/newsfirstlive-kannada/media/post_attachments/wp-content/uploads/2024/08/TRAIN.jpg)
ದಾವಣಗೆರೆ: ಎಷ್ಟೋ ವರ್ಷಗಳಿಂದ ರೈಲ್ವೆ ಪರೀಕ್ಷೆ ಹಿಂದಿ ಮತ್ತು ಇಂಗ್ಲೀಷ್ನಲ್ಲೇ ನಡೆಸಲಾಗುತ್ತಿದೆ. ಇದರ ಪರಿಣಾಮ ಕನ್ನಡಿಗರು ರೈಲ್ವೆ ಪರೀಕ್ಷೆ ತೇರ್ಗಡೆ ಹರಸಾಹಸ ಮಾಡಬೇಕಾದ ಪರಿಸ್ಥಿತಿ ಇತ್ತು. ಬಹುತೇಕರಿಗೆ ಹಿಂದಿ, ಇಂಗ್ಲೀಷ್ ಅರ್ಥವೇ ಆಗಲ್ಲ. ಹಾಗಾಗಿ ರೈಲ್ವೆ ಕೆಲಸ ತೆಗೆದುಕೊಳ್ಳಬೇಕು ಅನ್ನೋ ಕನಸು ಕನಸಾಗಿಯೇ ಉಳಿಯುತ್ತಿತ್ತು. ಹೀಗಿರುವಾಗ ಕನ್ನಡಿಗರಿಗೆ ಕೇಂದ್ರ ಸಚಿವ ವಿ ಸೋಮಣ್ಣ ಗುಡ್ನ್ಯೂಸ್ ಕೊಟ್ಟಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾತಾಡಿದ ವಿ. ಸೋಮಣ್ಣ ಅವರು, ಇನ್ನು ಮುಂದೆ ಕನ್ನಡದಲ್ಲೇ ರೈಲ್ವೆ ಪರೀಕ್ಷೆ ನಡೆಸುವುದಾಗಿ ಹೇಳಿದ್ದಾರೆ. ರೈಲ್ವೆ ಇಲಾಖೆಯಲ್ಲಿ ಒಟ್ಟು 12 ಲಕ್ಷ ಹುದ್ದೆಗಳಿವೆ. ಸುಮಾರು 15 ಲಕ್ಷ ಜನ ಪಿಂಚಣಿ ಪಡೆಯುತ್ತಿದ್ದಾರೆ. ಖಾಲಿಯಿರೋ 16,000 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದ್ದೇನೆ. ಈ ಪರೀಕ್ಷೆಯನ್ನು ಕನ್ನಡದಲ್ಲೇ ಬರೆಯಲು ಆದೇಶ ನೀಡಲಾಗಿದೆ ಎಂದರು.
ಕನ್ನಡಿಗರು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದು, ಇದಕ್ಕೆ ಅಗತ್ಯವಿರೋ ಬೇಕಾದಷ್ಟು ಪುಸ್ತಕಗಳು ಸಿಗುತ್ತವೆ. ಎಲ್ಲರೂ ಉಪಯೋಗ ಮಾಡಿಕೊಳ್ಳಿ. ಮುಂದೆ ಇನ್ನೂ ಖಾಲಿ ಇರುವ 46,000 ಹುದ್ದೆಗಳ ಭರ್ತಿ ಮಾಡಲಾಗುತ್ತದೆ ಎಂದರು.
ಇದನ್ನೂ ಓದಿ:‘ಸಿಎಂ ರಾಜೀನಾಮೆ ಅಗತ್ಯವಿಲ್ಲ’ ಎಂದಿದ್ದೇಕೆ ಜಿಟಿಡಿ? ಈ ಹೇಳಿಕೆ ಹಿಂದಿನ 5 ಸೀಕ್ರೆಟ್ ರಿವೀಲ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ