newsfirstkannada.com

ವಿವಾದಾತ್ಮಕ ತೀರ್ಪಿಗೆ ಆರ್​​ಸಿಬಿ ಕ್ಯಾಪ್ಟನ್​​ ಬಲಿ; ಫಾಫ್​​ ಔಟೋ ಅಲ್ಲವೋ?

Share :

Published May 18, 2024 at 9:38pm

Update May 18, 2024 at 9:39pm

  ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್​​

  ಇಂದು ಚೆನ್ನೈ ಸೂಪರ್​​ ಕಿಂಗ್ಸ್​, ಆರ್​​ಸಿಬಿ ತಂಡದ ಮಧ್ಯೆ ರೋಚಕ ಪಂದ್ಯ

  ಅಂಪೈರ್​​ ವಿವಾದಾತ್ಮಕ ತೀರ್ಪಿಗೆ ಆರ್​​ಸಿಬಿ ಕ್ಯಾಪ್ಟನ್​​​ ಫಾಫ್​ ಡುಪ್ಲೆಸಿಸ್​ ಬಲಿ

ಇಂದು ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಮಾಡು ಇಲ್ಲವೇ ಮಾಡಿ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳು ಮುಖಾಮುಖಿ ಆಗಿವೆ. ಟಾಸ್​ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಕ್ಯಾಪ್ಟನ್​ ರುತುರಾಜ್​​ ಗಾಯಕ್ವಾಡ್​​ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಆರ್​​ಸಿಬಿ ಫಸ್ಟ್​ ಬ್ಯಾಟಿಂಗ್​ ಮಾಡುತ್ತಿದೆ.

ಇನ್ನು, ಪಂದ್ಯ ನಡೆಯುತ್ತಿದ್ದಾಗಲೇ ಮಳೆ ಬಂದ ಕಾರಣ ಕೆಲವು ಕಾಲ ಮ್ಯಾಚ್​ ಸ್ಥಗಿತಗೊಂಡಿತ್ತು. ಬಳಿಕ ಪಂದ್ಯ ಶುರುವಾದ ಬಳಿಕ ಬಾಲ್​​ ಟರ್ನ್​ ಆಗುತ್ತಿತ್ತು. ಎಷ್ಟು ಪ್ರಯತ್ನಪಟ್ರೂ ರನ್​ಗಳು ಬರುತ್ತಲೇ ಇರಲಿಲ್ಲ. ಇದರ ಮಧ್ಯೆಯೂ ಆರ್​​ಸಿಬಿ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಭರ್ಜರಿ ಬ್ಯಾಟಿಂಗ್​ ಮಾಡಿದ್ರು.

ತಾನು ಆಡಿದ 29 ಬಾಲ್​ನಲ್ಲಿ ಬರೋಬ್ಬರಿ 4 ಸಿಕ್ಸರ್​ ಜತೆಗೆ 3 ಫೋರ್​ ಸಿಡಿಸಿದ್ರು. ಬರೋಬ್ಬರಿ 47 ರನ್​ ಸಿಡಿಸಿ ಕೇವಲ ಮೂರು ರನ್​ಗಳಿಂದ ಅರ್ಧಶತಕ ವಂಚಿತರಾದ್ರು. ಸಿಕ್ಸ್​ ಹೊಡೆಯಲು ಹೋಗಿ ಔಟಾದ್ರು. ಸ್ಲೋ ಪಿಚ್​ ಮಧ್ಯೆಯೂ ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ 162ಕ್ಕೂ ಹೆಚ್ಚಿತ್ತು.

ಇನ್ನು, ಕೊಹ್ಲಿ ಔಟಾದ ಬಳಿಕ ಫಾಫ್​ ಡುಪ್ಲೆಸಿಸ್​​​ ಭರ್ಜರಿ ಬ್ಯಾಟಿಂಗ್​ ಮುಂದುವರಿಸುತ್ತಿದ್ದರು. ತಾನು ಎದುರಿಸಿದ 39 ಬಾಲ್​ನಲ್ಲಿ 3 ಸಿಕ್ಸರ್​​, 3 ಫೋರ್​ ಸಮೇತ 54 ರನ್​​ ಚಚ್ಚಿದ್ರು. ಆದ್ರೆ, ರಜತ್​ ಪಾಟಿದಾರ್​ ಹೊಡೆತಕ್ಕೆ ಬೈ ಮಿಸ್​ ಆಗಿ ರನ್​ ಔಟ್​ ಆಗಿದ್ದಾರೆ. ರಜತ್​ ಪಾಟಿದಾರ್​ ಸ್ಟ್ರೈಟ್​​ ಹಿಟ್​ ಹೊಡೆದ್ರು. ಬಾಲ್​​ ಬೌಲರ್​ ಕೈ ಟಚ್​ ಆಗಿ ವಿಕೆಟ್​ಗೆ ಬಿದ್ದಿದೆ. ಫಾಫ್​ ಔಟ್​​ ಅಲ್ಲದೇ ಹೋದ್ರೂ ಹೇರ್​​ನಲ್ಲಿತ್ತು ಬ್ಯಾಟ್​ ಎಂದು ರನೌಟ್​ ನೀಡಿದ್ರು.

ಇದನ್ನೂ ಓದಿ: 6,6,6,6,4,4,4; ಮಳೆ ಮಧ್ಯೆಯೂ ಭರ್ಜರಿ ಬ್ಯಾಟಿಂಗ್​ ಮಾಡಿದ ಕಿಂಗ್​ ಕೊಹ್ಲಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿವಾದಾತ್ಮಕ ತೀರ್ಪಿಗೆ ಆರ್​​ಸಿಬಿ ಕ್ಯಾಪ್ಟನ್​​ ಬಲಿ; ಫಾಫ್​​ ಔಟೋ ಅಲ್ಲವೋ?

https://newsfirstlive.com/wp-content/uploads/2024/05/Faf-Out.jpg

Load More