/newsfirstlive-kannada/media/post_attachments/wp-content/uploads/2024/11/FAKE-NOTE-1.jpg)
ಏನಾದರೂ ಮಾಡಬೇಕು! ಕಡಿಮೆ ಸಮಯದಲ್ಲಿ ಹೆಚ್ಚು ಹಣ ಸಂಪಾದಿಸಬೇಕು ಅಂತಾ ದುಡ್ಡಿನ ದುರಾಸೆಗೆ ಬಿದ್ದಿದ್ದ ಗ್ಯಾಂಗ್ ಲಾಕ್ ಆಗಿದೆ. ತಂತ್ರಜ್ಞಾನ ಬಳಸಿಕೊಂಡು ಕಳ್ಳದಾರಿ ತುಳಿದಿದ್ದವರು ಜೈಲು ಸೇರಿದ್ದಾರೆ.
ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಮುನಿಕೃಷ್ಣ ರಾವ್ ಎಂಬಾತ ತಿರುಪತಿ ಮೂಲದ ರಮೇಶ್ ಎಂಬಾತನಿಗೆ ಫೇಸ್​ಬುಕ್ ಮೂಲಕ ಪರಿಚಯವಾಗಿದ್ದ. ಇಬ್ಬರ ನಡುವಿನ ಸ್ನೇಹ ಗಟ್ಟಿಯಾದ ಬೆನ್ನಲ್ಲೇ ಒಂದಷ್ಟು ವ್ಯಾಪಾರ ಮಾಡಲು ಯೋಚಿಸಿದ್ದರು. ಮುಂದುವರಿದ ಭಾಗವಾಗಿ ಮನೆಯಲ್ಲಿ ಶೇರ್ ಮಾರ್ಕೆಟ್ ವ್ಯವಹಾರ ನಡೆಸುತ್ತಿದ್ದರು. ಇದರಲ್ಲಿ ನಷ್ಟ ಆಗಿದೆ. ಹೇಗಾದರೂ ಮಾಡಿ ಹಣ ಗಳಿಸಬೇಕು ಅಂದುಕೊಂಡ ಇವರು, ಕಳ್ಳದಾರಿ ಹಿಡಿದಿದ್ದರು.
ಅದಕ್ಕೆ ಅವರು ಯೂಟ್ಯೂಬ್ ಸಹಾಯ ಪಡೆದುಕೊಂಡರು. ಯೂಟ್ಯೂಬ್​​ನಲ್ಲಿ ಹೇಗೆ ನೋಟುಗಳನ್ನು ಮುದ್ರಣ ಮಾಡ್ತಾರೆ ಅನ್ನೋದನ್ನು ತಿಳಿದುಕೊಳ್ತಾರೆ. ನಂತರ ತಾವೂ ಕೂಡ ನಕಲಿ ನೋಟುಗಳ ಮುದ್ರಣಕ್ಕೆ ಮುಂದಾಗಿದ್ದಾರೆ. ಇದಕ್ಕೆ ರಮೇಶ್ ಪತ್ನಿ ಸಂಧ್ಯಾ, ಮಗಳು ಇಶಾ ಸಹಾಯ ಮಾಡಿದ್ದಾರೆ. ತಿರುಪತಿಯಲ್ಲಿ ನೋಟು ಮುದ್ರಣಕ್ಕೆ ಬೇಕಾದ ಸಾಮಗ್ರಿ ಖರೀದಿಸಿದ್ದಾರೆ. ಆ ಬಳಿಕ ಮನೆಯಲ್ಲಿ ನೋಟುಗಳನ್ನು ಮುದ್ರಿಸಲು ಆರಂಭಿಸಿದ್ದಾರೆ. ಮುದ್ರಿತ ನೋಟುಗಳನ್ನು ಮಾರುಕಟ್ಟೆಗೆ ಕೊಂಡೊಯ್ಯಲು ಶ್ರೀಕಾಳಹಸ್ತಿ, ತಿರುಪತಿ, ರೇಣಿಗುಂಟಾ, ಪುತ್ತೂರಿನಲ್ಲಿ ವಸ್ತುಗಳನ್ನು ಖರೀದಿಸಲು ಆರಂಭಿಸಿದರು.
ನಕಲಿ ಕರೆನ್ಸಿ
ಈಶ ಪುತ್ತೂರು ಪೇಟೆಯ ಕೆಲವು ಅಂಗಡಿಗಳಲ್ಲಿ 500 ರೂಪಾಯಿ ನೋಟುಗಳನ್ನು ನೀಡಿ ವಸ್ತುಗಳನ್ನು ಖರೀದಿಸಿದ್ದಾರೆ. ಅನುಮಾನಗೊಂಡ ಅಂಗಡಿಯವರು ಯಂತ್ರದಲ್ಲಿ ಕರೆನ್ಸಿಯನ್ನು ಎಣಿಕೆ ಮಾಡಿದ್ದಾರೆ. ಈ ವೇಳೆ ಅವು ನಕಲಿ ನೋಟುಗಳನ್ನು ಅನ್ನೋದು ಗೊತ್ತಾಗಿದೆ. ತಕ್ಷಣ ಮಾಹಿತಿ ಪಡೆದ ಪುತ್ತೂರು ಪೊಲೀಸ್ ಅಧಿಕಾರಿ ಸುರೇಂದ್ರ ನಾಯ್ಡು ಅಂಗಡಿಗೆ ತೆರಳಿ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿದೆ. ನಂತರ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಇದನ್ನೂ ಓದಿ:ಕೊನೆಗೂ ಮೌನ ಮುರಿದ ಕೆಎಲ್​ ರಾಹುಲ್; LSG ತಂಡದಿಂದ ಹೊರ ಬಂದಿರುವ ಹಿಂದಿನ ಸತ್ಯ ರಿವೀಲ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us