾಡಿದ್ದಾರೆ ಅಂತ ಗಂಭೀರ ಆರೋಪ ಮಾಡಿದ್ದಾರೆ. ಮೊದಲ ಪತ್ನಿ ಗಲಾಟೆ ಮಾಡುತ್ತಿರುವಾಗಲೇ ಎರಡನೇ ಮಹಿಳೆ ಕೂಡ ಎಂಟ್ರಿ ಕೊಟ್ಟಿದ್ದಾರೆ.

Advertisment

publive-image

ಕುಮಾರ್ ನಾಯ್ಕ್ ನನ್ನ ಜೊತೆಗಿರುತ್ತೇನೆ ಎಂದು ನಂಬಿಸಿ ಮೋಸ ಮಾಡಿದ್ದಾನೆ. ನನಗೆ ಎರಡು ಮಕ್ಕಳು ಕೊಟ್ಟು ಇದೀಗ ನನ್ನ ಮಕ್ಕಳೇ ಅಲ್ಲ ಎನ್ನುತ್ತಾರೆ. ಕೋರ್ಟ್​ನಲ್ಲಿ DNA ಪರೀಕ್ಷೆಗೆ ಮನವಿ ಮಾಡಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ. ಇಬ್ಬರು ಮಹಿಳೆಯರ ಗಲಾಟೆಗೆ ಮದುವೆಗೆ ಬಂದ ಜನ, ಸಂಬಂಧಿಕರು ಫುಲ್ ಸುಸ್ತಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment