newsfirstkannada.com

ದೂರದರ್ಶನ ಟಿವಿ ಲೈವ್​ ಪ್ರಸಾರದ ವೇಳೆ ಕುಸಿದು ಬಿದ್ದು ಕೃಷಿ ತಜ್ಞ ಸಾವು

Share :

Published January 13, 2024 at 7:30am

Update January 13, 2024 at 7:32am

    59 ವರ್ಷದ ಡಾ. ಅನಿ ಎಸ್​ ದಾಸ್ ಮೃತ ದುರ್ದೈವಿ

    ‘ಕೃಷಿ ದರ್ಶನ’ ಕಾರ್ಯಕ್ರಮದ ವೇಳೆ ಕುಸಿದು ಸಾವು

    ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಬದುಕಲಿಲ್ಲ

ದೂರದರ್ಶನ ಟಿವಿ ಕಾರ್ಯಕ್ರಮದ ​ನೇರ ಪ್ರಸಾರದ ವೇಳೆ ಕೃಷಿ ತಜ್ಞರೊಬ್ಬರು ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ.

59 ವರ್ಷದ ಡಾ. ಅನಿ ಎಸ್​ ದಾಸ್ ಮೃತ ದುರ್ದೈವಿಗಳು. ಇವರು ಕೇರಳ ಕೃಷಿ ವಿಶ್ವವಿದ್ಯಾಲಯದ ಪ್ಲಾನಿಂಗ್ ಡೈರೆಕ್ಟರ್ ಆಗಿದ್ದರು. ಇವರು ದೂರದರ್ಶನ ಚಾನಲ್​​​ನ ಕಾರ್ಯಕ್ರಮದ ನೇರಪ್ರಸಾರದಲ್ಲಿ ಭಾಗಿಯಾಗಿದ್ದರು. ಶೋನಲ್ಲಿ ಮಾತನಾಡುತ್ತಿದ್ದ ವೇಳೆ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಿನ್ನೆ ಸಂಜೆ 6.30ಕ್ಕೆ ಕೇರಳದ ದೂರದರ್ಶನ ಚಾನಲ್​​ನಲ್ಲಿ ಕೃಷಿ ದರ್ಶನ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು ಎಂದು ವರದಿಯಾಗಿದೆ. ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅವರು ಬದುಕುಳಿಯಲಿಲ್ಲ ಎಂದು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೂರದರ್ಶನ ಟಿವಿ ಲೈವ್​ ಪ್ರಸಾರದ ವೇಳೆ ಕುಸಿದು ಬಿದ್ದು ಕೃಷಿ ತಜ್ಞ ಸಾವು

https://newsfirstlive.com/wp-content/uploads/2024/01/ANIL-DAS.jpg

Load More