ನಿಮ್ಮ ಕಣ್ಣು ಆಗಾಗ ಅದರುತ್ತಾ? ಅದು ಶಕುನವಲ್ಲ, ಆರೋಗ್ಯದ ಸಮಸ್ಯೆ!

author-image
Veena Gangani
Updated On
ನಿಮ್ಮ ಕಣ್ಣು ಆಗಾಗ ಅದರುತ್ತಾ? ಅದು ಶಕುನವಲ್ಲ, ಆರೋಗ್ಯದ ಸಮಸ್ಯೆ!
Advertisment
  • ಹೀಗೆ ಕಣ್ಣು ಅದರಬಾರದು ಅಂದ್ರೆ ಈ ಕೆಲಸ ಮಾಡಬೇಕು
  • ಪದೇ ಪದೇ ಕಣ್ಣು ಅದರುತ್ತಾ ಇದ್ದರೇ ಮುಂದೆ ಏನಾಗುತ್ತೆ?
  • ಕಣ್ಣು ಅದರುವುದರ ಹಿಂದೆ ಶುಭ, ಅಶುಭ ಎಂಬ ನಂಬಿಕೆ

ಸಾಕಷ್ಟು ಜನರಲ್ಲಿ ಆಗಾಗ ಕಣ್ಣುಗಳು ಅದರುತ್ತಾ ಇರುತ್ತದೆ. ಒಮ್ಮೊಮ್ಮೆ ಬಲಗಣ್ಣು ಅಥವಾ ಎಡಗಣ್ಣು ಅದರುವುದರಿಂದ ಜನ ಗೊಂದಲಕ್ಕೀಡಾಗುತ್ತಾ ಇರುತ್ತಾರೆ. ಆದರೆ ಹೀಗೆ ಕಣ್ಣು ಅದರುವುದರ ಹಿಂದೆ ಶುಭ, ಅಶುಭ ಎಂಬ ನಂಬಿಕೆಗಳಿವೆ.
ಪುರುಷರಿಗೆ ಬಲಗಣ್ಣು ಅದರಿದರೆ ಒಳ್ಳೆಯದು, ಮಹಿಳೆಯರಿಗೆ ಎಡಗಣ್ಣು ಅದರಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಕೆಲವೊಮ್ಮೆ ಕೆಲವರಿಗೆ ಗಂಟೆಗಳವರೆಗೂ ಹಾಗೇ ಅದರುತ್ತಿದ್ದರೆ, ಇನ್ನೂ ಕೆಲವರಿಗೆ ದಿನವಿಡೀ ಹಾಗೇ ಉಳಿದುಕೊಂಡು ಬಿಡುತ್ತೆ.

ಇದನ್ನೂ ಓದಿ: ಜಿಮ್​ ಮಾಡಿ ಅರ್ಧಕ್ಕೆ ಬಿಟ್ರೆ ಏನಾಗುತ್ತೆ ಬಾಸ್‌.. ಫಿಟ್ನೆಸ್‌ ಪ್ರಿಯರೇ ಎಚ್ಚರ; ಈ ಸ್ಟೋರಿ ತಪ್ಪದೇ ಓದಿ!

publive-image

ಬಲಗಣ್ಣು ಅದರಿದರೆ ಮಹಿಳೆಯರಿಗೆ ಅದು ಅಪಶಕುನ ಎಂದು ಹೇಳಲಾಗುತ್ತದೆ. ಆದರೆ ಅದು ಹಾಗಲ್ಲಾ. ಅದಕ್ಕೆ ಕೆಲವು ವೈಜ್ಞಾನಿಕವಾದ ಕಾರಣಗಳಿವೆ. ನಿಮಗೆ ತುಂಬಾ ಆಯಾಸವಾದಾಗ ನಿಮ್ಮ ಬಲಗಣ್ಣು ಅದರುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ಆತಂಕ ಪಡಬಾರದು ವಿಶ್ರಾಂತಿ​ ಪಡೆಯಬೇಕು.

ನಿಮ್ಮ ಕಣ್ಣಲ್ಲಿ ನೀರಿನ ಅಂಶ ಕಡಿಮೆ ಇದ್ದಾಗಲೂ ಈ ರೀತಿ ಆಗುವ ಸಾಧ್ಯತೆ ಇರುತ್ತದೆ. ಆ ಕಾರಣದಿಂದ ನೀವು ನಿಮ್ಮ ಕಣ್ಣಿನ ತೇವಾಂಶ ಕಾಪಾಡುವಂತ ಆಹಾರ ಸೇವಿಸಬೇಕು. ನಿಮಗೆ ನಿದ್ದೆ ಕಡಿಮೆಯಾಗಿದ್ದರೂ ಇದೇ ರೀತಿ ಆಗುತ್ತದೆ. ಆದ ಕಾರಣ ಸರಿಯಾದ ಸಮಯಕ್ಕೆ ನಿದ್ರೆ ಮಾಡಬೇಕು ಹಾಗೆ ಮಾಡಿದಲ್ಲಿ ಬಲಗಣ್ಣು ಅದರುವುದಿಲ್ಲ.

publive-image

ನೀವು ತುಂಬಾ ಕೆಫೆನ್​ ಅಂಶ ಇರುವ ಪದಾರ್ಥವನ್ನು ಸೇವಿಸಿದರೂ ಕೂಡಾ ಈ ರೀತಿ ಆಗುತ್ತದೆ. ಈ ರೀತಿ ಆದಾಗ ಕಾಫಿ, ಟೀ ಮತ್ತು ಚಾಕೊಲೇಟ್​ ತಿನ್ನುವುದನ್ನು ಅವೈಡ್ ಮಾಡಬೇಕು. ಇನ್ನೂ ಕಣ್ಣು ರೆಪ್ಪೆ ಸೆಳೆತ ಸಾಮಾನ್ಯವಾಗಿ ಒಂದೇ ಕಣ್ಣಿಗೆ ಸಂಭವಿಸುತ್ತದೆ. ಅತಿಯಾದ ಆಲ್ಕೋಹಾಲ್ ಸೇವನೆ ಮಾಡಿದರೂ ಕೂಡ ರೀತಿಯಾಗುತ್ತದೆ. ಹೀಗೆ ನಿಮಗೆ ಹಲವಾರು ದಿನಗಳಿಂದ ಇದೇ ರೀತಿ ಆಗುತ್ತಿದ್ದರೆ ಒಮ್ಮೆ ವೈದ್ಯರಿಗೆ ಭೇಟಿಯಾಗಿ ಇದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳಬೇಕು.

ಇದರ ಹಿಂದಿರುವ ವೈಜ್ಞಾನಿಕ ಕಾರಣಗಳೇನು?

ಕಣ್ಣು ಅದರುವುದರ ಹಿಂದೆ ವೈಜ್ಞಾನಿಕ ಕಾರಣಗಳೂ ಇವೆ. ಕಣ್ಣಿನ ಬಳಿಯ ನರಗಳು ದುರ್ಬಲವಾದಾಗ ಅಥವಾ ಬಳಲಿದಾಗ ಈ ರೀತಿ ಉಂಟಾಗುತ್ತದೆ. ಡಿಮ್‌ ಲೈಟ್‌ನಲ್ಲಿ ಕೆಲಸ ಮಾಡಿದಾಗ, ಸರಿಯಾಗಿ ನಿದ್ದೆ ಮಾಡದಿದ್ದರೆ, ತುಂಬಾ ಕೆಫೀನ್‌ ಪದಾರ್ಥಗಳನ್ನು ಸೇವಿಸಿದಾಗ, ನರ ಸಂಬಂಧಿತ ಸಮಸ್ಯೆ ಉಂಟಾದಾಗ, ತುಂಬಾ ಹೊತ್ತು ಕಂಪ್ಯೂಟರ್ ಮುಂದೆ ಕೂರುವುದರಿಂದ ಈ ರೀತಿ ಉಂಟಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment