ಬೆಂಗಳೂರಲ್ಲಿ 50 ಲಕ್ಷ ಮೌಲ್ಯದ ನಕಲಿ ಬ್ರಾಂಡೆಡ್ ಶರ್ಟ್ಸ್ ಸೀಜ್.. ಮೂವರು ಅರೆಸ್ಟ್​

author-image
Bheemappa
Updated On
ಬೆಂಗಳೂರಲ್ಲಿ 50 ಲಕ್ಷ ಮೌಲ್ಯದ ನಕಲಿ ಬ್ರಾಂಡೆಡ್ ಶರ್ಟ್ಸ್ ಸೀಜ್.. ಮೂವರು ಅರೆಸ್ಟ್​
Advertisment
  • ಸಾವಿರಗಟ್ಟಲೇ ಬೆಲೆ ಇರುವ ಶರ್ಟ್​ಗಳನ್ನು ಕೆಲವೇ ಹಣಕ್ಕೆ ಮಾರುತ್ತಿದ್ರು
  • ಬೆಂಗಳೂರಷ್ಟೇ ಅಲ್ಲ, ಇಲ್ಲಿಂದ ಬೇರೆ ರಾಜ್ಯಗಳಿಗೂ ರವಾನಿಸುತ್ತಿದ್ದರು
  • ಆರೋಪಿಗಳು ಯಾವ್ಯಾವ ಕಂಪನಿ ಬಟ್ಟೆಗಳನ್ನು ರವಾನೆ ಮಾಡುತ್ತಿದ್ದರು?

ಬೆಂಗಳೂರು: 50 ಲಕ್ಷ ರೂಪಾಯಿ ಮೌಲ್ಯದ ನಕಲಿ ಬ್ರಾಂಡೆಡ್ ಶರ್ಟ್​​ಗಳನ್ನು ಸೀಜ್ ಮಾಡಿ, ಜೊತೆಗೆ ಮೂವರು ಆರೋಪಿಗಳನ್ನು ಮಾದನಾಯಕನಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಸಿಲಿಕಾನ್ ಸಿಟಿಯ ಮಾದನಾಯಕನಹಳ್ಳಿ ಬಳಿಯ ತೋಟದಗುಟ್ಟದಹಳ್ಳಿಯಲ್ಲಿ ನಕಲಿ ಬ್ರಾಂಡೆಡ್ ಶರ್ಟ್ಸ್ ತಯಾರಿಕಾ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಲೈಸೆನ್ಸ್ ಇಲ್ಲದೆ ಸಂಗಮ್ ಅಪೆರಲ್ಸ್ ಹೆಸರಿನಲ್ಲಿ ನಕಲಿ ಬ್ರಾಂಡೆಡ್ ಶರ್ಟ್ಸ್ ತಯಾರಿಸುತ್ತಿದ್ದರು. ಈ ಅಡ್ಡೆಯಲ್ಲಿ ಯುಎಸ್ ಪೊಲೋ, ಸ್ವೀಡೆನ್, ಬರ್ಬರಿ ಲಂಡನ್​ ಇಂಗ್ಲೆಂಡ್​ ಹೆಸರಿನ ಬ್ರಾಂಡೆಡ್​ ಶರ್ಟ್​ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು.

ಇದನ್ನೂ ಓದಿ: ರಾಜಸ್ಥಾನ್​ ತಂಡಕ್ಕೆ ಬಿಗ್​ ಶಾಕ್​; ಬ್ಯಾಟಿಂಗ್ ಮಾಡುವಾಗಲೇ ಪಿಚ್​​ನಿಂದ ಹೊರ ನಡೆದ ಕ್ಯಾಪ್ಟನ್​ ಸಂಜು

publive-image

ವಿದೇಶಿ ಬ್ರಾಂಡೆಡ್​ ಶರ್ಟ್​ಗಳ ಮೂಲ ಬೆಲೆ 5 ಸಾವಿರ ರೂಪಾಯಿಗಳು ಇದ್ದರೇ ಈ ಖದೀಮರು ನಕಲಿಯಾಗಿ ತಯಾರಿಸಿ ಶರ್ಟ್​​ಗಳನ್ನ ಕೇವಲ 500 ರಿಂದ 700 ರೂಪಾಯಿಗೆ ಮಾರಾಟ ಮಾಡುತ್ತಿದ್ದರು. ಈ ಬಟ್ಟೆಗಳಿಗೆ ನಕಲಿ ಬ್ರಾಂಡೆಡ್ ಲೇಬಲ್ ಹಾಕಿ ಕೇವಲ ಸಿಲಿಕಾನ್ ಸಿಟಿಯ ಮಾತ್ರವಲ್ಲ, ಹೈದರಾಬಾದ್, ಚೆನ್ನೈ, ಲೂಧಿಯಾನ ಸೇರಿ ದೇಶದ ವಿವಿಧೆಡೆ ರವಾನೆ ಮಾಡುತ್ತಿದ್ದರು.

ಈ ಬಗ್ಗೆ ಅನ್ವೇಷ್ ಐಪಿಆರ್ ಸರ್ವೀಸ್ ಕಂಪನಿ ನೀಡಿರುವ ದೂರಿನನ್ವಯ ಪೊಲೀಸರು ದಾಳಿ ಮಾಡಿ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಬಟ್ಟೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಆರೋಪಿಗಳಾದ ಅಶ್ರಫ್, ಶರೀಫುದ್ದೀನ್, ಸರವಣ ಎಂಬ ಮೂವರನ್ನ ಬಂಧನ ಮಾಡಿದ್ದಾರೆ. ಇನ್ನು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment