/newsfirstlive-kannada/media/post_attachments/wp-content/uploads/2024/06/darshan1.jpg)
ಬೆಂಗಳೂರು: ಚಿತ್ರದುರ್ಗ ಮೂಲದ ಯುವಕ ರೇಣುಕಾ ಸ್ವಾಮಿ ಕೊಲೆ ಕೇಸ್​ಗೆ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಕೊಲೆ ಮಾಡಿದ ಬಳಿಕ ಕಾರಲ್ಲಿ ಮೃತದೇಹ ಸಾಗಾಟ ಮಾಡಿದ ದೃಶ್ಯ ಸಿಕ್ಕಿದೆ.
ಜೂನ್​​ 9ನೇ ತಾರೀಕು ರಾಜರಾಜೇಶ್ವರಿ ನಗರದ ಉದ್ಯಮಿ ಪಟ್ಟಣಗೆರೆ ಜಯಣ್ಣ ಅವರ ಶೆಡ್​​ಗೆ ದರ್ಶನ್​​ ತನ್ನ ಜೀಪ್​​ ಕಾರ್​ನಲ್ಲಿ ಎಂಟ್ರಿ ನೀಡಿರೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ದರ್ಶನ್​ ಜೀಪ್​ ಕಾರಲ್ಲಿ ರಾತ್ರಿ 8 ಗಂಟೆಗೆ ಹೋಗಿ 9.30ಕ್ಕೆ ಹೊರಬಂದಿರೋ ವಿಡಿಯೋ ಲಭ್ಯವಾಗಿತ್ತು.
ಮೊದಲು ಸ್ಕಾರ್ಪಿಯೋ ಕಾರಲ್ಲಿ ದರ್ಶನ್​ ಆಪ್ತ ವಿನಯ್​ ಎಂಟ್ರಿ ಕೊಟ್ಟಿದ್ರು. ಸ್ಕಾರ್ಪಿಯೋ ಬೆನ್ನಲ್ಲೇ ನಟ ದರ್ಶನ್ ಜೀಪ್​ ಕಾರಲ್ಲಿ ರಾತ್ರಿ 8 ಗಂಟೆಗೆ ಎಂಟ್ರಿ ಕೊಟ್ಟಿತ್ತು. ಈಗ ಕೊಲೆ ಬಳಿಕ ಮೃತದೇಹ ಸಾಗಿಸಿದ ವಿಡಿಯೋ ಕೂಡ ಸಿಕ್ಕಿದೆ.
ಅಂದು ಬೆಳಗಿನ ಜಾವ 3.40ಕ್ಕೆ ಜೀಪ್​ ಮತ್ತು ಸ್ಕಾರ್ಪಿಕೋ ಕಾರಲ್ಲೇ ಮೃತದೇಹ ಸಾಗಿಸಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶೆಡ್​​ನಿಂದ ಹೊರಬಂದು ಹೋಗುವ ದೃಶ್ಯ ಇದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ