ಗದ್ದೆಯಲ್ಲಿ 500 ಮುಖಬೆಲೆಯ ಕಂತೆ, ಕಂತೆ ನೋಟು ಸಿಕ್ಕ ರೈತನಿಗೆ ಬಿಗ್ ಶಾಕ್! ಏನಿದರ ಅಸಲಿಯತ್ತು?

author-image
Bheemappa
Updated On
ಗದ್ದೆಯಲ್ಲಿ 500 ಮುಖಬೆಲೆಯ ಕಂತೆ, ಕಂತೆ ನೋಟು ಸಿಕ್ಕ ರೈತನಿಗೆ ಬಿಗ್ ಶಾಕ್! ಏನಿದರ ಅಸಲಿಯತ್ತು?
Advertisment
  • ಹೊಲಕ್ಕೆ ನಡೆದುಕೊಂಡು ಹೋಗುವಾಗ ರೈತನಿಗೆ ಸಿಕ್ಕ ನೋಟುಗಳು
  • 50 ಕಂತೆಗಳನ್ನು ರೈತರ ಗದ್ದೆಯಲ್ಲಿ ಎಸೆದು ಹೋಗಿದ್ದು ಏಕೆ?
  • ಗದ್ದೆಯಲ್ಲಿ 500 ನೋಟುಗಳ 50 ಕಂತೆ ಬಿಸಾಕಿ ಹೋದ ಖದೀಮರು

ಹೈದರಾಬಾದ್: ರೈತನೊರ್ವ ತಮ್ಮ ಹೊಲಕ್ಕೆ ನಡೆದುಕೊಂಡು ಹೋಗುವಾಗ ದಾರಿ ಮಧ್ಯೆ 500 ರೂಪಾಯಿ ನೋಟುಗಳ 20 ಲಕ್ಷ ರೂಪಾಯಿ ಸಿಕ್ಕಿವೆ. ಸಿಕ್ಕ ಹಣವನ್ನೆಲ್ಲಾ ರೈತ ಚೀಲದಲ್ಲಿ ಹಾಕಿಕೊಂಡು ಸಂತಸದಿಂದ ಮನೆಗೆ ಹೋಗಿದ್ದಾನೆ.

ರೈತರೊಬ್ಬರು ತಮ್ಮ ಹೊಲಕ್ಕೆ ಹೋಗುವಾಗ ಗೆದ್ದೆಯಲ್ಲಿ 500 ರೂಪಾಯಿಯ ನೋಟುಗಳು ಇರುವ 50 ಕಂತೆಗಳ ರಾಶಿ ಬಿದ್ದಿದೆ. ಇದನ್ನು ನೋಡಿದ ರೈತನಿಗೆ ಫುಲ್ ಶಾಕ್ ಆಗಿದೆ ಒಂದು ಕಡೆ ಸಂತೋಷ ಕೂಡ ಆಗಿದೆ. ಇಷ್ಟೊಂದು ಹಣವನ್ನು ಇಲ್ಲಿ ಯಾರು ಬಿಸಾಕಿ ಹೋಗಿದ್ದಾರೆ ಎಂದು ಸುತ್ತಾ ನೋಡಿ, ಯೋಚಿಸಿ ತಕ್ಷಣ ತನ್ನ ಕೈನಲ್ಲಿದ್ದ ಚೀಲದಲ್ಲಿ ಎಲ್ಲಾ 20 ಲಕ್ಷ ರೂಪಾಯಿಗಳನ್ನು ತುಂಬಿಕೊಂಡು ಮನೆಗೆ ಖುಷಿ ಖುಷಿಯಾಗಿ ವಾಪಸ್ ಆಗಿದ್ದಾರೆ.

ಇದನ್ನೂ ಓದಿ: 43 ಕೋಟಿ ರೂಪಾಯಿ ಕೊಟ್ರೆ ಅಮೆರಿಕಾದ ಪೌರತ್ವ.. ಏನಿದು ಗೋಲ್ಡ್‌ ಕಾರ್ಡ್‌? ಕಂಪ್ಲೀಟ್‌ ಮಾಹಿತಿ ಇಲ್ಲಿದೆ! 

ಇದನ್ನು ನೋಡಿದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಕ್ಕಿದ್ದೇ ತಡ ರೈತನ ಮನೆಗೆ ಬಂದ ಪೊಲೀಸರು ಎಲ್ಲ ಪರಿಶೀಲನೆ ನಡೆಸಿದ್ದಾರೆ. ನೋಟುಗಳನ್ನು ಸರಿಯಾಗಿ ಪರಿಶೀಲನೆ ಮಾಡಿದಾಗ ಅವುಗಳ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂದು ಮುದ್ರಿಸುವ ಬದಲು, ಚಿಲ್ಡ್ರನ್ಸ್​ ಬ್ಯಾಂಕ್ ಆಫ್ ಇಂಡಿಯಾ ಎಂದು ಮುದ್ರಿಸಲಾಗಿದೆ. ಇದರಿಂದ ಪೊಲೀಸರು ಕೂಡ ಫುಲ್ ಶಾಕ್ ಆಗಿದ್ದಾರೆ.

publive-image

ಇದೆಲ್ಲಾ ನಕಲಿ ನೋಟು ಮಾಡುವ ಖದೀಮರ ಕೆಲಸ. ಈ ನಕಲಿ ನೋಟುಗಳ 50 ಕಂತೆಗಳನ್ನು ರೈತರ ಗದ್ದೆಯಲ್ಲಿ ಎಸೆದು ಹೋಗಿದ್ದು ಏಕೆ? ಯಾರೋ ಇಲ್ಲಿಗೆ ತಂದು ಬಿಸಾಕಿ ಹೋಗಿದ್ದಾರೆ ಎಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇನ್ನು ಇವೆಲ್ಲಾ ನಕಲಿ ನೋಟು ಎಂದು ತಿಳಿದು ರೈತನ ಖುಷಿ ಕ್ಷಣಾರ್ಧದಲ್ಲೇ ಮಂಗ ಮಾಯವಾಗಿದೆ.

ಇನ್ನು ಇದೆಲ್ಲಾ ಘಟನೆ ನಡೆದಿರುವುದು ತೆಲಂಗಾಣದ ನಲ್ಗೊಂಡ ಜಿಲ್ಲೆಯ ದಾಮಚರ್ಲಾ ಮಂಡಲಂನ ಬೊತ್ತಾಲಪೊಲಂ ಗ್ರಾಮದಲ್ಲಿ. ದೊಡ್ಡ ಸಂಖ್ಯೆಯಲ್ಲಿ ನೋಟುಗಳನ್ನ ಎಸೆದಿದ್ದರಿಂದ ಮಿರ್ಯಾಲಗೂಡ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರ ತನಿಖೆ ಮುಂದುವರೆದಿದೆ ಎನ್ನಲಾಗುತ್ತಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment