/newsfirstlive-kannada/media/post_attachments/wp-content/uploads/2024/07/puttakana2.jpg)
ಯಾರೂ ಊಹಿಸಲಾರದ ರೀತಿಯಲ್ಲಿ ತಿರುವು ಹೊತ್ತು ತರುತ್ತಿದೆ ಪುಟ್ಟಕ್ಕನ ಮಕ್ಕಳು ಸೀರಿಯಲ್. ಜೈಲಿನಿಂದ ಹೊರಬರುತ್ತಿರೋ ಸಿಂಗಾರಮ್ಮ ಸಹನಾ ಕಣ್ಣಿಗೆ ಬಿದ್ದಿದ್ದಾಳೆ. ಹಳ್ಳಿಯಿಂದ ಪಟ್ಟಣ ಸೇರಿರೋ ಸಹನಾ ದುಡಿದು ಜೀವನ ಸಾಗಿಸುತ್ತಿದ್ದಾಳೆ. ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುವ ಹೋರಾಟ ಮಾಡ್ತಿದ್ದಾಳೆ.
ಇದನ್ನೂ ಓದಿ: ಧ್ರುವ ಸರ್ಜಾ ಅವರ ಜಿಮ್ ಟ್ರೈನರ್ ಮೇಲಿನ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್.. ಅಸಲಿ ವಿಚಾರ ಬಯಲು..!
ಸೌಮ್ಯವಾಗಿದ್ರೆ ಯಾರು ಕ್ಯಾರೆ ಅನ್ನಲ್ಲ. ಅದೇ ತಿರುಗಿಬಿದ್ರೆ ಕಾಲ ಕೆಳಗಿರುತ್ತೆ ದುನಿಯಾ ಅನ್ನೋದ ಸಹನಾಗೆ ತುಂಬಾ ಚನ್ನಾಗಿ ಅರಿವಾಗಿದೆ. ಪುಟ್ಟಕ್ಕನನ್ನ ಬಗ್ಗೆ ಆಡಿಕೊಳ್ತಿರೋ ಜನರಿಗೆ ಸಾಧನೆ ಮೂಲಕ ಉತ್ತರ ಕೊಡ್ಬೇಕು ಅಂತಾ ನಿರ್ಧಾರ ಮಾಡಿರೋ ಸಹನಾ. ತನ್ನವರಿಂದ ಮರೆಯಾಗಿ ಪಟ್ಟಣದಲ್ಲಿ ಬದುಕಿನ ಹೊರಾಟ ನಡಿಸಿದ್ದಾಳೆ. ಬೀದಿಬದಿ ಚಿಕ್ಕ ತಳ್ಳುವ ಗಾಡಿಯಲ್ಲಿ ಹೊಟೇಲ್ ನಡಿಸ್ತಿರೋ ಸಹನಾಗೆ ಜೈಲಿನಲ್ಲಿರೋ ಖೈದಿಗಳಿಗೆ ಊಟ ಸಪ್ಲೈ ಮಾಡೋ ಆರ್ಡರ್ ಸಿಕ್ಕಿದೆ. ಜೈಲಿನಲ್ಲಿ ಸಹನಾಗೆ ಶಾಕ್ ಆಗೋ ಅಚ್ಚರಿ ಘಟನೆ ಜರುಗಿದೆ.
ಜೈಲಿನಿಂದ ಆಗತಾನೆ ಬಿಡುಗಡೆ ಆಗಿರೋ ಖೈದಿನ ನೋಡಿ ದಿಗ್ಭ್ರಾಂತಗೊಂಡಿದ್ದಾಳೆ ಸಹನಾ. ಅದು ಬೇರೆ ಯಾರು ಅಲ್ಲ ಬಂಗಾರಮ್ಮ.. ಅಲ್ಲ.. ಅಲ್ಲ ಬಂಗಾರಮ್ಮನ ಥರನೇ ಇರೋ ಸಿಂಗಾರಮ್ಮ. ಹೌದು, ಬಂಗಾರಮ್ಮನ ಪಾತ್ರ ಮಾಡ್ತಿರೋ ನಟಿ ಮಂಜು ಭಾಷಿಣಿ ಮತ್ತೊಂದು ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸದಾ ನ್ಯಾಯಕ್ಕೆ ತಲೆಬಾಗೋ ಬಾಂಗರಮ್ಮನ ಗತ್ತು ಗಾಂಭಿರ್ಯವನ್ನ ವೀಕ್ಷಕರು ನೋಡಿದ್ದಾರೆ.
ಇನ್ಮುಂದೆ ಡೊಂಟ್ ಕೇರ್ ಅನ್ನೋ ಅನ್ಯಾಯದ ಮಾರ್ಗದಲ್ಲಿರೋ ಸಿಂಗಾರಮ್ಮನ ಅವತಾರದಲ್ಲೂ ಮಂಜುಭಾಷಿಣಿ ಅವರ ಅಭಿನಯವನ್ನ ಕಣ್ತುಂಬಿಕೊಳ್ಳಬಹುದು. ಒಟ್ಟಿನಲ್ಲಿ ಸ್ನೇಹಾ ಐಎಎಸ್ ಆಫೀಸರ್ ಆಗ್ತಿರೋ ಬೆನ್ನಲ್ಲೇ ಸಿಂಗಾರಮ್ಮನ ಎಂಟ್ರಿ ಆಗ್ತಿದೆ. ಬಂಗಾರಮ್ಮ ಸಿಂಗಾರಮ್ಮ ಅದಲು ಬದಲಿನ ಆಟ ಥ್ರಿಲ್ ಕೊಡೋದ್ರಲ್ಲಿ ಡೌಟೇ ಇಲ್ಲ. ಎಂಟರ್ಟೈನ್ಮೆಂಟ್ ಕಿಕ್ ಡಬಲ್ ಆಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ