/newsfirstlive-kannada/media/post_attachments/wp-content/uploads/2025/07/F35.jpg)
ಬ್ರಿಟಿಷ್ ರಾಯಲ್ ನೌಕಾಪಡೆಯ ಎಫ್-35ಬಿ ಫೈಟರ್ ಜೆಟ್ ವಿಮಾನವು ಕೇರಳಕ್ಕೆ ನಾಳೆ ಗುಡ್ ಬೈ ಹೇಳಲಿದೆ. ಕಳೆದ 5 ವಾರದಿಂದ ಕೇರಳದ ತಿರುವನಂತಪುರ ಏರ್​​ಪೋರ್ಟ್​ನಲ್ಲಿದ್ದ ವಿಶ್ವದ ಅತ್ಯಂತ ದುಬಾರಿ ಯುದ್ಧ ವಿಮಾನ ಟೇಕ್​ ಆಫ್​​ಗೆ ರೆಡಿಯಾಗಿದೆ. ಯುದ್ಧ ವಿಮಾನದ ಹೈಡ್ರಾಲಿಕ್ ಸಿಸ್ಟಮ್​ನಲ್ಲಿದ್ದ ದೋಷವನ್ನು ಬ್ರಿಟನ್ ಇಂಜಿನಿಯರ್​ಗಳು ಸರಿಪಡಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಐದು ವಾರಗಳ ಹಿಂದೆ ಜೂನ್ 14 ರಂದು ತಿರುವನಂತಪುರ ಇಂಟರ್ ನ್ಯಾಷನಲ್ ಏರ್​ಪೋರ್ಟ್​ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲು ಬ್ರಿಟನ್, ಭಾರತದ ಅನುಮತಿ ಕೇಳಿತ್ತು. ಭಾರತವು ತಕ್ಷಣವೇ ಅನುಮತಿ ನೀಡಿದ್ದರಿಂದ ತಿರುವನಂತಪುರ ಏರ್​ಪೋರ್ಟ್​ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿತ್ತು. ಆದರೇ, ತಕ್ಷಣವೇ ವಿಮಾನವನ್ನು ರೀಪೇರಿ ಮಾಡಲು ಬ್ರಿಟನ್ ಇಂಜಿನಿಯರ್​ಗಳಿಗೆ, ತಜ್ಞರಿಗೆ ಸಾಧ್ಯವಾಗಿರಲಿಲ್ಲ. ಕೊನೆಗೆ ಈಗ ರಿಪೇರಿ ಕಾರ್ಯ ಯಶಸ್ವಿಯಾಗಿದೆ. ಇಂದು ಸಂಜೆ ಎಫ್-35 ಬಿ ಫೈಟರ್ ಜೆಟ್ ಅನ್ನು ಹ್ಯಾಂಗರ್​ನಿಂದ ಹೊರಗೆ ತರಲಾಗುತ್ತೆ. ನಾಳೆ ಇಂಗ್ಲೆಂಡ್ ನತ್ತ ಪ್ರಯಾಣ ಬೆಳೆಸಲಿದೆ ಇಲ್ಲವೇ, ಎಚ್‌ಎಂಎಸ್ ಪ್ರಿನ್ಸ್ ಆಫ್ ವೇಲ್ಸ್ ಕೇರಿಯರ್ ಸ್ಟ್ರೈಕ್ ಗ್ರೂಪ್​ನಲ್ಲಿ ತನ್ನ ಕಾರ್ಯ ಮುಂದುವರಿಸಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಗೆಲುವಿಗಾಗಿ ಹನುಮನ ಮೊರೆ ಹೋದ ಟೀಮ್ ಇಂಡಿಯಾ.. ಗಿಲ್ ಪಡೆ ಏನ್ ಮಾಡ್ತಿದೆ ಗೊತ್ತಾ?
ಗಸ್ತು ತಿರುಗುವಾಗ ತಾಂತ್ರಿಕ ದೋಷ
ಈ ಎಫ್-35 ಬಿ ಫೈಟರ್ ಜೆಟ್, ಎಚ್‌ಎಂಎಸ್ ಪ್ರಿನ್ಸ್ ಆಫ್ ವೇಲ್ಸ್ ಕೇರಿಯರ್ ಸ್ಟ್ರೈಕ್ ಗ್ರೂಪ್​ಗೆ ಸೇರಿದ ಯುದ್ಧ ವಿಮಾನ. ಇದು 5ನೇ ಜನರೇಷನ್ ಫೈಟರ್ ಜೆಟ್. ಇಂಡೋ- ಫೆಸಿಫಿಕ್ ಸಮುದ್ರದಲ್ಲಿ ಗಸ್ತು ತಿರುಗುತ್ತಿರುವಾಗ ತಾಂತ್ರಿಕ ದೋಷ ಕಂಡು ಬಂದಿತ್ತು. ಭಾರತದ ನೌಕಾಪಡೆಯ ಜೊತೆಗೆ ಜಂಟಿ ಸಮರಾಭ್ಯಾಸ ನಡೆಸಿತ್ತು. ಈ ಯುದ್ಧ ವಿಮಾನಕ್ಕೆ ಕಡಿಮೆ ಸ್ಥಳದಲ್ಲಿ ಟೇಕಾಫ್ ಆಗುವ ಸಾಮರ್ಥ್ಯ ಇದೆ. ಜೊತೆಗೆ ವರ್ಟಿಕಲ್ ಲ್ಯಾಂಡಿಂಗ್ ಸಾಮರ್ಥ್ಯವೂ ಇದೆ.
ಜುಲೈ 6 ರಂದು ಈ ಯುದ್ಧ ವಿಮಾನವನ್ನು ತಿರುವನಂತಪುರ ಏರ್​ಪೋರ್ಟ್‌ನ ಹ್ಯಾಂಗರ್​ನಲ್ಲಿ ಇರಿಸಲಾಗಿತ್ತು. ಬಳಿಕ ಬ್ರಿಟನ್ ಇಂಜಿನಿಯರ್ಸ್​ ಹಾಗೂ ಯುದ್ಧ ವಿಮಾನ ತಯಾರಿಸಿದ ಕಂಪನಿಯ ತಜ್ಞರು ಬಂದು ರಿಪೇರಿ ಮಾಡಿದ್ದರು. ಈ ಎಫ್- 35ಬಿ ಯುದ್ಧ ವಿಮಾನವು 100 ಮಿಲಿಯನ್ ಡಾಲರ್ ನಿಂದ 115 ಮಿಲಿಯನ್ ಡಾಲರ್ ಮೌಲ್ಯ ಹೊಂದಿದೆ. ತಿರುವನಂತಪುರ ಏರ್​ಪೋರ್ಟ್​ನಲ್ಲಿ ಲ್ಯಾಂಡಿಂಗ್ ಆಗಿದ್ದಕ್ಕೆ ಹಾಗೂ ಹ್ಯಾಂಗರ್​ನಲ್ಲಿ ಇಷ್ಟು ದಿನ ಇರುವುದಕ್ಕೆ ಭಾರತಕ್ಕೆ ಬ್ರಿಟನ್ ಹಣ ಪಾವತಿ ಮಾಡಲಿದೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ