/newsfirstlive-kannada/media/post_attachments/wp-content/uploads/2024/10/MOBILE-USEING.jpg)
ಟಿವಿ, ಮೊಬೈಲ್ ಬಂದ್ಮೇಲೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರು ಮೊಬೈಲ್ನಲ್ಲಿಯೇ ದಿನ ಕಳೆಯುತ್ತಾರೆ. ಅದರಲ್ಲೂ ಮಕ್ಕಳು, ಯುವಕರು ಕಿರುಚಿತ್ರ, ರಿಲ್ಸ್ನಲ್ಲಿ ಮುಳುಗಿ ಹೋಗಿರ್ತಾರೆ. ಗಂಟೆಗಟ್ಟಲೇ ಫೋನ್ ಮತ್ತು ಲ್ಯಾಪ್ಟಾಪ್ನಲ್ಲಿ ಮಗ್ನರಾಗಿರೋದ್ರಿಂದ ನಿಮ್ಮ ಆರೋಗ್ಯದ ಮೇಲೆ ಗಂಭೀರ ಪೆಟ್ಟು ಬೀಳುತ್ತದೆ ಹುಷಾರಾಗಿರಿ!
ಅತಿಯಾದ ಸ್ಕ್ರೀನ್ ಟೈಮ್ ಮಕ್ಕಳ ಆರೋಗ್ಯದ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ. ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಮನರಂಜನೆಗಾಗಿ ಫೋನ್‌ಗಳನ್ನು ಹೆಚ್ಚು ಬಳಸ್ತಾರೆ. ಆರೋಗ್ಯ ವರದಿಯ ಪ್ರಕಾರ.. ಸ್ಕ್ರೀನ್ ಟೈಮ್ ಮಕ್ಕಳ ಆರೋಗ್ಯಕ್ಕೆ ಮಾರಕ. ಮಕ್ಕಳ ನಿದ್ರೆಯ ಮೇಲೆ, ಕಣ್ಣಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿದ್ರೆಯು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಮತ್ತಷ್ಟು ಹಾನಿಯನ್ನುಂಟುಮಾಡುತ್ತದೆ.
ಸ್ಕ್ರೀನ್ ಟೈಮ್ ತೊಂದರೆ..
- ಪರದೆಯಿಂದ ಹೊರಸೂಸುವ ನೀಲಿ ಬೆಳಕು ಕಣ್ಣುಗಳಿಗೆ ಅಪಾಯಕಾರಿ. ಇದರಿಂದ ದೃಷ್ಟಿ ಕಡಿಮೆಯಾಗುತ್ತದೆ.
- ನಿದ್ರೆಯ ಮೇಲೆ ಪರಿಣಾಮ ಬೀರುವ ಮೆಲಟೋನಿನ್ ಹಾರ್ಮೋನ್ (Melatonin Hormone) ಉತ್ಪಾದನೆ ಕಮ್ಮಿ ಆಗುತ್ತದೆ.
- ಕಡಿಮೆ ನಿದ್ರೆ ದೈನಂದಿನ ಜೀವನಶೈಲಿಯ ಮೇಲೆ ಪರಿಣಾಮ ಬೀರುತ್ತದೆ.
- ಫೋನ್‌ನ ಅತಿಯಾದ ಬಳಕೆಯಿಂದಾಗಿ ಮಕ್ಕಳು ದೈಹಿಕ ಚಟುವಟಿಕೆ ಮಾಡುವುದಿಲ್ಲ. ಇದು ಅವರ ದೈಹಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.
ನಿಯಂತ್ರಣಕ್ಕೆ ತರೋದು ಹೇಗೆ..?
- ಫೋನ್ ಬಳಸಲು ಸಮಯವನ್ನು ನಿಗದಿಪಡಿಸಿ. ನಿಮ್ಮ ಫೋನ್ ಅನ್ನು ಸಮಯಕ್ಕೆ ಮಾತ್ರ ಬಳಸಿ.
- ಹೊರಾಂಗಣ ಆಟಗಳನ್ನು ಆಡಲು ಪ್ರೇರೇಪಿಸಿ. ಹೀಗೆ ಮಾಡುವುದರಿಂದ ಫೋನ್ ಬಳಕೆಯಿಂದ ಗಮನ ಬೇರೆಡೆಗೆ ತಿರುಗಿಸಲಾಗುತ್ತದೆ
- ಮಕ್ಕಳೊಂದಿಗೆ ಸಂವಹನ ನಡೆಸಿ ಮತ್ತು ಅವರಿಗೆ ಕಥೆಗಳನ್ನು ಹೇಳಿ
- ದೂರದರ್ಶನ, ಕಂಪ್ಯೂಟರ್ ಮತ್ತು ವಿಡಿಯೋ ಗೇಮ್‌ಗಳಿಗೆ ಸಮಯ ಮಿತಿಯನ್ನು ಇರಿಸಿ. ದೀರ್ಘಕಾಲ ಬ್ಯುಸಿ ಆಗಿರಲು ಬಿಡಬೇಡಿ
- ಮಕ್ಕಳಿಗೆ ದೈಹಿಕ ಚಟುವಟಿಕೆ ಮತ್ತು ವ್ಯಾಯಾಮ ಮಾಡಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ