ಚಾಂಪಿಯನ್ಸ್​ ಟ್ರೋಫಿ: ಭಾರತ-ಪಾಕ್‌ ಜಿದ್ದಾಜಿದ್ದಿನ ಪಂದ್ಯದ ಟಿಕೆಟ್‌ ಸೋಲ್ಡ್‌ ಔಟ್‌; ಅಭಿಮಾನಿಗಳಿಗೆ ಭಾರೀ ನಿರಾಸೆ!

author-image
Gopal Kulkarni
Updated On
INDvsPAK: ಸವಾಲುಗಳನ್ನ ಮೆಟ್ಟಿ ನಿಂತ್ರೆ ಮಾತ್ರ ಭಾರತಕ್ಕೆ ಅವಕಾಶ; ಪಾಕ್‌ಗೆ ಗೆಲ್ಲೋ ಅಡ್ವಾಂಟೇಜ್ ಜಾಸ್ತಿ!
Advertisment
  • ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್​ಗಳು ಈಗಾಗಲೇ ಸೋಲ್ಡ್ಔಟ್​
  • ಹೆಚ್ಚುವರಿ ಟಿಕೆಟ್ ವ್ಯವಸ್ಥೆ ಮಾಡಿದರೂ ಒಂದೂವರೆಗೆ ಗಂಟೆಯಲ್ಲಿ ಖಾಲಿ
  • ಫೆಬ್ರವರಿ 23 ರಂದು ದುಬೈ ಅಂಗಳದಲ್ಲಿ ನಡೆಯಲಿದೆ ಬದ್ಧ ವೈರಿಗಳ ಕಾದಾಟ

ಫೆಬ್ರವರಿ 23 ರಂದು ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನ ಎಂಬ ಬದ್ಧ ವೈರಿಗಳ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ. ಭಾರತ ಪಾಕ್ ಕ್ರಿಕೆಟ್​ ಪಂದ್ಯ ಎಂದರೆ ಕೇವಲ ಭಾರತ ಮತ್ತು ಪಾಕಿಸ್ತಾನ ಮಾತ್ರವಲ್ಲ ಇಡೀ ಜಗತ್ತೇ ಆ ಒಂದು ಪಂದ್ಯವನ್ನು ನೋಡಲು ಕಾತುರತೆಯಲ್ಲಿ ಕಾಯುತ್ತದೆ. ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೆಬ್ರವರಿ 23 ರಂದು ಎರಡು ತಂಡಗಳು ಕಾದಾಡಲು ಮುಹೂರ್ತ ಫಿಕ್ಸ್ ಆಗಿದ್ದು, ಈ ಪಂದ್ಯ ವೀಕ್ಷಣೆಗೆ ಬರುವ ಪ್ರೇಕ್ಷರ ಸಂಖ್ಯೆ ಹಿಂದಿನ ದಾಖಲೆಗಳನ್ನೆಲ್ಲಾ ಪುಡಿಗಟ್ಟಿದೆ. ಪಂದ್ಯ ವೀಕ್ಷಣೆಗೆ ನಿಗದಿಪಡಿಸಲಾಗಿದ್ದ ಟಿಕೆಟ್​ಗಳು ಈಗಾಗಲೇ ಸೋಲ್ಡ್​ ಔಟ್​ ಆಗಿವೆ. ಆದರೂ ಟಿಕೆಟ್​ಗೆ ಬೇಡಿಕೆ ಅಂತೂ ಹೆಚ್ಚಿದೆ ಹೀಗಾಗಿ ಹೆಚ್ಚುವರಿ ಟೆಕೆಟ್​​ಗಳನ್ನು ನೀಡಲು ಐಸಿಸಿ ಈಗ ಮುಂದಾಗಿದೆ ಆದರೆ ಅವುಗಳು ಕೂಡ ಖಾಲಿ ಆಗಿವೆ.

publive-image

ಫೆಬ್ರವರಿ 3ನೇ ತಾರೀಖಿನಂದು ಭಾರತ -ಪಾಕಿಸ್ತಾನ ಪಂದ್ಯಾವಳಿಯ ಟಿಕೆಟ್​ ಮಾರಾಟ ಶುರುವಾಗಿತ್ತು. ಮಾರಾಟ ಶುರುವಾದ ಕೆಲವೇ ನಿಮಿಷಗಳಲ್ಲಿ ಟಿಕೆಟ್​ಗಳು ಸೋಲ್ಡ್​ಔಟ್ ಆಗಿವೆ. ಇದನ್ನು ನಿರೀಕ್ಷಿಸಿದ್ದ ಐಸಿಸಿ ಹೆಚ್ಚುವರಿ ಟಿಕೆಟ್​​ ಮಾರಲು ಮುಂದಾಗಿದೆ. ರವಿವಾರದಂದು ಸುಮಾರು ಭಾರತೀಯ ಕಾಲಮಾನದ ಪ್ರಕಾರ 1.30ಕ್ಕೆ ಹೆಚ್ಚುವರಿ ಟಿಕೆಟ್​ ಮಾರಾಟ ಆನ್​ಲೈನ್​​ ಮಾರಲು ಐಸಿಸಿ ಪ್ರಾರಂಭಿಸಿದೆ. 1.30 ರಿಂದ 3 ಗಂಟೆಯೊಳಗೆ ಅವುಗಳು ಕೂಡ ಸೋಲ್ಡ್ ಔಟ್ ಆಗಿವೆ ಎಂದು ಹೇಳಲಾಗಿದೆ. ದುಬೈ ಇಂಟರ್​ನ್ಯಾಷನಲ್ ಕ್ರಿಕೆಟ್​ ಸ್ಟೇಡಿಯಂನಲ್ಲಿ ಸುಮಾರು 25 ಸಾವಿರ ಪ್ರೇಕ್ಷಕರು ಕೂರುವಷ್ಟು ಜಾಗವಿದೆ. ಸದ್ಯ ಆ ಎಲ್ಲಾ 25 ಸಾವಿರ ಟಿಕೆಟ್​ ಸೋಲ್ಡ್​ಔಟ್ ಆಗಿದ್ದು ಐಸಿಸಿ ಚಿಂತೆಗೆ ಬಿದ್ದಿದೆ. ಏಕೆಂದರೆ ಈಗಲೂ ಕೂಡ ಭಾರತ ಪಾಕಿಸ್ತಾನ ಪಂದ್ಯದ ಟಿಕೆಟ್​ಗೆ ಡಿಮ್ಯಾಂಡ್ ಜೋರಾಗಿಯೇ ಸೃಷ್ಟಿಯಾಗಿದೆ.

ಇದನ್ನೂ ಓದಿ:ರೋಹಿತ್​ ಶರ್ಮಾಗೆ ಗೇಟ್​ಪಾಸ್​​; ಕೊಹ್ಲಿ ಆಪ್ತ ಹಾರ್ದಿಕ್​ ಪಾಂಡ್ಯಗೆ ಟೀಮ್​ ಇಂಡಿಯಾ ಕ್ಯಾಪ್ಟನ್ಸಿ ಪಟ್ಟ

ಈ ಬಾರಿಯ ಚಾಂಪಿಯನ್ಸ್​ ಟ್ರೋಫಿಯನ್ನು ಪಾಕಿಸ್ತಾನ ಆತಿಥ್ಯವಹಿಸಿತ್ತು. ಕೆಲವು ಭದ್ರತಾ ವಿಚಾರಗಳಿಂದಾಗಿ ಭಾರತ ಮತ್ತು ಪಾಕಿಸ್ತಾನದ ಪಂದ್ಯವನ್ನು ದುಬೈನಲ್ಲಿ ಏರ್ಪಡಿಸಲಾಗಿದೆ. ಭಾರತ ಪಾಕಿಸ್ತಾನ ಪಂದ್ಯದ ಟಿಕೆಟ್​ಗಳು ಈಗಾಗಲೇ ಸೋಲ್ಡ್​ಔಟ್ ಆಗಿದ್ರೆ. ಉಳಿದ ಪಂದ್ಯಗಳ ಟಿಕೆಟ್​ಗಳು ಇನ್ನೂ ಕೂಡ ಲಭ್ಯವಿವೆ. ಅದರಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡಯಲಿರುವ ಪಂದ್ಯದ ಟಿಕೆಟ್​​ಗಳೂ ಕೂಡ ಸೇರಿವೆ.

ಇದನ್ನೂ ಓದಿ: ಟೀಮ್ ಇಂಡಿಯಾ ಚಾಂಪಿಯನ್​ ಟ್ರೋಫಿಗೆ ಪ್ಲೇಯರ್ಸ್​ ಆಯ್ಕೆಯಲ್ಲಿ ಎಡವಟ್ಟು ಮಾಡಿತಾ?

ಭಾರತ ಮತ್ತು ಪಾಕಿಸ್ತಾನದ ಟಿಕೆಟ್​​ನ್ನು ಸುಮಾರು 250 ಅರಬ್ ಎಮಿರೇಟ್ಸ್ ದಿರಾಮ್​ಗೆ ಸೇಲ್ ಮಾಡಲಾಗುತ್ತಿದೆ. ಉಳಿದ ದೇಶದ ಪಂದ್ಯಾವಳಿಗಳಿಗೂ ಕೂಡ ಇದೇ ದರವಿದೆ. ಆದ್ರೆ ಪಾಕಿಸ್ತಾನ ಮತ್ತು ಭಾರತದ ಪಂದ್ಯದ ಟಿಕೆಟ್​ಗಳು ಈಗಾಗಲೇ ಸೋಲ್ಡ್​ ಔಟ್​ ಆಗಿದ್ದು. ದುಬೈನಲ್ಲಿ ಬದ್ಧ ವೈರಿಗಳ ಕಾದಾಟ ನೇರವಾಗಿ ನೋಡಬೇಕು ಅಂತ ಆಸೆಪಟ್ಟ ಅನೇಕ ಅಭಿಮಾನಿಗಳಿಗೆ ನಿರಾಸೆಯಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment