IPL ಸೀಸನ್ 17ರಲ್ಲಿ ಆರ್ಸಿಬಿ ಆಟ ಅಂತ್ಯ
ಕಪ್ ಬರ ನೀಗಲಿಲ್ಲ.. ಕನಸು ನನಸಾಗಲಿಲ್ಲ..!
ಥ್ಯಾಂಕ್ಯೂ ಫಾಫ್.. ನಾಯಕನಿಗೆ ಸೋಲಿನ ವಿದಾಯ?
ಐಪಿಎಲ್ ಸೀಸನ್ 17ರಲ್ಲಿ ಆರ್ಸಿಬಿ ಆಟ ಅಂತ್ಯವಾಗಿದೆ. ಟೂರ್ನಿಗೆ ಸೋಲಿನ ವಿದಾಯ ಹೇಳಿದ ಬೆನ್ನಲ್ಲೇ, ಆರ್ಸಿಬಿಯಲ್ಲೀಗ ಬದಲಾವಣೆಯ ಸದ್ದು ಜೋರಾಗಿದೆ. ನಾಯಕ ಫಾಫ್ ಡುಪ್ಲೆಸಿಗೆ ಸೆಂಡ್ ಆಫ್ ನೀಡಲು ಕೌಂಟ್ಡೌನ್ ಶುರುವಾಗಿದೆ.
ಸೀಸನ್ 17ರ ಐಪಿಎಲ್ಗೆ ಆರ್ಸಿಬಿ ಸೋಲಿನ ವಿದಾಯ ಹೇಳಿದೆ. ಅತ್ಯಂತ ಹೀನಾಯ ಆರಂಭ ಮಾಡಿ ಆ ಬಳಿಕ ಫಿನಿಕ್ಸ್ನಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರ್ಮಿ ಈ ಸೀಸನ್ನಲ್ಲಿ ಎದ್ದು ಬಂದಿತ್ತು. ಆರ್ಸಿಬಿ ರಣರೋಚಕ ರೀತಿಯಲ್ಲಿ ಕಮ್ಬ್ಯಾಕ್ ಮಾಡಿದ ಶೈಲಿ ಈ ಸಲ ಕಪ್ ನಮ್ದೇ ಅನ್ನೋ ಭರವಸೆಯನ್ನು ಹೆಚ್ಚಿಸಿತ್ತು. ಸತತ 6 ಪಂದ್ಯ ಗೆದ್ದು ಪ್ಲೇ ಆಫ್ಗೆ ಎಂಟ್ರಿ ಕೊಟ್ಟ ಆರ್ಸಿಬಿ, ಎಲಿಮಿನೇಟರ್ ಫೈಟ್ನಲ್ಲಿ ಎಡವಿತು.
ಇದನ್ನೂ ಓದಿ:Breaking News: ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್.. ಐದು ದಿನ ಎಣ್ಣೆ ಎಲ್ಲೂ ಸಿಗಲ್ಲ..!
ಕಪ್ ಬರ ನೀಗಲಿಲ್ಲ.. ಕನಸು ನನಸಾಗಲಿಲ್ಲ
ನಮೋ ಮೈದಾನದಲ್ಲಿ ರಾಜಸ್ಥಾನ್ ಎದುರು ಸೋತ ಆರ್ಸಿಬಿ, ಟೂರ್ನಿಯಿಂದ ಹೊರಬಿತ್ತು. ಇದ್ರೊಂದಿಗೆ ಕಪ್ ಕನಸೂ ನುಚ್ಚು ನೂರಾಯ್ತು. ಇಷ್ಟೇ ಅಲ್ಲ.. ಆರ್ಸಿಬಿಯೊಂದಿಗೆ ನಾಯಕ ಫಾಫ್ ಡುಪ್ಲೆಸಿಯ ಭಾಂದವ್ಯ ಕೂಡ ಬಹುತೇಕ ಅಂತಿಮ ಘಟ್ಟ ತಲುಪಿದೆ. ಕಳೆದ 3 ಸೀಸನ್ಗಳಿಂದ ಆರ್ಸಿಬಿಯನ್ನ ಮುನ್ನಡೆಸಿದ ನಾಯಕ ಡುಪ್ಲೆಸಿ, ಮುಂದಿನ ಸೀಸನ್ನಲ್ಲಿ ಆರ್ಸಿಬಿ ಪರ ಆಡೋದು ಅನುಮಾನ.
ಮೆಗಾ ಆಕ್ಷನ್ಗೂ ಮುನ್ನ ತಂಡದಿಂದ ರಿಲೀಸ್
ಸೌತ್ ಆಫ್ರಿಕಾದ ಫಾಫ್ ಡುಪ್ಲೆಸಿ ಆರ್ಸಿಬಿಗೆ ಬಂದು 3 ವರ್ಷ ಆಯ್ತು. ಡುಪ್ಲೆಸಿ ತಂಡ ಸೇರಿದಾಗಿಂದ ಹೀನಾಯ ಪರ್ಫಾಮೆನ್ಸ್ ಏನು ನೀಡಿಲ್ಲ. ನಾಯಕನಾಗಿ ಬ್ಯಾಟ್ಸ್ಮನ್ ಆಗಿ ತಂಡಕ್ಕೆ ನೆರವಾಗಿದ್ದಾರೆ. 3 ವರ್ಷದಲ್ಲಿ 2 ಬಾರಿ ತಂಡವನ್ನೂ ಪ್ಲೇ ಆಫ್ಗೆ ಕೊಂಡೊಯ್ದಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿದ್ರೂ, ಮುಂಬರೋ ಮೆಗಾ ಆಕ್ಷನ್ನಲ್ಲಿ ಡುಪ್ಲೆಸಿಯನ್ನ ತಂಡದಿಂದ ಕೈ ಬಿಡೋ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಕಾರಣಗಳು ಇವೆ.
ಇದನ್ನೂ ಓದಿ:ಕಪ್ ಗೆಲ್ಲಬೇಕು ಅಂದರೆ ಕೊಹ್ಲಿ RCB ತೊರೆಯಬೇಕು -ಕಿಡಿ ಹೊತ್ತಿಸಿದ ಮಾಜಿ ಆಟಗಾರ
39ರ ಗಡಿ ದಾಟಿದ ವಯಸ್ಸು, ಆಟವೂ ಇನ್ಕನ್ಸಿಸ್ಟೆಂಟ್
ಫಾಫ್ ಡುಪ್ಲೆಸಿ ವಯಸ್ಸು ಸದ್ಯ 39ರ ಗಡಿ ದಾಟಿದೆ. ಮುಂದಿನ ಜುಲೈ ಬಂದ್ರೆ 40ನೇ ವಸಂತಕ್ಕೆ ಕಾಲಿಡಲಿದ್ದಾರೆ. ಅತ್ಯದ್ಭುತ ಫಿಟ್ನೆಸ್ ಹೊಂದಿದ್ದಾರೆ ನಿಜ. ಹಳೆಯ ಚಾರ್ಮ್ ಕಳೆದು ಹೋಗಿದೆ. ಬ್ಯಾಟಿಂಗ್ನಲ್ಲಂತೂ ಇನ್ಕನ್ಸಿಸ್ಟೆಂಟ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಈ ಸೀಸನ್ನ ಆರಂಭಿಕ ಪಂದ್ಯಗಳಲ್ಲಂತೂ ರನ್ಗಳಿಕೆಗೆ ಪರದಾಡಿದ್ರು. ಒಟ್ಟಾರೆ, 15 ಪಂದ್ಯವನ್ನಾಡಿದ ಫಾಫ್ ಡುಪ್ಲೆಸಿ ಕೇವಲ 29.20ರ ಸರಾಸರಿಯಲ್ಲಿ ರನ್ಗಳಿಸಿದ್ರು.
ಭವಿಷ್ಯದ ನಾಯಕನ ಹುಡುಕಾಟದಲ್ಲಿ ಆರ್ಸಿಬಿ
ಈ ಬಾರಿಯ ಮೆಗಾ ಆಕ್ಷನ್ಗೂ ಮುನ್ನ ತಂಡದಲ್ಲಿ ಎಷ್ಟು ಆಟಗಾರರನ್ನ ರಿಟೈನ್ ಮಾಡಿಕೊಳ್ಳಬಹುದು ಅನ್ನೋದ್ರ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಆರ್ಸಿಬಿ ಮ್ಯಾನೇಜ್ಮೆಂಟ್ ಮೇಜರ್ ಸರ್ಜರಿ ಮಾಡೋ ಸಾಧ್ಯತೆ ದಟ್ಟವಾಗಿದೆ. ಹಿರಿಯ ಆಟಗಾರರಿಗೆ ಕೊಕ್ ಕೊಟ್ಟು, ಯುವ ಆಟಗಾರನ್ನು ಉಳಿಸಿಕೊಳ್ಳೋ ಲೆಕ್ಕಾಚಾರ ಫ್ರಾಂಚೈಸಿಯದ್ದಾಗಿದೆ. ನಾಯಕನ ವಿಚಾರದಲ್ಲೂ ಇದೇ ಚಿಂತನೆ ನಡೆದಿದೆ.
ಇದನ್ನೂ ಓದಿ:ಮ್ಯಾಕ್ಸಿ ಆರ್ಸಿಬಿ ಸೋಲಿಗೆ ಹೆಂಗೆಲ್ಲ ಕಾರಣರಾದರು? ಕಂಪ್ಲೀಟ್ ಡೀಟೈಲ್ಸ್..!
ಮುಂದಿನ ಸೀಸನ್ನಲ್ಲಿ ಆರ್ಸಿಬಿಗೆ ನೂತನ ನಾಯಕ
ಫಾಫ್ ಡುಪ್ಲೆಸಿಗೆ ಕೊಕ್ ಕೊಟ್ಟು, ಭವಿಷ್ಯದ ದೃಷ್ಟಿಯಿಂದ ಹೊಸ ನಾಯಕನ ನೇಮಿಸೋ ಚರ್ಚೆ ತಂಡದ ಆಂತರಿಕ ವಲಯದಲ್ಲಿ ಈಗಾಗಲೇ ನಡೆದಿದೆ ಎನ್ನಲಾಗ್ತಿದೆ. ಯುವ ಆಟಗಾರನಿಗೆ ಪಟ್ಟ ಕಟ್ಟಿ, ಮುಂದಿನ ಕೆಲ ವರ್ಷಗಳ ಕಾಲ ತಂಡದ ಸಾರಥ್ಯ ನೀಡೋ ಲೆಕ್ಕಾಚಾರವಿದೆ. ಕನ್ನಡಿಗ ಕೆ.ಎಲ್ ರಾಹುಲ್ನ ತಂಡಕ್ಕೆ ಕರೆ ತರೋ ಕಸರತ್ತು ತೆರೆಮರೆಯಲ್ಲಿ ಆರಂಭವಾಗಿದೆ.
ಐಪಿಎಲ್ ಟೂರ್ನಿಯಿಂದ ಆರ್ಸಿಬಿ ಹೊರ ಬಿದ್ದ ಬೆನ್ನಲ್ಲೇ ಬದಲಾವಣೆಯ ಚರ್ಚೆಗಳು ಜೋರಾಗಿವೆ. 3 ವರ್ಷಗಳ ಕಾಲ ಆರ್ಸಿಬಿ ತಂಡವನ್ನ ಮುನ್ನಡೆಸಿದ ಫಾಫ್ ಡುಪ್ಲೆಸಿಗೆ ಹೆಸರೇ ಸದ್ಯ ಮುಂಚೂಣಿಯಲ್ಲಿದೆ. ಫಾಫ್ ಡುಪ್ಲೆಸಿಗೆ ಕೊಕ್ ಕೊಟ್ಟು, ನೂತನ ನಾಯಕನಿಗೆ ಮಣೆ ಹಾಕೋ ಚರ್ಚೆಗಳೂ ನಡೆದಿವೆ. ಈ ವರ್ಷಾಂತ್ಯದಲ್ಲಿ ಮೆಗಾ ಆಕ್ಷನ್ ನಡೆಯೋದ್ರಿಂದ ಎಲ್ಲಾ ಅಂತೆ-ಕಂತೆ ಶೀಘ್ರದಲ್ಲೇ ಬ್ರೇಕ್ ಬೀಳಲಿದೆ.
ಇದನ್ನೂ ಓದಿ:ಕರ್ನಾಟಕದಿಂದ ತಿರುಪತಿಗೆ ಹೊರಟಿದ್ದ ಕಾರು ಭೀಕರ ಅಪಘಾತ.. ನಾಲ್ವರು ಸಾವು
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್