/newsfirstlive-kannada/media/post_attachments/wp-content/uploads/2024/08/Techie-vipin.jpg)
ಕೊಡಿಗೇಹಳ್ಳಿ ಟೆಕ್ಕಿ ಮಿಸ್ಸಿಂಗ್ ಪ್ರಕರಣ ಸಂಬಂಧ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಗಂಡನನ್ನ ಹುಡುಕಿಕೊಡಿ ಎಂದು ಕಣ್ಣೀರಿಡುತ್ತಿದ್ದ ಪತ್ನಿಗೆ ಆಕೆಯ ಪತಿಯೇ ಉತ್ತರ ನೀಡಬೇಕಿದೆ. ಸದ್ಯ ಆತ ಮಿಸ್ಸಿಂಗ್ ಆಗಿರಲಿಲ್ಲ. ಅಸಲಿ ಸಂಗತಿಯೇ ಬೇರೆ ಅದರ ಕುರಿತಂತೆ ಮಾಹಿತಿ ಇಲ್ಲಿದೆ.
ಇದೇ ತಿಂಗಳು ಆರನೇ ತಾರೀಕು ಟೆಕ್ಕಿ ವಿಪುಲ್ ಗುಪ್ತಾ ಎಂಬಾತ ಮಿಸ್ಸಿಂಗ್ ಆಗಿದ್ದ. ಮನೆಯಿಂದ ಹೊರ ಹೋದವನು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದ. ಆಕೆಯ ಪತ್ನಿ ಕೂಡ ಪ್ರತಿದಿನ ಪತಿಯನ್ನ ಹುಡುಕಿಕೊಡಿ ಎಂದು ಗೋಗರೆಯುತ್ತಿದ್ದಳು. ಕೊನೆಗೆ ಅಸಲಿಯತ್ತು ಏನೆಂದು ತಿಳಿದುಬಂದಿದೆ.
ಆಕೆಗೆ 43 ಈತನಿಗೆ 34 ವಯಸ್ಸು
ವಿಪುಲ್ ಗುಪ್ತಾ ಹಾಗೂ ಪತ್ನಿ ಶ್ರೀಪರ್ಣ ದತ್ತ ಇಬ್ಬರೂ ವೃತ್ತಿಯಲ್ಲಿ ಟೆಕ್ಕಿಗಳು. ಇಬ್ಬರು ಮಕ್ಕಳೂ ಇದ್ದಾರೆ. ವಿಪುಲ್ ಇದ್ದಕ್ಕಿಂದಂತೆ ಮಿಸ್ಸಿಂಗ್ ಆಗಿದ್ದ ಹಿನ್ನಲೆ ಪ್ರತಿದಿನ ಫೇಸ್ ಬುಕ್ ಮೂಲಕ ಲೈವ್ ಬಂದು ಆತನನ್ನ ಹುಡುಕಿಕೊಡಿ ಎಂದು ಗೋಗರೆಯುತ್ತಿದ್ಲು. ಆತನ ಸಂಪೂರ್ಣ ಮಾಹಿತಿಯನ್ನ ಪೋಸ್ಟ್ ಮಾಡ್ತಿದ್ದಳು. ಕೊಡಿಗೇಹಳ್ಳಿ ಪೊಲೀಸರಿಗೂ ದೂರು ನೀಡಿ ಪೊಲೀಸರು ಸರಿಯಾಗಿ ವರ್ಕ್ ಮಾಡ್ತಿಲ್ಲ ಎಂದು ಆರೋಪ ಮಾಡಿದ್ದಳು. ಆದರೆ ಪೊಲೀಸರಿಗೆ ಅದಾಗಲೇ ಮೈಂಡ್ ವರ್ಕ್ ಆಗಿತ್ತು. ಇದು ಮಿಸ್ಸಿಂಗ್ ಅಲ್ಲ ಇಂಟನ್ಷನಲೀ ಆತ ಎಸ್ಕೇಪ್ ಆಗಿದ್ದ ಎಂದುನ ಅನುಮಾನ ಮೂಡಿತ್ತು.
ಇದನ್ನೂ ಓದಿ: 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯಲ್ಲಿ ಕನ್ನಡದ ಕಾಂತಾರ, ಕೆಜಿಎಫ್-2 ಕಮಾಲ್.. ಪ್ರಶಸ್ತಿಗಳ ಪಟ್ಟಿ ಇಲ್ಲಿದೆ!
/newsfirstlive-kannada/media/post_attachments/wp-content/uploads/2024/08/Vipin-Techhie.jpg)
ವಿಪುಲ್ ಹಾಗೂ ಶ್ರೀಪರ್ಣ ದತ್ತಾಗೆ ಸುಮಾರು ಹತ್ತು ವರ್ಷಗಳ ಏಜ್ ಗ್ಯಾಪ್ ಇದೆ. ಆಕೆಗೆ 43 ಈತನಿಗೆ 34 . ಶ್ರೀಪರ್ಣ ದತ್ತಾಳಿಗೆ ಇದು ಎರಡನೇ ಮದ್ವೆಯಂತೆ. ಏಜ್ ಗ್ಯಾಪ್ ಇದ್ದ ಹಿನ್ನಲೆ ಸಹಜವಾಗಿ ಹೊಂದಾಣಿಕೆ ಸಾಧ್ಯವಾಗದೇ ಇರಬಹುದು. ಆಕೆಯ ತೀವ್ರ ಒತ್ತಡದಿಂದಾಗಿ ಪೊಲೀಸರು ವಿಶೇಷ ತಂಡವನ್ನ ರಚನೆ ಮಾಡಿ ಟೆಕ್ಕಿಯ ಹುಡಯಕಾಟಕ್ಕೆ ಮುಂದಾಗಿದ್ದರು. ನಂತರ ಒಂದಷ್ಟು ಸಿಸಿಟಿವಿ ಹಾಗು ಟೆಕ್ನಿಕಲ್ ಎವಿಡೆನ್ಸ್ ಮೂಲಕ ವಿಪುಲ್ ಗುಪ್ತಾ ದೆಹಲಿಯ ನೋಯ್ಡಾದಲ್ಲಿ ಪತ್ತೆಯಾಗಿದ್ದಾನೆ.
ಪತ್ನಿಯ ಜೊತೆ ಹೋಗೋದಿಲ್ಲ ಎಂದು ಪತಿ ಹೈಡ್ರಾಮ
ಇನ್ನು ಆತನನ್ನ ವಿಚಾರಣೆ ನಡೆಸಿದಾಗ ಪೊಲೀಸ್ ಅಂದುಕೊಂಡಿದ್ದು ನಿಜವಾಗಿತ್ತು. ಆತ ಪತ್ನಿಯ ಕಾಟಕ್ಕೆ ಮನೆ ಬಿಟ್ಟು ಹೋಗಿದ್ದ. ಪತ್ನಿ ತನ್ನನ್ನ ಕಂಟ್ರೋಲ್ ಮಾಡ್ತಾಳೆ ತಾನೇನೆ ಮಾಡಿದ್ರು ಅದು ತಪ್ಪು ಎಂಬರ್ಥದಲ್ಲಿ ನಿಂದನೆ ಮಾಡ್ತಾಳೆ. ಅದು ಪೊಸೆಸೀವ್​ನೆಸ್ಸೋ ಅಥವಾ ಅನುಮಾನವೋ ಗೊತ್ತಿಲ್ಲ. ಆದರೆ ಆಕೆಯ ಜೊತೆ ಬಾಳ್ವೆ ಮಾಡೋದು ಕಷ್ಟವಾಗ್ತಿದೆ. ಅಷ್ಟಲ್ಲದೆ ಮನೆಗೆ ಸಿಸಿಟಿವಿಗಳನ್ನೂ ಹಾಕಿಸಿದ್ದಾಳೆಂದು ಆರೋಪಿಸಿದ್ದಾನೆ. ಇನ್ನು ಪೊಲೀಸ್ ಠಾಣೆಯಲ್ಲಿ ಕರೆ ತಂದ ವೇಳೆ ವಿಪುಲ್ ಹೇಳಿಕೆಗೆ ಒಂದಷ್ಟು ಠಾಣೆಯಲ್ಲಿ ಹೈಡ್ರಾಮ ನಡೆದಿತ್ತು. ಪತ್ನಿ ಶ್ರೀಪರ್ಣ ದತ್ತ ಕೂಡ ತಲೆ ತಿರುಗಿ ಕೆಳಬಿದ್ದಿದ್ದಳು. ತಕ್ಷಣ ಆಕೆಯನ್ಮ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ತರುಣ್ ಸುಧೀರ್ ಪತ್ನಿ ಸೋನಲ್ ಬ್ಲೌಸ್ ಡಿಸೈನ್ ಮಾಡಿದ್ಯಾರು? ಕಾಸ್ಟ್ಯೂಮ್ ಡಿಸೈನರ್​ಗೆ ಭಾರೀ ಡಿಮ್ಯಾಂಡ್!
ಇನ್ನು ಈ ಹಿಂದೆ ಅಜಿತಾಬ್ ಎಂಬ ಟೆಕ್ಕಿ ಕೂಡ ಇದೇ ರೀತಿ ಕಣ್ಮರೆಯಾಗಿದ್ದ. ತನ್ನ ಚಹರೆಯನ್ನೂ ಬದಲಿಸಿದ್ದ. ಇತ್ತ ವಿಪುಲ್ ಗುಪ್ತಾ ಕೂಡ ಅದೇ ಮಾದರಿಯ ಮೆಥೆಡ್ ಅಳವಡಿಸಿಕೊಂಡಿದ್ದ. ಸದ್ಯ ಕೊಡಿಗೇಹಳ್ಳಿ ಪೊಲೀಸರು ವಿಪುಲ್ ಗುಪ್ತಾ ಕರೆ ತಂದು ವಿಚಾರಣೆ ಮುಂದುವರೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us