newsfirstkannada.com

ಪಾಕ್​ನಲ್ಲಿ ಉಗ್ರರ ಅಟ್ಟಹಾಸ; ಪೊಲೀಸ್​ ಸೇರಿ 90ಕ್ಕೂ ಹೆಚ್ಚು ಮಂದಿ ಸಾವು; ಹಲವರ ಸ್ಥಿತಿ ಗಂಭೀರ

Share :

Published February 6, 2024 at 6:02am

  93 ದಾಳಿಗಳಲ್ಲಿ 90ಕ್ಕೂ ಹೆಚ್ಚು ಸಾವು, 135 ಮಂದಿಗೆ ಗಾಯ

  ಬೆಳಗಿನ ಜಾವ 3 ಗಂಟೆಗೆ ಚೋಡ್ವಾನ್ ಠಾಣೆ ಮೇಲೆ ದಾಳಿ

  ಪಾಕಿಸ್ತಾನದ ಮೇಲೆಯೇ ತಿರುಗಿ ಬಿದ್ದಿರುವ ಉಗ್ರ ಪಡೆ

ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಗೆ ಮೂರೇ ಮೂರು ದಿನಗಳು ಬಾಕಿಯಿರುವ ಬೆನ್ನಲ್ಲೇ ಉಗ್ರರು ಬಾಲ ಬಿಚ್ಚಿದ್ದಾರೆ. ಪೊಲೀಸ್​ ಠಾಣೆ ಮೇಲೆ ಅಟ್ಟಹಾಸ ಮೆರೆದಿರೋ ಉಗ್ರರು, 10 ಜನರನ್ನ ಬಲಿ ಪಡೆದಿದ್ದಾರೆ. ಚುನಾವಣೆ ಸಮೀಪದಲ್ಲೇ ನಡೆದ ಈ ಘಟನೆ ಪಾಕಿಸ್ತಾನವನ್ನ ಬೆಚ್ಚಿ ಬೀಳಿಸಿದೆ. ಉಗ್ರರ ಅಡಗುತಾಣವಾಗಿರೋ ಪಾಕಿಸ್ತಾನದ ವಿರುದ್ಧವೇ ಉಗ್ರರು ತಿರುಗಿಬಿದ್ದಿದ್ದಾರೆ. ಅದರಲ್ಲೂ ಸಾರ್ವತ್ರಿಕ ಚುನಾವಣೆಗೆ ಮೂರು ದಿನ ಇರುವಾಗಲೇ ಅಟ್ಟಹಾಸ ಮೆರೆದಿರೋ ಟೆರರಿಸ್ಟ್​ಗಳು ರಕ್ತದೋಕುಳಿ ಆಡಿದ್ದಾರೆ.

ಪಾಕಿಸ್ತಾನದ ಪೊಲೀಸ್​ ಠಾಣೆ ಮೇಲೆ ಉಗ್ರರ ಅಟ್ಟಹಾಸ

ಪಾಕಿಸ್ತಾನದ ದೇರಾ ಇಸ್ಮಾಯಿಲ್ ಖಾನ್‌ನ ಚೋಡ್ವಾನ್ ಪೊಲೀಸ್​ ಠಾಣೆ ಮೇಲೆ ಟೆರರಿಸ್ಟ್​ ದಾಳಿ ಮಾಡಿದ್ದಾರೆ.. ಉಗ್ರರ ಅಟ್ಟಹಾಸಕ್ಕೆ 10 ಪೊಲೀಸರು ದುರ್ಮರಣ ಹೊಂದಿದ್ರೆ, 6ಕ್ಕೂ ಹೆಚ್ಚು ಪೊಲೀಸರಿಗೆ ಗಂಭೀರಗಾಯವಾಗಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾರೆ. ನಿನ್ನೆ ಬೆಳಗಿನ ಜಾವ 3 ಗಂಟೆ ಸುಮಾರಿಗೆ ದೇರಾ ಇಸ್ಮಾಯಿಲ್ ಖಾನ್‌ನ ಚೋಡ್ವಾನ್ ಪೊಲೀಸ್​ ಠಾಣೆಯ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಉಗ್ರರು ದಾಳಿಯ ಸಂದರ್ಭದಲ್ಲಿ ಮಿಸೈಲ್‌ ಮತ್ತು ಅತ್ಯಾಧುನಿಕ ಬಂದೂಕು ಬಳಕೆ ಮಾಡಿದ್ದಾರೆ ಎನ್ನಲಾಗ್ತಿದೆ. ಮೊದಲು ಸ್ನೈಪರ್‌ಗಳೊಂದಿಗೆ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದ್ದು, ಕಟ್ಟವನ್ನ ಪ್ರವೇಶ ಮಾಡ್ತಿದ್ದಂತೆ ಉಗ್ರರು ಗ್ರೆನೇಡ್​ಗಳನ್ನ ಪ್ರಯೋಗಿಸಿದ್ದಾರೆ.

10 ಪೊಲೀಸರ ದುರ್ಮರಣ, 6ಕ್ಕೂ ಹೆಚ್ಚು ಜನರಿಗೆ ಗಾಯ

ಇದ್ರಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ಪಾಕಿಸ್ತಾನದಲ್ಲಿ ಈ ವರ್ಷದ ಜನವರಿ ತಿಂಗಳಲ್ಲೆ 93 ಉಗ್ರ ದಾಳಿಗಳು ನಡೆದಿದೆ. ಇದರಲ್ಲಿ 90ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಜೊತೆಗೆ 135 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗ್ತಿದ್ದು, 15 ವ್ಯಕ್ತಿಗಳು ಉಗ್ರರಿಂದ ಅಪಹರಣಕ್ಕೊಳಗಾಗಿದ್ದಾರೆ ಅನ್ನೋ ಮಾಹಿತಿ ಕೂಡ ಲಭ್ಯವಾಗಿದೆ. ಫೆಬ್ರವರಿ 8ರಂದು ದೇಶದಲ್ಲಿ ನಡೆಯಲಿರುವ ರಾಷ್ಟ್ರೀಯ ಚುನಾವಣೆಗೆ ಮೂರು ದಿನಗಳ ಮೊದಲು ಈ ದಾಳಿ ನಡೆದಿದೆ. ಕಳೆದ ಕೆಲವು ದಿನಗಳಲ್ಲಿ ಖೈಬರ್ ಪಖ್ತುಂಖ್ವಾದ ಗಡಿ ಪ್ರದೇಶಗಳಲ್ಲಿ ಉಗ್ರರ ದಾಳಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದು ಸ್ಥಳೀಯರಲ್ಲಿ ಆತಂಕಕ್ಕೂ ಕಾರಣವಾಗಿದೆ. ಇನ್ನು ಹಲವಾರು ವರ್ಷಗಳಿಂದ ಉಗ್ರರಿಗೆ ಅಡಗಿಕೊಳ್ಳಲು ನೆಲೆ ನೀಡಿದ್ದ ಪಾಕಿಸ್ತಾನದ ಮೇಲೆ ಉಗ್ರರು ತಿರುಗಿ ಬಿದ್ದಿರೋದು ಸ್ಥಳೀಯರಲ್ಲಿ ಭಯವನ್ನ ಹುಟ್ಟುಹಾಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಕ್​ನಲ್ಲಿ ಉಗ್ರರ ಅಟ್ಟಹಾಸ; ಪೊಲೀಸ್​ ಸೇರಿ 90ಕ್ಕೂ ಹೆಚ್ಚು ಮಂದಿ ಸಾವು; ಹಲವರ ಸ್ಥಿತಿ ಗಂಭೀರ

https://newsfirstlive.com/wp-content/uploads/2024/02/pakisthan-police.jpg

Load More