/newsfirstlive-kannada/media/post_attachments/wp-content/uploads/2024/05/Kohli_Faf_RCB1.jpg)
ಐಪಿಎಲ್ನ ಮೆಗಾ ಹರಾಜು ಮೊದಲ ದಿನ ಮುಗಿದಿದ್ದು 2ನೇ ದಿನದ ಆಕ್ಷನ್ ಆರಂಭವಾಗಿದೆ. ಈಗಾಗಲೇ ಹಲವು ಆಟಗಾರರು ಮಾರಾಟ ಆಗಿದ್ದು, ಫ್ರಾಂಚೈಸಿಗಳು ಅಳೆದು, ತೂಗಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುತ್ತಿವೆ. ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಆಗಿದ್ದ ಫಾಫ್ ಡು ಪ್ಲೆಸಿಸ್ ಅವರು ಬೇರೆ ತಂಡವನ್ನು ಸೇರಿಕೊಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಅವರು ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿರುವ ಮೆಗಾ ಆಕ್ಷನ್ನಲ್ಲಿ ಫಾಫ್ ಡು ಪ್ಲೆಸಿಸ್ ಅವರ ಬೇಸ್ ಬೆಲೆ 2 ಕೋಟಿ ರೂಪಾಯಿ ಆಗಿತ್ತು. ಯಾರು ಕೂಡ ಹರಾಜು ಕೂಗದ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ಹೆಸರು ಕೂಗಿ ಆರ್ಸಿಬಿ ಕ್ಯಾಪ್ಟನ್ನ್ನು ಖರೀದಿ ಮಾಡಿದೆ.
ಇದನ್ನೂ ಓದಿ:Mega Auction; ಎಲ್ಲಾ ಫ್ರಾಂಚೈಸಿಗಿಂತ RCB ಪರ್ಸ್ನಲ್ಲೇ ಹೆಚ್ಚು ಹಣ.. ಕೇವಲ 5 ಕೋಟಿ ಉಳಿಸಿಕೊಂಡ ಟೀಮ್?
ಡು ಪ್ಲೆಸಿಸ್ ಅವರನ್ನು ಖರೀದಿ ಮಾಡಲು ಆರ್ಸಿಬಿಗೆ ಆರ್ಟಿಎಂ ಅವಕಾಶ ಇತ್ತು. ಆದರೆ ಮೆಗಾ ಆಕ್ಷನ್ನಲ್ಲಿ ಆರ್ಟಿಎಂ ಅನ್ನು ಆರ್ಸಿಬಿ ಬಳಕೆ ಮಾಡಲಿಲ್ಲ. ಅಲ್ಲದೇ ಅವರನ್ನು ಖರೀದಿ ಮಾಡಲು ಬೆಂಗಳೂರು ಉತ್ಸಹ ತೋರಲಿಲ್ಲ. ಹೀಗಾಗಿ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಬೇಕಾಯಿತು. ಇನ್ನು ಆರ್ಸಿಬಿ ಕ್ಯಾಪ್ಟನ್ ಆಗಿದ್ದ ಫಾಫ್ ಡು ಪ್ಲೆಸಿಸ್ ತಂಡವನ್ನು ಫೈನಲ್ವರೆಗೆ ಕರೆದುಕೊಂಡು ಹೋಗದ ಕಾರಣ ಆರ್ಸಿಬಿ ಕೊಂಡುಕೊಳ್ಳಲು ಮುಂದೆ ಬರಲಿಲ್ಲ ಎಂದು ಹೇಳಬಹುದು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ