newsfirstkannada.com

‘ರೇವಣ್ಣ ಅಲ್ಲ, ಪ್ರಜ್ವಲ್ ರೇಪ್ ಮಾಡಿದ್ದು’- ಹಾಸನ ಸೆಕ್ಸ್‌ ಸ್ಕ್ಯಾಂಡಲ್‌ಗೆ ಸಂತ್ರಸ್ತೆ ಸ್ಫೋಟಕ ಹೇಳಿಕೆ

Share :

Published May 6, 2024 at 1:47pm

    ಲೈಂಗಿಕ ದೌರ್ಜನ್ಯದ ಬಗ್ಗೆ ಕಣ್ಣೀರಿಟ್ಟು ವಿವರಿಸಿದ ಓರ್ವ ಸಂತ್ರಸ್ತೆ

    ನನ್ನ ಮೇಲೆ ಅತ್ಯಾಚಾರ ಮಾಡಿದ್ದು ರೇವಣ್ಣ ಅಲ್ಲ ಪ್ರಜ್ವಲ್ ರೇವಣ್ಣ!

    ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ಧ ಎರಡು ಕೇಸ್ ದಾಖಲಾಗಿದೆ

ಬೆಂಗಳೂರು: ಹಾಸನದ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ದೂರು ಕೊಟ್ಟ ಸಂತ್ರಸ್ತೆ ಸ್ಫೋಟಕ ಹೇಳಿಕೆ ನೀಡಿದ್ದು ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ. ದೂರು ಕೊಟ್ಟ ಮಹಿಳೆ ಕಿಡ್ನಾಪ್ ಆಗಿದ್ದು, ಎಸ್‌ಐಟಿ ಪೊಲೀಸರು ಸಂತ್ರಸ್ತೆಯನ್ನು ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: ಹಾಸನ ಲೈಂಗಿಕ ದೌರ್ಜನ್ಯ ಕೇಸ್‌ಗೆ ಹೊಸ ಟ್ವಿಸ್ಟ್‌; ರೇವಣ್ಣ ಮನೆಯಲ್ಲಿ ಸ್ಥಳ ಮಹಜರು; ಸಂತ್ರಸ್ತೆ ಹೇಳಿದ್ದೇನು? 

ಎಸ್‌ಐಟಿ ವಶದಲ್ಲಿರುವ ಕಿಡ್ನಾಪ್ ಆಗಿದ್ದ ಮಹಿಳೆ, ಲೈಂಗಿಕ ದೌರ್ಜನ್ಯದ ಬಗ್ಗೆ ಕಣ್ಣೀರಿಟ್ಟು ಕಿರುಕುಳದ ಬಗ್ಗೆ ವಿವರಿಸಿದ್ದಾಳೆ. ನನ್ನ ಮೇಲೆ ಅತ್ಯಾಚಾರ ಮಾಡಿದ್ದು ಹೆಚ್‌.ಡಿ ರೇವಣ್ಣ ಅಲ್ಲ. ಪ್ರಜ್ವಲ್ ರೇವಣ್ಣ ನನ್ನ ಮೇಲೆ ರೇಪ್ ಮಾಡಿದ್ದಾರೆ ಎಂದು ಎಸ್​ಐಟಿ ಎದುರು ಮಹಿಳೆ ಕಣ್ಣೀರಿಡುತ್ತಾ ವಿವರಿಸಿದ್ದಾಳೆ ಎನ್ನಲಾಗಿದೆ. ಇದೇ ಹೇಳಿಕೆಯನ್ನು ಸಂತ್ರಸ್ತೆ ನ್ಯಾಯಾಧೀಶರ ಎದುರು ನೀಡಲು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

ಪ್ರಜ್ವಲ್ ವಿರುದ್ಧ ಮತ್ತೆ ಕೇಸ್? 
ಕಿಡ್ನಾಪ್ ಆಗಿದ್ದ ಮಹಿಳೆ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ರೇಪ್ ಮಾಡಿದ ಆರೋಪ ಮಾಡಿದ್ದಾರೆ. ನ್ಯಾಯಾಧೀಶರ ಎದುರು ಸಿಆರ್​ಪಿಸಿ 164 ಅಡಿಯಲ್ಲಿ ಸಂತ್ರಸ್ತೆ ಹೇಳಿಕೆ ದಾಖಲಿಸಲು ಎಸ್​ಐಟಿ ಅಧಿಕಾರಿಗಳು ತಯಾರಿ ನಡೆಸಿದ್ದಾರೆ.

ಒಂದು ವೇಳೆ ಸಂತ್ರಸ್ತೆ ಪ್ರಜ್ವಲ್ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದರೆ ಇದೇ ವಿಚಾರಕ್ಕೆ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಹೊಸ ಕೇಸ್ ದಾಖಲಾದ್ರೆ ಪ್ರಜ್ವಲ್ ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾಗಲಿದೆ. ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ಧ ಎರಡು ಕೇಸ್ ದಾಖಲಾಗಿದೆ. ಈ ಎರಡು ಪ್ರಕರಣಗಳ ಜೊತೆ ಮತ್ತೊಂದು ಕೇಸ್ ದಾಖಲಾಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ರೇವಣ್ಣ ಅಲ್ಲ, ಪ್ರಜ್ವಲ್ ರೇಪ್ ಮಾಡಿದ್ದು’- ಹಾಸನ ಸೆಕ್ಸ್‌ ಸ್ಕ್ಯಾಂಡಲ್‌ಗೆ ಸಂತ್ರಸ್ತೆ ಸ್ಫೋಟಕ ಹೇಳಿಕೆ

https://newsfirstlive.com/wp-content/uploads/2024/05/prajwal-revanna10.jpg

Load More