/newsfirstlive-kannada/media/post_attachments/wp-content/uploads/2024/05/Faf-Duplessis_RCB_1.jpg)
2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಕೊನೆಗೂ ಮುಗಿದಿದೆ. ನಾಕೌಟ್​ ಹಂತದಲ್ಲೇ ಆರ್​​ಸಿಬಿ ಎಲಿಮಿನೇಟರ್​​ ಪಂದ್ಯದಲ್ಲಿ ಸೋತು ಐಪಿಎಲ್​ನಿಂದ ಹೊರಬಿದ್ದಿತ್ತು. ಈಗ ಆರ್​​ಸಿಬಿ ಬಗ್ಗೆ ಕ್ಯಾಪ್ಟನ್​​ ಫಾಫ್​ ಡುಪ್ಲೆಸಿಸ್​​​ ಅಚ್ಚರಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಆರ್​​ಸಿಬಿ ಫ್ಯಾನ್ಸ್​ಗೆ ಶಾಕ್​ ಕೊಟ್ಟಿದ್ದಾರೆ.
ಐಪಿಎಲ್ ಫ್ರಾಂಚೈಸಿಗಳ ಮಾಲೀಕರು ಸಿಕ್ಸರ್‌ಗಳ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ. ಆರ್​​ಸಿಬಿ ಕೂಡ ಸಿಕ್ಸರ್​​ ಹೊಡೆಯೋರಿಗೆ ಚಾನ್ಸ್ ಕೊಡುತ್ತೆ. ಫ್ಯಾನ್ಸ್​ಗೂ ಸಿಕ್ಸ್​, ಫೋರ್​ ಹೊಡೆಯೋರೇ ಬೇಕು ಎಂದು ಕ್ಯಾಪ್ಟನ್​ ಫಾಫ್​​ ಡುಪ್ಲೆಸಿಸ್​ ಸಹ ಆಟಗಾರ ಹೆನ್ರಿಚ್ ಕ್ಲಾಸೆನ್‌ಗೆ ಹೇಳಿದ್ದಾರಂತೆ.
ಸೌತ್​​ ಆಫ್ರಿಕಾ ತಂಡದ ಸನ್​ರೈಸರ್ಸ್ ಹೈದರಾಬಾದ್ ಪ್ರತಿನಿಧಿಸೋ ಹೆನ್ರಿಚ್ ಕ್ಲಾಸೆನ್ ಈ ಬಗ್ಗೆ ಮಾತಾಡಿದ್ದಾರೆ. ನಾನು ಫಾಫ್​ ಡುಪ್ಲೆಸಿಸ್​ ಯಶಸ್ಸಿನ ರಹಸ್ಯ ಕೇಳಿದೆ. ಅದಕ್ಕೆ ಫಾಫ್​ ಡುಪ್ಲೆಸಿಸ್​​, ಐಪಿಎಲ್ ಮಾಲೀಕರು ಪಂದ್ಯಗಳನ್ನು ಗೆಲ್ಲಿಸುವ ಮತ್ತು ಸಿಕ್ಸರ್‌ಗಳನ್ನು ಬಾರಿಸುವ ಆಟಗಾರರ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ ಎಂದು ಹೇಳಿದ್ರು ಅಂತಾ ಬಿಚ್ಚಿಟ್ರು.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us