newsfirstkannada.com

ಕೈ ಕೊಟ್ಟ ಮಳೆರಾಯ, ಭೀಕರ ಬರಗಾಲದ ಭಯ; ಇವತ್ತು ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ

Share :

Published September 4, 2023 at 8:23am

    ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿದೆ ಮಹತ್ವದ ಸಭೆ

    NDRF​​​ ಮಾನದಂಡ ಪ್ರಕಾರ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ

    ಬರಪೀಡಿತ ಘೋಷಣೆ ಆಗ್ತಿದ್ದಂತೆ ಕುಡಿಯುವ ನೀರಿಗೆ ವ್ಯವಸ್ಥೆ

ರಾಜ್ಯದಲ್ಲಿ ಮಳೆ ಕೊರತೆಯಿಂದ ಬರಗಾಲದ ಪರಿಸ್ಥಿತಿ ಎದುರಾಗಿದೆ.  ಮುಂಗಾರಿನ ಜೂಜಾಟದಿಂದ ಬರ ಇದ್ದರೂ ಘೋಷಿಸಲಾಗದ ಸ್ಥಿತಿಯ ಅನಿಶ್ಚಿತತೆಗೆ ತಳ್ಳಿದೆ. ರಾಜ್ಯದಲ್ಲಿ ಮಳೆಯ ಕೊರತೆಯಿಂದ ಹಲವು ತಾಲ್ಲೂಕುಗಳಲ್ಲಿ ಬಿತ್ತನೆ ಪೂರ್ಣವಾಗಿಲ್ಲ. ಹೀಗಾಗಿ ಸರ್ಕಾರ ಇವತ್ತು ಮಹತ್ವದ ಘೋಷಣೆಗೆ ಸಿದ್ಧತೆ ನಡೆಸಿದೆ.

ಮಳೆಯಿಲ್ಲದ ಮಳೆಗಾಲದ ಅವಧಿ ಬೇಸಿಗೆ ರೀತಿ ಕಾಣ್ತಿದೆ. ಜೂನ್​​​ನಿಂದ ಸೆಪ್ಟೆಂಬರ್​ವರೆಗೆ 4 ತಿಂಗಳು ಸುರಿಯಬೇಕಿದ್ದ ಮಳೆ, ವಾರೊಪ್ಪತ್ತಿಗೆ ಸೀಮಿತವಾಯ್ತು. ಅಷ್ಟು-ಇಷ್ಟು ಬಿದ್ದ ಮಳೆ ಹನಿಗೆ ಬೀಜಗಳು ಮೊಳಕೆಯೊಡೆದು ಮರಳಿ ಮಣ್ಣು ಸೇರಿದ್ವು. ಕರ್ನಾಟಕದ ಜಲಾಶಯಗಳು ಭರ್ತಿ ಆಗದೇ ಬರದಾಟ, ಜನರನ್ನ ಮತ್ತೊಮ್ಮೆ ಪ್ರಾಣ ಸಂಕಟಕ್ಕೆ ಕೆಡವಿದೆ.

ಮಳೆ ಬಾರದಿದ್ದಕ್ಕೆ ರೈತ ಬೆಳೆ ನಾಶ ಮಾಡುತ್ತಿರುವುದು

ಮಾನ್ಸೂನ್​​​ ಮೊಂಡಾಟ, ಜಲಾಶಯಗಳನ್ನ ಬರಿಬಟ್ಟಲು

ಈ ಬಾರಿ ರಾಜ್ಯದಲ್ಲಿ ಮಾನ್ಸೂನ್​​​ ಮೊಂಡಾಟ, ಜಲಾಶಯಗಳನ್ನ ಬರಿಬಟ್ಟಲು ಮಾಡಿವೆ. ಹಳ್ಳಿಗಳಲ್ಲಿ ಅಘೋಷಿತ ಲೋಡ್​ಶೆಡ್ಡಿಂಗ್​​ ಜಾರಿ ಆಗಿದೆ. ರಾಜ್ಯದಲ್ಲಿ ಮಳೆ ಕೊರತೆಯಿಂದ ಬರ ಅಪ್ಪಳಿಸಿದೆ. ಬರ ಘೋಷಿಸಲು ಕೇಂದ್ರದ ಮಾನದಂಡದತ್ತ ಬೊಟ್ಟು ಮಾಡಿ ಜವಾಬ್ದಾರಿಯಿಂದ ನುಣುಚಿಕೊಳ್ತಿದ್ದ ಸರ್ಕಾರ ಈಗ ಎಚ್ಚೆತ್ತುಕೊಂಡಿದೆ. ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸುತ್ತಿದೆ.

ಬರಪೀಡಿತ ತಾಲೂಕುಗಳ ಘೋಷಣೆಗೆ ಸಿದ್ಧತೆ

ಆಗಸ್ಟ್​ನಲ್ಲಿ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದ ರಾಜ್ಯದ ಜನರಿಗೆ ನಿರಾಸೆ ಆಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಇವತ್ತು ಸಚಿವ ಸಂಪುಟ ಉಪ ಸಮಿತಿ ಸಭೆ ನಡೆಯಲಿದೆ. ರಾಜ್ಯದ 113 ತಾಲೂಕುಗಳು ಬರಪೀಡಿತ ಎಂದು ಘೋಷಣೆಗೆ ಸರ್ಕಾರ ಸಜ್ಜಾಗಿದ್ದು, ಈ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಸುಳಿವು ನೀಡಿದ್ದಾರೆ. ಕೇಂದ್ರದ ಮಾರ್ಗಸೂಚಿಯಂತೆ ಬರಪೀಡಿತ ತಾಲೂಕುಗಳ ಪಟ್ಟಿ ಸಿದ್ಧವಾಗಿದೆ. ಅಷ್ಟಕ್ಕೂ ಏನಿದು ಕೇಂದ್ರದ ಬರ ಮಾನದಂಡ ಅನ್ನೋದನ್ನ ನೋಡೋದಾದ್ರೆ,

ಕೇಂದ್ರದ ಬರಗಾಲದ ಮಾರ್ಗಸೂಚಿ

  • ರಾಜ್ಯ ಸರ್ಕಾರ ಏಕಾಏಕಿ ಬರಗಾಲ ಘೋಷಣೆ ಮಾಡುವಂತಿಲ್ಲ
  • ವಾಡಿಕೆ ಮಳೆಗಿಂತಲೂ ಶೇ.60ರಷ್ಟು ಮಳೆ ಕೊರತೆ ಆಗಿರಬೇಕು
  • ಕನಿಷ್ಠ ಮೂರು ವಾರಗಳು ಸತತವಾಗಿ ಮಳೆ ಬಾರದಿದ್ರೆ ಬರಗಾಲ
  • ಮುಂಗಾರು ಮಧ್ಯೆ ಮಳೆ ಆಗದಿದ್ರೆ, ಆಗಸ್ಟ್​​ನಲ್ಲಿ ಘೋಷಣೆ ಇಲ್ಲ
  • ವಿಕೋಪಕ್ಕೆ ತಿರುಗಿದ್ರೆ ಅಕ್ಟೋಬರ್ ಮೊದಲ ವಾರ ಘೋಷಣೆ
  • ಬರ ಘೋಷಣೆಗೂ ಪೂರ್ವಭಾವಿಯಾಗಿ ಸಮೀಕ್ಷೆ ಆಗಬೇಕು
  • ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ಆಯಾ ಜಿಲ್ಲೆಗಳಲ್ಲಿ ಬೆಳೆ ಸಮೀಕ್ಷೆ
  • ಕೃಷಿ, ತೋಟಗಾರಿಕಾ & ಕಂದಾಯ ಇಲಾಖೆ ಜಂಟಿ ಸಮೀಕ್ಷೆ

ಅಂದ್ಹಾಗೆ, ಆಗಸ್ಟ್ 18 ರಂದು 113 ತಾಲೂಕು ಪಟ್ಟಿಯಾಗಿದೆ. ಆಗಸ್ಟ್ 31 ರಂದು ಹೊಸದಾಗಿ 75 ತಾಲೂಕು ಪಟ್ಟಿ ಮಾಡಲಾಗಿದೆ. 2ನೇ ಪಟ್ಟಿಯನ್ನ ವಾರದ ಬಳಿಕ ಘೋಷಣೆ ಮಾಡಲಾಗುತ್ತೆ ಎಂದು ಗೊತ್ತಾಗಿದೆ. ಇದೇ ಪಟ್ಟಿಯನ್ನ ಕೇಂದ್ರಕ್ಕೆ ಸಲ್ಲಿಸಿ ಪರಿಹಾರಕ್ಕೆ ಮನವಿ ಸಲ್ಲಿಕೆ ಆಗಲಿದೆ.

ಮಳೆ ಇಲ್ಲದೇ ಬೆಳೆ ಕುಂಠಿತ

ಸರ್ಕಾರದ ಮುಂದಿನ ಸವಾಲು

  • ಬರಪೀಡಿತ ಘೋಷಣೆ ಆಗ್ತಿದ್ದಂತೆ ಕುಡಿಯುವ ನೀರಿಗೆ ವ್ಯವಸ್ಥೆ
  • ಟ್ಯಾಂಕರ್​ಗಳ ಮೂಲಕ ನೀರು ಪೂರೈಕೆಸಲು ಹಣ ಮಂಜೂರು
  • ಖಾಸಗಿ ಕೊಳವೆ ಬಾವಿಗಳನ್ನ ಬಾಡಿಗೆ ಪಡೆದು ನೀರಿನ ಪೂರೈಕೆ
  • ಬಳಿಕ ವಿವಿಧ ಬೆಳೆ ಹಾನಿ ಪರಿಹಾರಕ್ಕೆ ಚಾಲನೆ ನೀಡುವ ಸರ್ಕಾರ
  • NDRF​​​ ಮಾನದಂಡ ಪ್ರಕಾರ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ

ಇವತ್ತು ನಡೆಯುವ ಸಂಪುಟ ಉಪ ಸಮಿತಿ ಸಭೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಯಾವೆಲ್ಲ ತಾಲೂಕುಗಳು ಬರಪೀಡಿತ ಪಟ್ಟಿಯಲ್ಲಿ ಸ್ಥಾನ ಪಡೆಯಲಿವೆ ಅನ್ನೋದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೈ ಕೊಟ್ಟ ಮಳೆರಾಯ, ಭೀಕರ ಬರಗಾಲದ ಭಯ; ಇವತ್ತು ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ

https://newsfirstlive.com/wp-content/uploads/2023/08/Siddaramaiah-Cm.jpg

Load More