Advertisment

ಬೆಳಗಾವಿ ಸೇಲೋ ಟೇಪ್ ಕಾರ್ಖಾನೆಯಲ್ಲಿ ಭಯಾನಕ ಸ್ಫೋಟ.. ಕ್ಷಣಾರ್ಧದಲ್ಲಿ ಇಡೀ ಫ್ಯಾಕ್ಟರಿಗೆ ಬೆಂಕಿ

author-image
Bheemappa
Updated On
ಬೆಳಗಾವಿ ಸೇಲೋ ಟೇಪ್ ಕಾರ್ಖಾನೆಯಲ್ಲಿ ಭಯಾನಕ ಸ್ಫೋಟ.. ಕ್ಷಣಾರ್ಧದಲ್ಲಿ ಇಡೀ ಫ್ಯಾಕ್ಟರಿಗೆ ಬೆಂಕಿ
Advertisment
  • 15ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕೆಲಸ
  • ಕಾಣೆಯಾದ ಕಾರ್ಮಿಕನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ
  • ರಾತ್ರಿ ವೇಳೆ ಬೆಂಕಿ ನಂದಿಸಲು ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸ

ಬೆಳಗಾವಿ ತಾಲೂಕಿನ ನಾವಗೆ ಗ್ರಾಮದ ಬಳಿ ಇರುವ ಸ್ನೇಹಂ ಸೇಲೋ ಟೇಪ್ ಕಾರ್ಖಾನೆಯಲ್ಲಿ ರಾತ್ರಿ ಭಯಾನಕ ಸ್ಫೋಟ ಸಂಭವಿಸಿದೆ. ಕಾರ್ಖಾನೆಯಲ್ಲಿ ಏಕಾಏಕಿ ಸ್ಫೋಟಗೊಂಡಿದ್ರಿಂದ ಒಳಗೆ ಕೆಲಸ ಮಾಡ್ತಿದ್ದ ಕಾರ್ಮಿಕರು ಹೊರಗಡೆ ಓಡಿ ಬಂದು ಪ್ರಾಣ ರಕ್ಷಣೆ ಮಾಡಿಕೊಂಡ್ರು. ಭೀಕರ ಅಗ್ನಿ ದುರಂತದಲ್ಲಿ ಓರ್ವ ಕಾರ್ಮಿಕ ಕಾಣೆಯಾಗಿದ್ದು, ಅವರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

Advertisment

ಇದನ್ನೂ ಓದಿ:ನೋ ಬಾಲ್‌ಗೆ ಮಕ್ಕಳ ಗಲಾಟೆ.. ಬ್ಯಾಟ್​ನಿಂದ ಹೊಡೆದು ಬಾಲಕನ ಹತ್ಯೆ; ಆದರೂ ಮಾನವೀಯತೆ ಮೆರೆದ ತಾಯಿ!

ಧಗಧಗಿಸಿ ಹೊತ್ತಿ ಉರಿಯುತ್ತಿರುವ ಕಾರ್ಖಾನೆಯ ಅಗ್ನಿ ನಂದಿಸಲು ಅಗ್ನಿ ಶಾಮಕದಳ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಜಿಲ್ಲಾಡಳಿತ ರಾತ್ರಿ ಇಡೀ ಕಾರ್ಖಾನೆ ಮುಂದೆ ಠಿಕಾಣಿ ಹೂಡಿತ್ತು. ಬೆಳಗಾವಿ ತಾಲೂಕಿನ ನಾವಗೆ ಗ್ರಾಮದ ಬಳಿ ಸ್ನೇಹಂ ಟೇಪ್ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಸ್ಫೋಟಕ್ಕೆ ಕಾರ್ಮಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ₹200 ಕೋಟಿಗೂ ಅಧಿಕ ಮೊತ್ತದ ದೇಣಿಗೆ ನೀಡಿದ ಹಳೆ ವಿದ್ಯಾರ್ಥಿ.. ಭಾರತದ ಇತಿಹಾಸದಲ್ಲೇ ಹೊಸ ದಾಖಲೆ! 

Advertisment

publive-image

ಬೆಳಗಾವಿಯಲ್ಲಿ ಭಾರೀ ಅಗ್ನಿ ದುರಂತ, ಓರ್ವ ಮಿಸ್ಸಿಂಗ್!

ಕೆನ್ನಾಲೆಗಳು ನೋಡು ನೋಡುತ್ತಿದ್ದಂತೆ ಇಡೀ ಪ್ಯಾಕ್ಟರಿಯನ್ನ ಅವರಿಸಿ ಕ್ಷಣಾರ್ಧದಲ್ಲಿ ಪ್ಯಾಕ್ಟರಿ ಧಗಧಗಿಸಿ ಹೊತ್ತಿ ಉರಿದಿದೆ. ಬೆಂಕಿ ಆವರಿಸಿಕೊಳ್ತಿದ್ದಂತೆ ಕೆಲಸ ಮಾಡ್ತಿದ್ದ 35ಕ್ಕೂ ಹೆಚ್ಚು ಸಿಬ್ಬಂದಿ ಜೀವ ಉಳಿಸಿಕೊಳ್ಳಲು ಹೊರ ಓಡಿ ಬಂದಿದ್ದಾರೆ. ಇಷ್ಟೊತ್ತಿಗೆ ಬೆಂಕಿ ಕೆನ್ನಾಲಿಗೆ ತಗುಲಿ ಮೂವರು ಗಾಯಗೊಂಡಿದ್ದು, ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಅಬ್ಬಾ.. ನಿಶ್ಚಿತಾರ್ಥಕ್ಕೆ ಆನ್​ಲೈನ್​ನಲ್ಲಿ ಫುಡ್​ ಆರ್ಡರ್ ಮಾಡಿದ ನವಜೋಡಿ.. ನೆಟ್ಟಿಗರು ಫುಲ್ ಶಾಕ್‌!

ಇನ್ನೂ ವಿಚಾರ ಗೊತ್ತಾಗ್ತಿದ್ದಂತೆ ಇಡೀ ಜಿಲ್ಲಾಡಳಿತವೇ ಸ್ಥಳದಲ್ಲಿ ಠಿಕಾಣಿ ಹೂಡಿತು. 15ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವಲ್ಲಿ ನಿರತವಾಗಿದ್ವು.. ಘಟನೆಯಲ್ಲಿ ಮಾರ್ಕಂಡೇಯ ನಗರ ನಿವಾಸಿ ಕಾರ್ಖಾನೆ ಕಾರ್ಮಿಕ ಯಲ್ಲಪ್ಪ ಗೂಂಡ್ಯಾಗೋಳ ಬೆಂಕಿ ಅನಾಹುತದ ನಂತ್ರ ಕಾಣೆ ಆಗಿದ್ದಾರೆ. ಇನ್ನು, ಯಲ್ಲಪ್ಪನ ಕುಟುಂಬಸ್ಥರು ಕಾರ್ಖಾನೆ ಮುಂದೆ ಜಮಾಯಿಸಿ ಕಣ್ಣೀರು ಹಾಕಿದ್ರು.

Advertisment

ರಾತ್ರಿ ಇಡೀ ಕಾರ್ಯಾಚರಣೆ ಮುಂದುವರೆದಿದ್ದು, ಕಾರ್ಖಾನೆ ಮಾಲೀಕನನ್ನ ಗ್ರಾಮೀಣ ಠಾಣೆ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಇನ್ನೂ ಘಟನೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment