ಮತ್ತೆ ಮತ್ತೆ ಕೆಣಕಿದ ಪಾಕ್​​ಗೆ ಸರಿಯಾದ ಉತ್ತರ.. ಪಾಪಿಸ್ಥಾನದ 3 ವಾಯುನೆಲೆಗಳ ಮೇಲೆ ಅಟ್ಯಾಕ್..!

author-image
Ganesh
Updated On
ಭಾರತ, ಪಾಕ್ ಸಂಘರ್ಷದಲ್ಲಿ ಗೆಲುವು ಯಾರಿಗೆ? ಎಷ್ಟು ಕೋಟಿ ನಷ್ಟ? ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ!
Advertisment
  • ಪಾಕ್​ನ ಡ್ರೋನ್ ದಾಳಿಗೆ ಭಾರತದ ಪ್ರತ್ಯುತ್ತರ
  • ಪಾಕ್​ ವಾಯುಪಡೆಯ 3 ಬೇಸ್​ಗಳ ಮೇಲೆ ದಾಳಿ
  • ದಾಳಿ ಬಗ್ಗೆ ಖಚಿತ ಪಡಿಸಿದ ಪಾಕ್ ಸೇನಾ ವಕ್ತಾರ

ನಿನ್ನೆಯೂ ಕೂಡ ಪಾಕಿಸ್ತಾನ ನಾಗರಿಕರನ್ನು ಗುರಿಯಾಗಿಸಿ ಭಾರತದ ಮೇಲೆ ದಾಳಿಗೆ ಯತ್ನಿಸಿದೆ. ಅದಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದ್ದು, ಪ್ರತೀಕಾರದ ದಾಳಿ ಮಾಡಿದೆ. ಲಾಹೋರ್​​, ರಾವಲ್ಪಿಂಡಿಯಲ್ಲಿ ಭಾರೀ ಸ್ಫೋಟ ಸಂಭವಿಸಿರುವ ಮಾಹಿತಿ ಸಿಕ್ಕಿದೆ.

ಭಾರತದಿಂದ ಕ್ಷಿಪಣಿ ದಾಳಿಯಾಗಿದ್ದು, ಪಾಕಿಸ್ತಾನದ ಮೂರು ವಾಯುನೆಲೆಗಳನ್ನು ಗುರಿಯಾಗಿಸಿಕೊಡು ದಾಳಿ ಮಾಡಲಾಗಿದೆ. ಮುರೀದ್, ನೂರ್​ಖಾನ್​, ರಫೀಖಿ ವಾಯುನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಸ್ಫೋಟ ಸಂಭವಿಸಿದೆ. ಆ ಮೂಲಕ ಪದೇ ಪದೆ ಕೆಣಕಿದ ಪಾಕ್​ಗೆ ಭಾರತ ಖಡಕ್​ ತಿರುಗೇಟು ನೀಡಿದೆ. ಪ್ರತಿದಾಳಿಗೆ ಸಂಬಧಿಸಿ ಭಾರತೀಯ ಸೇನೆಯು ಕೆಲವೇ ಕ್ಷಣದಲ್ಲಿ ಮಾಹಿತಿ ನೀಡಲಿದೆ.

ಇದನ್ನೂ ಓದಿ: ಪಾಕ್​ ವಿಫಲ ಡ್ರೋಣ್ ದಾಳಿ.. ಗುರಿ ಮುಟ್ಟವ ಮೊದಲೇ ಫಿನಿಶ್ ಮಾಡಿದ ಭಾರತೀಯ ಸೇನೆ

ಡ್ರೋಣ್ ದಾಳಿ ವಿಫಲ..!

ಜಮ್ಮುಕಾಶ್ಮೀರ, ಪಂಜಾಬ್, ರಾಜಸ್ಥಾನ ಹಾಗೂ ಗುಜರಾತ್​ನ 20 ನಗರಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನವು ಸತತ 2ನೇ ದಿನ ಡ್ರೋಣ್​ ದಾಳಿಗೆ ವಿಫಲ ಯತ್ನ ನಡೆಸಿದೆ. ಏಕೆಂದರೆ ಪಾಕಿಸ್ತಾನದ ಡ್ರೋಣ್​ಗಳು ಗುರಿ ಮುಟ್ಟುವ ಮೊದಲೇ ಭಾರತೀಯ ವಾಯು ಸೇನೆ ಹೊಡೆದುರುಳಿಸಿ ನೆಲಕ್ಕೆ ಕೆಡವಿವೆ.

ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್‌, ಅವಂತಿಪೋರಾದ ವಾಯುನೆಲೆಯ ಮೇಲೆ ಗುರಿಯಾಗಿರಿಸಿಕೊಂಡು ದಾಳಿಗೆ ಯತ್ನಿಸಿತ್ತು. ಆದರೆ ಇದನ್ನು ಮೊದಲೇ ಮನಗಂಡಿದ್ದ ಭಾರತೀಯ ವಾಯು ಸೇನೆ, ಪಾಕಿಸ್ತಾನದ ಎಲ್ಲ ಡ್ರೋನ್​ಗಳನ್ನು ಛಿದ್ರಛಿದ್ರ ಮಾಡಿದೆ. ಇದರಿಂದ ಬಂದ ದಾರಿಗೆ ಸುಂಕವಿಲ್ಲ ಎಂದು ಪಾಕ್​ ಅಳುತ್ತಿದೆ. ​

ಇದನ್ನೂ ಓದಿ: ಗಡಿಯಲ್ಲಿ ಭಾರತ, ಪಾಕ್ ಅಟ್ಯಾಕ್; ಏರ್​ಪೋರ್ಟ್​ಗಳು ತಾತ್ಕಾಲಿಕ ಬಂದ್, ದಿನಾಂಕ ವಿಸ್ತರಣೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment