newsfirstkannada.com

‘ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ 3-4 ಆತ್ಮಹತ್ಯೆ’- ಸ್ಫೋಟಕ ಮಾಹಿತಿ ಬಿಚ್ಚಿಟ್ಟ JDS ನಾಯಕ

Share :

Published May 8, 2024 at 2:54pm

Update May 8, 2024 at 2:55pm

    ಪೆನ್‌ಡ್ರೈವ್ ಬಿಡುಗಡೆಯಿಂದ ಎಷ್ಟೋ ಹೆಣ್ಣು ಮಕ್ಕಳ ಸಂಸಾರದಲ್ಲಿ ಬಿರುಕು

    ನಾಗಮಂಗಲ ಮಾಜಿ ಶಾಸಕ ಸುರೇಶ್ ಗೌಡ ಅವರಿಂದ ಮಾಹಿತಿ ಬಹಿರಂಗ

    ಇದು ಮಹಾನ್ ಅಪರಾಧ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದ ಜೆಡಿಎಸ್‌ ನಾಯಕ

ಮಂಡ್ಯ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣದಲ್ಲಿ ಜೆಡಿಎಸ್‌ ನಾಯಕ, ನಾಗಮಂಗಲ ಮಾಜಿ ಶಾಸಕ ಸುರೇಶ್ ಗೌಡ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಪೆನ್‌ಡ್ರೈವ್ ಬಿಡುಗಡೆಯಿಂದ ಎಷ್ಟೋ ಹೆಣ್ಣು ಮಕ್ಕಳ ಸಂಸಾರದಲ್ಲಿ ಬಿರುಕು ಉಂಟಾಗಿದೆ. ನಮಗೆ ಬಂದ ಮಾಹಿತಿ ಪ್ರಕಾರ 3-4 ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ನಾಗಮಂಗಲದಲ್ಲಿ ಮಾತನಾಡಿದ ಸುರೇಶ್ ಗೌಡ ಅವರು ಪ್ರಜ್ವಲ್ ರೇವಣ್ಣ ಮಾಡಿದ ಅಪರಾಧಕ್ಕಿಂತ ಘೋರ ಅಪರಾಧವನ್ನು ಸಿಎಂ ಸಿದ್ದರಾಮಯ್ಯ ಸರ್ಕಾರ ಮಾಡಿದೆ. ಕಾಂಗ್ರೆಸ್ ಸರ್ಕಾರ ಹೆಣ್ಣು ಮಕ್ಕಳ ಮಾನ ಬೀದಿಗೆ ತಂದಿದೆ. 4 ಗೋಡೆಗಳ ಮಧ್ಯೆ ನಡೆದ ವಿಷಯವನ್ನು ಪೆನ್ ಡ್ರೈವ್ ಮಾಡಿ ಹಂಚಿದ್ದಾರೆ. ಇದು ಮಹಾನ್ ಅಪರಾಧ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ರಾಜ್ಯದ ಮಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಳು ಮಾಡಿದೆ. ಪೆನ್‌ಡ್ರೈವ್ ಪ್ರಕರಣದಲ್ಲಿ ಆತ್ಮಹತ್ಯೆ ಮಾಡಿಕೊಂಡವರು, ಡಿವೋರ್ಸ್ ಆದವರು, ಮನೆ ಹಾಳು ಮಾಡಿಕೊಂಡವರ ವಿಚಾರ ಮುಂದೆ ತಿಳಿಯಲಿದೆ. ಹೆಚ್ಚಿನ ವಿಚಾರಗಳನ್ನು ಈ ಸರ್ಕಾರ ಮುಚ್ಚಿಡಲು ಆಗಲ್ಲ ಎಂದು ಸುರೇಶ್ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣಕ್ಕೆ ಹೊಸ ಟ್ವಿಸ್ಟ್‌.. ಹಾಸನದ ಡ್ರೈವರ್‌ ಕಾರ್ತಿಕ್‌ ಗೌಡ ಬಂಧನ? 

ಪೆನ್‌ಡ್ರೈವ್ ಪ್ರಕರಣದಿಂದ ಎಷ್ಟೋ ಹೆಣ್ಣು ಮಕ್ಕಳ ಸಂಸಾರದಲ್ಲಿ ಬಿರುಕಾಗಿದೆ. ಈ ಪ್ರಕರಣದಲ್ಲಿ 3-4 ಆತ್ಮಹತ್ಯೆ ಆಗಿದೆ ಎನ್ನುವ ಮಾಹಿತಿ ಇದೆ. ವಿಡಿಯೋದಲ್ಲಿ ಭಾಗಿಯಾದವರು ಎನ್ನಲಾದ ಸರ್ಕಾರಿ ಅಧಿಕಾರಿಗಳಿಗೆ ಕಾಂಗ್ರೆಸ್ ಪಕ್ಷದ ಮುಖಂಡರು ಹೆದರಿಸುತ್ತಿದ್ದಾರೆ. ಹಣಕ್ಕಾಗಿ, ಬೇರೆ ರೀತಿ ಉಪಯೋಗಿಸಿಕೊಳ್ಳಲು ಪ್ರಯತ್ನ ಮಾಡ್ತಿದ್ದಾರೆ. SIT ತನಿಖೆ ನ್ಯಾಯಯುತವಾಗಿ ನಡೆಯುತ್ತಿಲ್ಲ ಎಂದು ಸುರೇಶ್ ಗೌಡ ಆರೋಪಿಸಿದ್ದಾರೆ.

ಸಂತ್ರಸ್ತೆಯರಿಗೆ SIT ನ್ಯಾಯ ಕೊಡುವುದಿಲ್ಲ. ಈ ಪ್ರಕರಣವನ್ನು ಚುನಾವಣೆ, ರಾಜಕೀಯಕ್ಕಾಗಿ ಮಾತ್ರ ಉಪಯೋಗಿಸಿಕೊಂಡಿದ್ದಾರೆ‌. ನ್ಯಾಯ ಸಿಗುವವರೆಗೂ ತನಿಖೆಯನ್ನು CBIಗೆ ವಹಿಸುವವರೆಗೂ ಜೆಡಿಎಸ್‌ ಹೋರಾಟ ಮಾಡಲಾಗಿದೆ. ಈ ಪ್ರಕರಣದಲ್ಲಿ ಪ್ರಧಾನಿ ಮೋದಿ ಅವರ ಹೆಸರನ್ನ ತಂದು ಅವಮಾನ ಮಾಡಿದ್ದಾರೆ. ಇದು ರಾಜದ್ರೋಹದ ಕೆಲಸ. ಯಾವುದೇ ವಿಷಯದಲ್ಲೂ ಭಾಗಿಯಾಗದ ದೇವೇಗೌಡರ ಹೆಸರನ್ನು ಎಳೆದು ತಂದಿದ್ದಾರೆ‌ ಎಂದು ಸುರೇಶ್ ಗೌಡ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ 3-4 ಆತ್ಮಹತ್ಯೆ’- ಸ್ಫೋಟಕ ಮಾಹಿತಿ ಬಿಚ್ಚಿಟ್ಟ JDS ನಾಯಕ

https://newsfirstlive.com/wp-content/uploads/2024/05/Suresh-Gowda-On-Prajwal-Revanna.jpg

Load More