/newsfirstlive-kannada/media/post_attachments/wp-content/uploads/2024/03/Faf_Kohli_RCB.jpg)
ಇತ್ತೀಚೆಗೆ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಮುಗಿದಿದೆ. ಈ ಮಹತ್ವದ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ. ಟೀಮ್ ಇಂಡಿಯಾ ಸೋಲಿಗೆ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯೇ ಕಾರಣ ಎನ್ನುವ ಮಾತುಗಳು ಕೇಳಿ ಬಂದಿವೆ.
ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ ಕೊಹ್ಲಿ ಸತತ ಬ್ಯಾಟಿಂಗ್ ವೈಫಲ್ಯದಿಂದ ಟೀಕೆಗೆ ಒಳಗಾಗಿದ್ದಾರೆ. ಮಾಜಿ ಆಟಗಾರ ಇರ್ಫಾನ್ ಪಠಾಣ್ ಮತ್ತು ಸುನಿಲ್ ಗವಾಸ್ಕರ್ ಸೇರಿದಂತೆ ಹಲವರು ಕೊಹ್ಲಿ ಆಟವನ್ನು ಟೀಕಿಸಿದ್ದಾರೆ. ಕೊಹ್ಲಿ ಕೂಡಲೇ ನಿವೃತ್ತಿಯಾಗಲಿ ಎನ್ನುವ ಮಾತುಗಳು ಕೇಳಿ ಬಂದಿವೆ. ಈಗ ಕೊಹ್ಲಿ ಬಗ್ಗೆ ಆರ್ಸಿಬಿ ಮಾಜಿ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಮಾತಾಡಿದ್ದಾರೆ.
ಕೊಹ್ಲಿ ಬಗ್ಗೆ ಫಾಫ್ ಏನಂದ್ರು?
ಯಾವಾಗ ನಿವೃತ್ತಿ ಆಗಬೇಕು ಎಂಬುದು ವಿರಾಟ್ ಕೊಹ್ಲಿ ನಿರ್ಧಾರ. ಆಟಗಾರನಿಗೆ ಯಾವಾಗ ರೀಟೈರ್ ಆಗಬೇಕು ಅನಿಸುತ್ತದೋ ಆಗ ನಿವೃತ್ತಿ ನಿರ್ಧಾರ ಕೈಗೊಳ್ಳಬಹುದು. ಕೊಹ್ಲಿ ರೀತಿಯ ಆಟಗಾರರು ಮೈದಾನದಲ್ಲೇ ಇರೋದು ಒಂದು ಅದೃಷ್ಟ. ಕೊಹ್ಲಿ ಕ್ರಿಕೆಟ್ ಆಡುತ್ತಿರುವುದು ಟೀಮ್ ಇಂಡಿಯಾ ಪಾಲಿಗೆ ಅದೃಷ್ಟ ಎಂದರು.
ಪ್ರತಿಯೊಬ್ಬ ಆಟಗಾರನಿಗೂ ತಾನು ಯಾವಾಗ ನಿವೃತ್ತಿ ಹೊಂದಬೇಕು ಎಂದು ತಿಳಿದಿರುತ್ತದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮವಾಗಿ ನಾನು ರನ್ ಕಲೆ ಹಾಕುವಲ್ಲಿ ವಿಫಲನಾಗುತ್ತಿದ್ದೆ. ಯುವ ಆಟಗಾರರು ಬಂದ ಮೇಲೆ ನಾನು ಒಂದು ನಿರ್ಧಾರಕ್ಕೆ ಬಂದೆ. ಇದು ನನ್ನ ಸಮಯವಲ್ಲ, ನಾನು ನನ್ನ ಆಟದ ಉತ್ತುಂಗದಲ್ಲಿ ಇದ್ದಾಗಲೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದರು.
ಕೊಹ್ಲಿ ಕಳಪೆ ಪ್ರದರ್ಶನ
ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ರನ್ ಬರ ಅನುಭವಿಸಿದರು. ಇವರು ಬಾರ್ಡರ್ ಗವಾಸ್ಕರ್ ಸರಣಿಯ 5 ಪಂದ್ಯಗಳಲ್ಲಿ 190 ರನ್ ಸಿಡಿಸಿ ನಿರಾಸೆ ಅನುಭವಿಸಿದರು. ಈ ಸರಣಿಯಲ್ಲಿ ಇವರ ಬ್ಯಾಟ್‌ನಿಂದ ಒಂದು ಶತಕ ಮಾತ್ರ ಬಂದಿದೆ.
ಇದನ್ನೂ ಓದಿ:2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಬಿಗ್ ಶಾಕ್; ತಂಡದಿಂದಲೇ ಕ್ಯಾಪ್ಟನ್ಗೆ ಕೊಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ