newsfirstkannada.com

ಫೇಸ್​​ಬುಕ್​​ನಲ್ಲಿ ಪರಿಚಯ; ನಂತರ ಮದುವೆ; ಈಕೆಯನ್ನು ನಂಬಿ ಲಕ್ಷ ಲಕ್ಷ ಕಳ್ಕೊಂಡ ಯುವಕ

Share :

Published September 17, 2023 at 9:04pm

    ಮಯಾಂಗಿನಿಗೆ ಮನಸೋತ ಯುವಕ ಆದ ಬಕ್ರಾ!

    ಪರಿಚಯ, ಪ್ರೇಮ, ಮದುವೆ.. ಆಮೇಲೆ ಆಗಿದ್ದೇನು?

    ಖತರ್ನಾಕ್ ಫ್ಯಾಮಿಲಿ ದೋಚಿದ್ದು ಅಷ್ಟಿಷ್ಟಲ್ಲ..!

ಬೆಂಗಳೂರು: ಮದುವೆಯ ಈ ಬಂಧ.. ಅನುರಾಗದ ಅನುಬಂಧ ಅಂತ ಮನ ಮೆಚ್ಚಿದ ಹುಡುಗಿಯನ್ನ ಮದುವೆಯಾಗಿದ್ದ ಆತ. ಆದ್ರೆ ಗಟ್ಟಿ ಮೇಳ ಮೊಳಗಿ ಮೂರು ತಿಂಗಳಿಗೇ ಸಾಕಷ್ಟು ಆಸೆಗಳನ್ನ ಇಟ್ಕೊಂಡಿದ್ದವ, ಈಗ ಪೊಲೀಸ್​ ಠಾಣೆ ಮೆಟ್ಟಿಲೇರಿ ನ್ಯಾಯ ಬೇಕು ಅಂತಿದ್ದಾನೆ.

ಹೀಗೆ ಬಯಕೆ ಒಂದೇ.. ಗುರಿ ಒಂದೇ.. ನಾನು ನೀನು ಎಲ್ಲವೂ ಒಂದೇ ಅಂತ ಮೂರು ತಿಂಗಳ ಹಿಂದೆ ಈಕೆಗೆ ತಾಳಿ ಕಟ್ಟಿದ್ದ ಈ ಯುವಕ ಸಂತೋಷ್. ಆದ್ರೆ ಅವಳನ್ನ ಮದುವೆಯಾಗಿ ಇಷ್ಟು ದಿನ ಕಳೆಯೋವರೆಗೂ ಆತನಿಗೆ ತಾನೊಂದು ಬಲೀ ಕಾ ಬಕ್ರಾ ಅನ್ನೋ ವಿಚಾರ ಗೊತ್ತೇ ಇರ್ಲಿಲ್ಲ.. ಈ ಕಥೆಯ ಕಂಪ್ಲೀಟ್​ ಡೀಟೇಲ್ಸ್​​ ನೋಡ್ಬೇಕು ಅಂದ್ರೆ 2018ಕ್ಕೆ ರಿವೈಂಡ್​ ಹಾಕೊಂಡು ಹೋಗ್ಬೇಕು.

ಮಿಕ ಸಿಗ್ತಿದ್ದಂತೆ ಶುರು ವಸೂಲಿ

ಸಂತೋಷ್ ಫೇಸ್​​ಬುಕ್​​ನಲ್ಲಿ ಮಹಿಳೆ ಪರಿಚಯ ಮಾಡಿಕೊಂಡಿದ್ದ. 2018ರಲ್ಲಿ ತಾನು ಕೆಲಸ ಮಾಡುವ ಕಂಪನಿಯಲ್ಲಿ ಕೆಲಸ ಕೊಡಿಸಿದ್ದ. ಪರಿಚಯ ಮುಂದುವರೆದು ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಬಳಿಕ ಸಂತೋಷ್​ ಮತ್ತು ಮಹಿಳೆ ಮದುವೆಯಾಗಲೂ ನಿರ್ಧರಿಸಿದ್ದರು. ಅದ್ರೆ ಈ ಮೊದಲೇ ಮಹಿಳೆಗೆ ಮದುವೆಯಾಗಿರುವುದು ಬೆಳಕಿಗೆ ಬಂದಿತ್ತು. ಅದನ್ನ ಆತನಿಗೆ ಗೊತ್ತಾಗದಂತೆ ವಿಷಯ ಮುಚ್ಚಿಟ್ಟು ಸಂತೋಷ್​​ ಜೊತೆ ಮದುವೆ ಮಾಡಲು ಮಹಿಳೆಯ ಅಕ್ಕ ಭಾವ ಪ್ಲಾನ್​ ಮಾಡ್ತಾರೆ. ಜೊತೆಗೆ ಮದುವೆಗೂ ಮುನ್ನವೇ ಹಣ ವಸೂಲಿ ಕೆಲಸ ಶುರುವಾಗಿತ್ತು.

ನಾದಿನಿ ಜೊತೆ ಮದುವೆ ಮಾಡಿಸಲು ಮಹಿಳೆಯ ಭಾವ ಐದು ಲಕ್ಷ ಪೀಕಿದ್ರೆ, ಅಕ್ಕ 15 ಲಕ್ಷ ಮೌಲ್ಯದ ಆಭರಣಗಳಿಗೆ ಸ್ಕೆಚ್​ ಹಾಕಿದಳು. ಇದು ಮುಗೀತಿದ್ದಂತೆ ಮಹಿಳೆಯ ಆಟ ಶುರು ತನಗೆ ಐಫೋನ್​ ಬೇಕು ಅಂತ ಮದುವೆಗೆ ಮುನ್ನವೇ ಕೇಳಿದಳು. ಮನ ಮೆಚ್ಚಿದ ಹುಡುಗಿ ಕೇಳಿದಳು ಎಂದು 2 ಲಕ್ಷ 60 ಸಾವಿರ ಕೊಟ್ಟು ಐಫೋನ್‌ಗಳನ್ನ ಕೊಡಿಸಿದ್ದ. ಬಳಿಕ ಮದುವೆಯೂ ಆಯ್ತು. ಆದ್ರೆ ಮದುವೆಯಾಗಿ ಮೂರು ತಿಂಗಳಾದ್ರೂ ಯುವತಿ ತನ್ನ ಜೊತೆ ದೈಹಿಕ ಸಂಪರ್ಕ ಸಾಧಿಸಿಲ್ಲ. ಹಣ ಒಡವೆ ಫೋನ್​ ತಗೊಂಡು ಈಗ ಕೈಗೆ ಸಿಗದಂತೆ ನನ್​ ಹೆಂಡ್ತಿ ಓಡಾಡ್ತಿದ್ದಾಳೆ ಅಂತ ಸಂತೋಷ್​ ಚಂದ್ರಾ ಲೇಔಟ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಅಷ್ಟೇ ಅಲ್ಲ.. ಹೆಂಡ್ತಿ ಕೈಗೆ ಸಿಗ್ತಿಲ್ಲ.. ನನ್ನ ಬಿಟ್ಟು ಎಲ್ಲೋ ಹೋಗಿದ್ದಾಳೆ ಅಂತಾ ಹೇಳ್ತಿರೋ ಸಂತೋಷ್​ ಬಳಿ ಮಹಿಳೆಯ ಭಾವ ಆಕೆ ಎಸ್ಕೇಪ್​ ಆದ್ಮೇಲೂ ಹಣ ಪೀಕಿದ್ದಾನೆ ಅನ್ನೋ ಆರೋಪ ಮಾಡ್ತಿದ್ದಾರೆ ಸಂತೋಷ್​​. ಅದೇನೇ ಇರ್ಲಿ ಮದುವೆ ಅನ್ನೋ ಬಂಧದಲ್ಲಿ ಬದುಕು ಕಟ್ಟಿಕೊಳ್ಳಲು ಸಿದ್ದವಾದವನಿಗೆ ಮನಮೆಚ್ಚಿದವಳು ಕೈಕೊಟ್ಟು ಹೋಗಿದ್ದು ವಿಪರ್ಯಾಸ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫೇಸ್​​ಬುಕ್​​ನಲ್ಲಿ ಪರಿಚಯ; ನಂತರ ಮದುವೆ; ಈಕೆಯನ್ನು ನಂಬಿ ಲಕ್ಷ ಲಕ್ಷ ಕಳ್ಕೊಂಡ ಯುವಕ

https://newsfirstlive.com/wp-content/uploads/2023/09/Marriage-1-1.jpg

Load More