newsfirstkannada.com

Exclusive: ಶ್ರೀರಾಮನಂತೆ ರಾವಣನೂ ಆದರ್ಶ ಪುರುಷನಾ? ಅದು ಹೇಗೆ? ಪೇಜಾವರ ಶ್ರೀ ಹೇಳಿದ್ದೇನು?

Share :

Published January 11, 2024 at 6:49pm

Update January 11, 2024 at 6:50pm

    ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆ

    ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದೇನು?

    ‘ರಾಮ’ ಎಂಬ ಅಕ್ಷರಗಳ ಅರ್ಥ ಏನೆಂದರೆ ಸಂತೋಷ ಪಡಿಸುವವ ಎಂದರ್ಥ

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದ ಲೋಕಾರ್ಪಣೆಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇದೆ. ಇದೇ ಜನವರಿ 22ರಂದು ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಆ ಶುಭ ಗಳಿಗೆಗೆ ಕೋಟ್ಯಾಂತರ ರಾಮನ ಭಕ್ತರು ಕಾಯುತ್ತಿದ್ದಾರೆ. ಇದರ ಜೊತೆಗೆ ಇಡೀ ಅಯೋಧ್ಯೆ ಮದುವಣಗಿತ್ತಿಯಂತೆ ಸಿಂಗಾರಗೊಂಡು ಇಡೀ ನಗರ ಕೇಸರಿಮಯವಾಗಿದೆ. ಎಲ್ಲೆಲ್ಲೂ ರಾಮ ಜಪ ರಾಮನಾಮದ ಝೇಂಕಾರವೇ ಮೊಳಗುತ್ತಿದೆ. ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಯ ಹಿನ್ನೆಲೆ ದೇಶಾದ್ಯಂತ ಸಂಭ್ರಮಾಚರಣೆ ನಡೆಸಲಾಗ್ತಿದೆ.

ಇದನ್ನು ಓದಿ: ರಾಮಮಂದಿರಕ್ಕೆ ಭವ್ಯ ಮೆರಗು.. ಅದ್ಭುತ ವಿಡಿಯೋ ಹಂಚಿಕೊಂಡ ಟ್ರಸ್ಟ್..!

ವಿಶೇಷ ಎಂದರೆ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರಾಗಿದ್ದಾರೆ. ಇನ್ನು, ನ್ಯೂಸ್​​ಫಸ್ಟ್​ನೊಂದಿಗೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಶ್ರೀ ರಾಮನ ಬಗ್ಗೆ ಎಕ್ಸ್‌ಕ್ಯೂಸಿವ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮಾನವ ಲೋಕದಲ್ಲಿ ಅತ್ಯಂತ ಹತ್ತಿರದಲ್ಲಿ ಇದ್ದುಕೊಂಡು, ಮಾನವನ ಬದುಕಿನಲ್ಲಿ ಏನೆಲ್ಲಾ ತುಂಬಾ ಕಷ್ಟಕರ ಪರಿಸ್ಥಿತಿಗಳಲ್ಲಿ ಧೃತಿಗೆಡದೆ ಲೋಕೋತ್ತರ ಕಾರ್ಯವನ್ನು ಮಾಡಿ ವಿಜಯವನ್ನು ಸಂಪಾದಿಸಿಕೊಂಡು ಬಂದಿದ್ದಾನೆ ಆ ಶ್ರೀರಾಮ ಚಂದ್ರ. ಸಕಲ ಸದ್ಗುಣಗಳ ಗಣಿಯೇ ಶ್ರೀ ರಾಮ. ‘ರಾಮ’ ಎಂಬ ಎರಡು ಅಕ್ಷರಗಳ ಅರ್ಥ ಏನೆಂದರೆ ಸಂತೋಷ ಪಡಿಸುವವನು ಎಂದರ್ಥ.

ಇದನ್ನು ಓದಿ: ಬಾಲರಾಮನ ಪ್ರತಿಷ್ಠಾಪನೆಗೆ ದಿನಗಣನೆ; ಈ ಐತಿಹಾಸಿಕ ಮೂರ್ತಿಗಳನ್ನೇ ಕೆತ್ತಿಸಲು ಕಾರಣವೇನು..?

ಮೂರು ಲೋಕವು ಕೂಡ ಯಾರಿಂದ ಸಖ ಸಂತೋಷದಿಂದ ಇದೆಯೋ ಅದೇ ರಾಮ. ಅದರ ಜತೆಗೆ ಇದಕ್ಕೆ ವಿರುದ್ಧವಾಗಿ ಮೂರು ಲೋಕವನ್ನು ಅಳಿಸುವವನೇ, ಅಳುವ ಹಾಗೇ ಮಾಡುವವನೇ ರಾವಣ. ಇಲ್ಲಿ ರಾಮನು ಆದರ್ಶ ಪುರುಷನೇ, ರಾವಣನು ಆದರ್ಶ ಪುರುಷನೇ ಆಗಿದ್ದಾನೆ. ಅದು ಹೇಗೆ ಎಂದರೆ, ರಾಮನಂತೆ ನಾವು ಇರಬೇಕು. ನಾವೇಲ್ಲಾ ಹೇಗೆ ಇರಬೇಕು ಎಂದು ತೋರಿಸಿದ್ದು ರಾಮನ ಆ ಗುಣಗಳು. ಅದೇ ಕಾಲಕ್ಕೆ ನಾವು ಹೇಗೆ ಇರಬಾರದು ಎಂಬುದಕ್ಕೆ ರಾವಣ ಆದರ್ಶ ಆಗುತ್ತದೆ. ರಾಮನ ಪ್ರತಿಯೊಂದು ಹೆಜ್ಜೆಯಲ್ಲೂ ನಾವು ಹೇಗೆ ಇರಬೇಕು ಎಂಬುವುದು ಗೊತ್ತಾಗುತ್ತೆ. ಇದೇ ಸಮಯಕ್ಕೆ ನಾವು ಹೇಗೆ ಇರಬಾರದು ಎಂಬುವುದನ್ನು ರಾಮಣನಿಂದ  ಕಲಿಸುತ್ತದೆ. ಶ್ರೀ ರಾಮಚಂದ್ರ ತನ್ನ ಸರ್ವಸ್ವವನ್ನು ತ್ಯಾಗ ಮಾಡಿ ಲೋಕದ ಸಂತೋಷಕ್ಕಾಗಿ ಕಾಡಿಗೆ ಹೋದ. ಅದೇ ಕಾಲಕ್ಕೆ ರಾವಣ ಎಲ್ಲ ಸುಖ ಸಂತೋಷ ಏನೇ ಇದ್ದರು ಕೂಡ ಎಲ್ಲ ನನಗೆ ಬೇಕು ಎಂದು ಹೇಳಿಕೊಂಡು ಮೂರು ಲೋಕವನ್ನು ಪಡಿಸುತ್ತ ಬಂದ. ಹಾಗಾಗಿ ರಾಮ ನಮಗೆ ಹತ್ತಿರವಾಗಿ ಆದರ್ಶ ಪುರುಷ ಆಗುತ್ತಾನೆ. ರಾವಣ ದೂರವಾಗುತ್ತಾನೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

Exclusive: ಶ್ರೀರಾಮನಂತೆ ರಾವಣನೂ ಆದರ್ಶ ಪುರುಷನಾ? ಅದು ಹೇಗೆ? ಪೇಜಾವರ ಶ್ರೀ ಹೇಳಿದ್ದೇನು?

https://newsfirstlive.com/wp-content/uploads/2024/01/swamiji.jpg

Load More