ನಕಲಿ ಮದ್ಯಕ್ಕೆ ಹಾಟ್​ಸ್ಪಾಟ್ ಆಯಿತಾ ಸಕ್ಕರೆನಾಡು ಮಂಡ್ಯ.. ಮನೆಯಲ್ಲೇ ತಯಾರಾಗ್ತಿತ್ತು ಸರಾಯಿ

author-image
Bheemappa
Updated On
ನಕಲಿ ಮದ್ಯಕ್ಕೆ ಹಾಟ್​ಸ್ಪಾಟ್ ಆಯಿತಾ ಸಕ್ಕರೆನಾಡು ಮಂಡ್ಯ.. ಮನೆಯಲ್ಲೇ ತಯಾರಾಗ್ತಿತ್ತು ಸರಾಯಿ
Advertisment
  • ಮದ್ಯಪ್ರಿಯರೇ ಬಾಟಲ್ ಅಸಲಿ- ನಕಲಿಯೇ ಎಂದು ಪರೀಕ್ಷಿಸಿ
  • ಮನೆಯಲ್ಲಿ ಮದ್ಯ ತಯಾರಿಕೆ, ಅಬಕಾರಿ ಅಧಿಕಾರಿಗಳು ಶಾಕ್
  • ಸರ್ಕಾರದ ಬಾಟಲಿಯಂತೆ ಇರುತ್ತವೆ, ಆದರೆ ಸರ್ಕಾರದ್ದವಲ್ಲ

ಮದ್ಯ ಅನ್ನೋದೆ ಆರೋಗ್ಯಕ್ಕೆ ಹಾನಿಕಾರ. ಆದ್ರೆ ಆ ಮದ್ಯವನ್ನೇ ನಕಲಿ ಮಾಡುವ ಗ್ಯಾಂಗ್ ಸಕ್ಕರೆ ನಾಡು ಮಂಡ್ಯದಲ್ಲಿ ಆಕ್ಟೀವ್ ಆಗಿದೆ. ಇದಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳೆ ಬೆಚ್ಚಿಬಿದ್ದಿದ್ದಾರೆ. ಆ ಮೂಲಕ ಕುಡುಕರು ಒಂದು ಕ್ಷಣ ಯೋಚಿಸಿ ಮದ್ಯ ಸೇವಿಸುವ ಪರಿಸ್ಥಿತಿ ಎದುರಾಗಿದೆ. ಮದ್ಯಪ್ರಿಯರು ಇತ್ತ ಗಮನಿಸಿ.

ಮದ್ಯ ತಯಾರಿಸುವ ಯಂತ್ರಗಳ ಮೂಲಕ ಬ್ರ್ಯಾಂಡೆಂಡ್ ಎಣ್ಣೆ ಬಾಟಲ್​ಗೆ ಕಚ್ಚಾ ವಸ್ತುಗಳು ಸೇರಿಸುತ್ತಾರೆ. ಸಿಲ್ವರ್ ಕಪ್ ಕಂಪನಿಯ ಮದ್ಯದ ಪ್ಯಾಕೆಟ್​​ಗಳಿಂದ ಪ್ಯಾಕಿಂಗ್ ಮಾಡುತ್ತಾರೆ. ಇದು ನಿಜವಾಗಿಯು ಮದ್ಯ ತಯಾರಿಸುವ ಫ್ಯಾಕ್ಟರಿ ಅಲ್ಲವೇ ಅಲ್ಲ, ಇದು ಎಲ್ಲ ನಕಲಿ ಮದ್ಯದ ಮಾಫಿಯಾ. ಮಂಡ್ಯದ ಹೊರವಲಯದಲ್ಲಿ ಇರುವ ಬಿ.ಟಿ ಲಲಿತಾ ನಾಯಕ್ ಬಡಾವಣೆಯಲ್ಲಿರುವ ಮನೆಯೊಂದರಲ್ಲಿ ಇದೆಲ್ಲಾ ಮಾಡಲಾಗುತ್ತಿದೆ. ಗ್ಯಾಂಗ್​ವೊಂದು ಬಾಡಿಗೆಗೆ ಅಂತ ಮನೆ ಪಡೆದು ಯಾರ ಭಯವೂ ಇಲ್ಲದೇ ನಕಲಿ ಮದ್ಯ ತಯಾರಿಸುತ್ತಿದ್ದರು. ಸದ್ಯ ಇದರ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

publive-image

ಬ್ರ್ಯಾಂಡೆಡ್ ಹೆಸರಲ್ಲಿ ಇಲ್ಲಿ ತಯಾರಾಗುತ್ತೆ ನಕಲಿ ಮದ್ಯ!

ಮಂಡ್ಯದ ಬಿ.ಟಿ.ಲಲಿತಾನಾಯಕ್ ಬಡಾವಣೆಯಲ್ಲಿ ನಕಲಿ ಮದ್ಯ ತಯಾರಿಸುವ ಜಾಲ ಬೆಳಕಿಗೆ ಬಂದಿದೆ. ಮಂಡ್ಯದ ಕಾಮದೇನು ವೈನ್ ಸ್ಟೋರ್ ಮೇಲೆ ದಾಳಿ ಮಾಡಿದ್ದ ವೇಳೆ ಬ್ರ್ಯಾಂಡೆಡ್ ಮದ್ಯಗಳನ್ನ ನಕಲಿ ಮಾಡಿ ಮಾರಾಟ ಮಾಡುತ್ತಿದ್ದ ವಿಚಾರ ಗೊತ್ತಾಗಿರುತ್ತೆ. ಪಾರ್ವತಮ್ಮ ಎಂಬ ಮಹಿಳೆ ಮನೆಯೊಂದನ್ನ ಬಾಡಿಗೆಗೆ ಪಡೆದಿದ್ದರು. ತಮ್ಮ ಸಂಬಂಧಿಕರು ಇಲ್ಲಿ ಇರ್ತಾರೆ ಅಂತ ಹೇಳಿದ್ದರು. ಅವರ ಮಾತನ್ನ ನಂಬಿ ಮನೆ ಬಾಡಿಗೆ ಕೊಟ್ಟ ಮಾಲೀಕರಿಗೆ ಅಬಕಾರಿ ಅಧಿಕಾರಿಗಳ ದಾಳಿಯಿಂದ ಶಾಕ್ ಆಗಿದೆ. ಬಾಡಿಗೆ ಪಡೆದವರು ಯಾರು ಇಲ್ಲದ್ದರಿಂದ ಮನೆ ಮಾಲೀಕರ ಸಹಕಾರ ಪಡೆದು ಮನೆ ಓಪನ್ ಮಾಡಿದವರು ಒಂದು ಕ್ಷಣ ಬೆಚ್ಚಿದ್ದಾರೆ. ಮನೆಯಲ್ಲಿಯೇ ನಕಲಿ ಮದ್ಯ ತಯಾರಾಗಿರೋದು. ಮತ್ತಷ್ಟು ನಕಲಿ ಮದ್ಯ ತಯಾರಿಕೆಗೆ ಸಿದ್ದವಾಗಿದ್ದ ಕಚ್ಚಾ ಸಾಮಾಗ್ರಿಗಳು, ಯಂತ್ರಗಳನ್ನ ಕಂಡು ದಂಗಾಗಿದ್ದಾರೆ.

ಭೋವಿ ಕಾಲೋನಿಯವರು ಪಾರ್ವತಮ್ಮ ಅಂತ ಹೇಳಿದರು. ಅಲ್ಲಿ ಸಂಬಂಧಿಕರು ಇರುತ್ತಿದ್ದರು. ಇಲ್ಲಿಯು ಅವರ ಸಹೋದರರು ಇರುತ್ತಿದ್ದರು. ಅವರ ಹೆಸರು ರಮೇಶ್ ಅಂತ ನಮಗೆ ಜಾಸ್ತಿ ಸಂಪರ್ಕ ಇರಲಿಲ್ಲ. ಈಗೀಗ ಕಾಣಿಸಿಕೊಳ್ಳುತ್ತಿದ್ದರು. ಮೂರು ತಿಂಗಳು ಮನೆ ಬಾಡಿಗೆ ಕೊಟ್ಟು. ಇವರು ಯಾರು ಅಷ್ಟು ಗೊತ್ತಿಲ್ಲ. ಪಾರ್ವತಮ್ಮ ಅನ್ನೋರು ಗೊತ್ತು.

ಚಿಕ್ಕಮಾದೇಗೌಡ, ಮನೆ ಮಾಲೀಕರು

ಇನ್ನು ಅಧಿಕಾರಿಗಳ ದಾಳಿ ವೇಳೆ 40 ಸಾವಿರ ಮೌಲ್ಯದ 590 ಲೀಟರ್ ಸ್ಪಿರೀಟ್. 30 ಲೀಟರ್ ನಕಲಿ ಮದ್ಯ, 15 ಲಕ್ಷ ಮೌಲ್ಯದ ವಿವಿಧ ಮಾದರಿಯ ಮದ್ಯದ ಸ್ಯಾಚೆಟ್, 15 ಲಕ್ಷ ಮೌಲ್ಯದ ಯಂತ್ರಗಳು ಪತ್ತೆಯಾಗಿವೆ. 35 ಲೀಟರ್​​ನಷ್ಟು ನಕಲಿ ಸಿಲ್ವರ್ ಕಪ್ ಮದ್ಯದ ಪ್ಯಾಕೆಟ್​​ಗಳಲ್ಲದೇ ಬ್ರ್ಯಾಂಡೆಂಡ್ ಕಂಪನಿಗಳ ಲೇಬಲ್​ಗಳು ಪತ್ತೆಯಾಗಿದೆ‌. ಇದಿಷ್ಟೇ ಅಲ್ಲ ಕರ್ನಾಟಕ ಸರ್ಕಾರದ ಲೋಗೋ, ಅಬಕಾರಿ ಇಲಾಖೆಯ ಚಿಹ್ನೆ, ಸಂಖ್ಯೆಯೂ ದುರ್ಬಳಕೆಯಾಗಿದೆ‌. ಇದರಿಂದ ಆ ಅಕ್ರಮ ಮದ್ಯ ತಯಾರಿಕೆ ಹಿಂದೆ ದೊಡ್ಡ ಜಾಲವೇ ಇದೆ ಎಂಬ ಅನುಮಾನ ಮೂಡಿದೆ.

ಇದನ್ನೂ ಓದಿ:ಇದು ದೀಪಾವಳಿ, ದಸರಾ ಅಲ್ಲ ‘ಡಿಚ್ಚಿ ಹಬ್ಬ’.. ಅತ್ತಿಗೆ-ನಾದಿನಿ ಡಿಕ್ಕಿ ಹೊಡೆಯುವುದು ಏಕೆ?

publive-image

ಇದರ ಹಿಂದೆ ಯಾರು ಯಾರು ಇದ್ದಾರೆ ಎಂದು ತನಿಖೆ ಆಗಬೇಕು. ಈಗ ಉತ್ಪಾದನೆ ಆಗುತ್ತಿರುವುದು ಸಿಕ್ಕಿದೆ. ತನಿಖೆಯಿಂದ ಇನ್ನಷ್ಟು ಮಾಹಿತಿ ಹೊರ ಬರಲಿದೆ.

ಸೋಮಶೇಖರ್, ಅಬಕಾರಿ ಉಪ ಅಧೀಕ್ಷಕ

ಮದ್ಯವೇ ಆರೋಗ್ಯಕ್ಕೆ ಹಾನಿಕರ ಎಂಬುದು ಪದೇ ಪದೇ ಪ್ರೂವ್ ಆಗುತ್ತಿದೆ. ಇದರ ನಡುವೆ ನಕಲಿ ಮದ್ಯ ಕುಡಿದವರ ಪಾಡೇನು ಎಂಬ ಪ್ರಶ್ನೆ ಮೂಡುತ್ತಿದೆ‌. ಇನ್ನೂ ಈ ಜಾಲದಲ್ಲಿ ಯಾರೆಲ್ಲ ಇದ್ದಾರೆ, ಎಷ್ಟು ದಿನದಿಂದ ಈ ದಂಧೆ ಮಾಡುತ್ತಿದ್ದಾರೆ ಎಂದು ತನಿಖೆಯಿಂದ ಹೊರಬರಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment