/newsfirstlive-kannada/media/post_attachments/wp-content/uploads/2025/06/HVR_DAP.jpg)
ಹಾವೇರಿ: ಎಷ್ಟೋ ಸಲ ಮಳೆ ಇಲ್ಲದೇ ಕೈಗೆ ಬಂದ ಬೆಳೆಯನ್ನ ಕೊಯ್ಲು ಮಾಡದೇ ರೈತರು ಹಾಗೇ ಬಿಟ್ಟಿದ್ದು ಇದೆ. ಇದರಿಂದ ಸಾವಿರಾರು ರೂಪಾಯಿ ನಷ್ಟ ಮಾಡಿಕೊಂಡು ಸಾಲದ ಸುಳಿಗೆ ಸಿಕ್ಕಿಕೊಂಡು ಒದ್ದಾಡಿರುವ ನಿದರ್ಶನಗಳಿವೆ. ಇದರ ಮಧ್ಯೆ ಈಗೀಗ ನಕಲಿ ಗೊಬ್ಬರದ ಹಾವಳಿ ಅಲ್ಲಾಲ್ಲಿ ಕೇಳಿ ಬರುತ್ತದೆ. ಸದ್ಯ ನಕಲಿ ಗೊಬ್ಬರಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಶಂಕ್ರಪ್ಪ ಅಂಗಡಿ ಹಾಗೂ ಸಿದ್ದಪ್ಪ ಗುರುಸಿದ್ದಪ್ಪನವರ್ ನಕಲಿ ಗೊಬ್ಬರ ಮಾರಾಟ ಮಾಡಿದ ಆರೋಪಿಗಳು. ಸದ್ಯ ಪೊಲೀಸರು ಇವರನ್ನ ಬಂಧಿಸಿದ್ದಾರೆ. ಜಿಲ್ಲೆಯ ಹಾನಗಲ್ ತಾಲೂಕಿನ ಮಾಸನಕಟ್ಟಿ ಗ್ರಾಮದಲ್ಲಿ ನಕಲಿ ಡಿಎಪಿ (ಡೈಅಮೋನಿಯಂ ಫಾಸ್ಫೇಟ್) ಗೊಬ್ಬರವನ್ನು ಮಾರಾಟ ಮಾಡಿದ್ದಾರೆ. ರೈತರು ಬೆಳೆದಂತಹ ಮೆಕ್ಕೆಜೋಳ ಬೆಳೆ ಕುಂಠಿತಗೊಂಡ ಹಿನ್ನೆಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಭಾರೀ ಮೇಘಸ್ಫೋಟ; ನಿರ್ಮಾಣ ಹಂತದ ಹೋಟೆಲ್ನಲ್ಲಿದ್ದ ಕಾರ್ಮಿಕರು ನಾಪತ್ತೆ!
ಈ ಸಂಬಂಧ ಉಳವಿ ಚನ್ನಬಸವೇಶ್ವರ ಕಂಪನಿ ಮತ್ತು ಹೊನ್ನಮ್ಮದೇವಿ ಟ್ರೆಡರ್ಸ್ ವಿರುದ್ಧ ದೂರು ನೀಡಲಾಗಿತ್ತು. ಶಂಕ್ರಪ್ಪ ಅಂಗಡಿ ಮತ್ತು ಸಿದ್ದಪ್ಪ ಗುರುಸಿದ್ದಪ್ಪನವರ್ ಸುಮಾರು 3 ಲಕ್ಷ ರೂಪಾಯಿಗೂ ಅಧಿಕ ಕಳಪೆ ಮಟ್ಟದ ಇಂಡೋ ಆಫ್ ಇಸ್ರೇಲ್ ಗ್ರೂಪ್ ಕಂಪನಿಯ ಡಿಎಪಿ ಗೊಬ್ಬರ ರೈತರಿಗೆ ಮಾರಾಟ ಮಾಡಿದ್ದರು. ಇದನ್ನು ಮೆಕ್ಕೆಜೋಳದ ಬೆಳೆಗೆ ಹಾಕಿದ್ದರಿಂದ ಬೆಳೆ ಎಲ್ಲ ಕುಂಠಿತಗೊಂಡಿದೆ. ಇದರಿಂದ ರೈತರ ಬೆಳೆ ಕೈಗೆ ಬಾರದೇ ನಷ್ಟ ಅನುಭವಿಸಿದ್ದಾರೆ. ಈ ಸಂಬಂಧ ಹಾನಗಲ್ ಕೃಷಿ ಅಧಿಕಾರಿಯಿಂದ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ನಕಲಿ ಗೊಬ್ಬರದ ಹಾವಳಿ ರೈತರಿಗೆ ಒಂದು ದೊಡ್ಡ ಸಮಸ್ಯೆಯಾಗಿದೆ. ಪ್ರತಿ ವರ್ಷ ಬಿತ್ತನೆ, ಬಿತ್ತನೆ ಮಾಡಿದ ಮೇಲೆ ನಕಲಿ ಗೊಬ್ಬರ ಮಾರಾಟಗಾರರು ರೈತರನ್ನು ಮೋಸಗೊಳಿಸಲು ಯತ್ನಿಸುತ್ತಾರೆ. ಇವರು ಅಕ್ರಮವಾಗಿ ಸಾವಯವ ಗೊಬ್ಬರ ರೆಡಿ ಮಾಡಿ, ಹೇಗಾದರೂ ಮಾಡಿ ರೈತರ ಮನೆಗೆ ತಲುಪಿಸಿ, ತಪ್ಪು ಮಾಹಿತಿ ನೀಡುತ್ತಾರೆ. ಇದರಿಂದ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕುತ್ತಾರೆ. ಹೀಗಾಗಿ ರೈತರು ಆದಷ್ಟು ಜಾಗ್ರತಾ ವಹಿಸಿ ಗೊಬ್ಬರ ಖರೀದಿಗೆ ಮುಂದಾಗಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ