Advertisment

ಇನ್ಮುಂದೆ ಬೆಳ್ಳುಳ್ಳಿ ಕಬಾಬ್​ ತಿನ್ನೋ ಮುಂಚೆ ಇರಲಿ ಎಚ್ಚರ.. ಮಾರುಕಟ್ಟೆಯಲ್ಲಿ ಸಿಕ್ಕ ನಕಲಿ ಬೆಳ್ಳುಳ್ಳಿ ಅಸಲಿಯತ್ತೇನು?

author-image
Veena Gangani
Updated On
ಇನ್ಮುಂದೆ ಬೆಳ್ಳುಳ್ಳಿ ಕಬಾಬ್​ ತಿನ್ನೋ ಮುಂಚೆ ಇರಲಿ ಎಚ್ಚರ.. ಮಾರುಕಟ್ಟೆಯಲ್ಲಿ ಸಿಕ್ಕ ನಕಲಿ ಬೆಳ್ಳುಳ್ಳಿ ಅಸಲಿಯತ್ತೇನು?
Advertisment
  • ನಿಮ್ಮ ಮನೆಯಲ್ಲಿರೋ ಬೆಳ್ಳುಳ್ಳಿ ಅಸಲಿನಾ ಅಂತ ಚೆಕ್​ ಮಾಡ್ಕೊಳ್ಳಿ
  • ಪ್ಲಾಸ್ಟಿಕ್​​ ರೈಸ್​​, ಪ್ಲಾಸ್ಟಿಕ್​​ ಮೊಟ್ಟೆ ಆಯ್ತು ಈಗ ನಕಲಿ ಬೆಳ್ಳುಳ್ಳಿ ಪತ್ತೆ
  • ಬೀದಿ ಬದಿ ಬೆಳ್ಳುಳ್ಳಿಯನ್ನು ಖರೀದಿಸಿದ್ದ ಮಹಿಳೆಗೆ ಫುಲ್ ಶಾಕ್

ಇನ್ಮುಂದೆ ನೀವು ತಿನ್ನೋ ಬೆಳ್ಳುಳ್ಳಿ ಒರಿಜಿನಲ್ಲಾ ಅಂತ ಒಮ್ಮೆ ಚೆಕ್​ ಮಾಡಿಕೊಳ್ಳಿ. ಏಕೆಂದರೆ ಪ್ಲಾಸ್ಟಿಕ್​​ ರೈಸ್​​, ಪ್ಲಾಸ್ಟಿಕ್​​ ಮೊಟ್ಟೆ ಬಳಿಕ ಈಗ ನಕಲಿ​​​ ಬೆಳ್ಳುಳ್ಳಿ ಮಾರ್ಕೆಟ್​​ಗೆ ಲಗ್ಗೆ ಇಟ್ಟಿದೆ. ಸಿಮೆಂಟ್​​ನಿಂದ ಮಾಡಿದ ಬೆಳ್ಳುಳ್ಳಿ ಮಾರಾಟ ದಂಧೆ ಶುರುವಾಗಿದೆ.

Advertisment

ಇದನ್ನೂ ಓದಿ:ಮಿಸ್ ಯು ಕೀರ್ತಿ​​.. ಲಕ್ಷ್ಮೀ ಬಾರಮ್ಮ ಸೀರಿಯಲ್​ನಿಂದ ಹೊರ ಬಂದ್ರಾ ನಟಿ ತನ್ವಿ ರಾವ್​​? ಫ್ಯಾನ್ಸ್​ ಬೇಸರ!

publive-image

ಬೆಳ್ಳುಳ್ಳಿ ಅಂದ್ರೆ ಮೊದಲು ನೆನಪಾಗೋದು ಬೆಳ್ಳುಳ್ಳಿ ಕಬಾಬ್​​. ಇತ್ತೀಚೆಗೆ ಸೋಶಿಯಲ್​​ ಮೀಡಿಯಾದಲ್ಲಿ ಈ ರೆಸಿಪಿ ಸಖತ್​ ಟ್ರೆಂಡ್​​ ಕೂಡ ಆಗಿತ್ತು. ಆದ್ರೆ, ಈಗ ಇದೇ ಬೆಳ್ಳುಳ್ಳಿಯ ವಿಡಿಯೋವೊಂದು ವೈರಲ್​ ಆಗಿದ್ದು ಸಾಕಷ್ಟು ಜನರ ಆತಂಕಕ್ಕೆ ಕಾರಣವಾಗಿದೆ. ವೈರಲ್​ ಆಗಿರೋ ವಿಡಿಯೋದಲ್ಲಿರೋ ಬೆಳ್ಳುಳ್ಳಿ ನೋಡಿದ್ರೆ ಒಂದಿಷ್ಟು ಅನುಮಾನ ಬರುವುದಿಲ್ಲ. ಆದರೆ ಅಸಲಿಗೆ ಇದು ನಕಲಿ ಬೆಳ್ಳುಳ್ಳಿ.

ಅಸಲಿ ಅಲ್ಲ ನಕಲಿ

ಹೌದು. ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್​​ ರೈಸ್​​, ಪ್ಲಾಸ್ಟಿಕ್​​ ಮೊಟ್ಟೆ ಬಳಿಕ ಈಗ ನಕಲಿ ಬೆಳ್ಳುಳ್ಳಿಯ ಸರದಿ ಶುರುವಾದಂತೆ ಕಾಣಿಸುತ್ತಿದೆ. ಮಹಾರಾಷ್ಟ್ರದಲ್ಲಿ ಸಿಮೆಂಟ್​ನಿಂದ ತಯಾರಿಸಿರುವ ಬೆಳ್ಳುಳ್ಳಿ ಪತ್ತೆಯಾಗಿದ್ದು, ಆತಂಕ ಸೃಷ್ಟಿಸಿದೆ.

Advertisment

publive-image

ಮೋಸ ಹೋದ ಪೊಲೀಸ್​ ಪತ್ನಿ

ಮಹಾರಾಷ್ಟ್ರದ ಅಕೋಲದಲ್ಲಿ ಸಿಮೆಂಟ್​​ ಬೆಳ್ಳುಳ್ಳಿ ಮಾರಾಟ ಜಾಲ ಪತ್ತೆಯಾಗಿದೆ. ಮಹಿಳೆಯೊಬ್ಬರು ಬೀದಿ ಬದಿ ವ್ಯಾಪಾರಿ ಬಳಿ 250 ಗ್ರಾಂ ಬೆಳ್ಳುಳ್ಳಿಯನ್ನ ಖರೀದಿಸಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿ ಸುಭಾಷ್ ಪಾಟೀಲ್ ಪತ್ನಿ ಹೀಗೆ ಬೆಳ್ಳುಳ್ಳಿ ಪರ್ಚೇಸ್ ಮಾಡಿದ್ರು. ಬಳಿಕ ಮನೆಗೆ ತಂದು ಸಿಪ್ಪೆಯನ್ನು ತೆಗೆಯಲು ಪ್ರಯತ್ನಿಸಿದಾಗ ಬೆಳ್ಳುಳ್ಳಿ ಬೇರ್ಪಟ್ಟಿಲ್ಲ. ಸೂಕ್ಷ್ಮವಾಗಿ ಗಮನಿಸಿದಾಗ ಬೆಳ್ಳುಳ್ಳಿಯನ್ನ ಸಿಮೆಂಟ್​ನಿಂದ ತಯಾರಿಸಿದ್ದು ಎಂದು ಪತ್ತೆಯಾಗಿದೆ. ಇದಷ್ಟೇ ಅಲ್ಲದೆ ಬರೀ ಒಂದು ಬೆಳ್ಳುಳ್ಳಿ ಸುಮಾರು 100 ಗ್ರಾಂ ತೂಕ ಹೊಂದಿದೆ.

publive-image

ಇನ್ನೊಂದು ಮಾಹಿತಿ ಪ್ರಕಾರ, ಮಧ್ಯವರ್ತಿಗಳು ತೂಕ ಹೆಚ್ಚಿಸಲು ಈ ರೀತಿ ಸಿಮೆಂಟ್​ ಬೆಳ್ಳುಳ್ಳಿಗಳನ್ನು ನಿಜವಾದ ಬೆಳ್ಳುಳ್ಳಿಗಳ ಜೊತೆ ಮಿಕ್ಸ್​​ ಮಾಡ್ತಿದ್ದಾರೆ ಎಂದು ತಿಳಿದು ಬಂದಿದೆ. ನಕಲಿ ಬೆಳ್ಳುಳ್ಳಿ ಪತ್ತೆಯಾಗಿದ್ದರಿಂದ ಆತಂಕಕ್ಕೆ ಕಾರಣವಾಗಿದ್ದು, ಮಾರುಕಟ್ಟೆಯಲ್ಲಿ ಏನೇ ಪದಾರ್ಥ ಖರೀದಿಸುವ ಮುನ್ನ ಮೈ ಎಲ್ಲಾ ಕಣ್ಣಾಗಿಟ್ಟುಕೊಳ್ಳದಿದ್ರೆ ಯಾಮಾರೋದು ಪಕ್ಕಾ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment