ಮದುವೆಗಾಗಿ IPS ನಾಟಕ; ತಾನೇ ತೋಡಿದ ಹಳ್ಳಕ್ಕೆ ಯುವಕ ಬಿದ್ದಿದ್ದು ಹೇಗೆ?

author-image
Veena Gangani
Updated On
ಮದುವೆಗಾಗಿ IPS ನಾಟಕ; ತಾನೇ ತೋಡಿದ ಹಳ್ಳಕ್ಕೆ ಯುವಕ ಬಿದ್ದಿದ್ದು ಹೇಗೆ?
Advertisment
  • ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವನಿಗೆ ನಿಶ್ಚಯ ಆಯ್ತು ಮದುವೆ
  • ಮದುವೆ ಮಾಡಿಕೊಳ್ಳುವ ಬರದಲ್ಲಿ ಸುಳ್ಳು ಹೇಳಿದ ವ್ಯಕ್ತಿ ಯಾರು ಗೊತ್ತಾ?
  • ಆ ಹುಡುಗಿಯನ್ನು ಮೆಚ್ಚಿಸಲು ಈ ನಾಟಕವಾಡಿದ್ದು ಏಕೆ ಗೊತ್ತಾ? ಸ್ಟೋರಿ ಓದಿ

ಸಾವಿರ ಸುಳ್ಳು ಹೇಳಿಯಾದ್ರೂ ಮದುವೆ ಮಾಡಬೇಕು ಅನ್ನೋ ಮಾತೇ ಇದೆ. ಹಾಗೇ ಸುಳ್ಳು ಹೇಳದೇ ನಡೆದ ಮದುವೆಗಳೇ ಇಲ್ಲವೇನೋ. ಮದುವೆ ಮುಗಿಯುವರೆಗೆ ವರನ ಅಥವಾ ವಧುವಿನ ಬಗ್ಗೆ ಒಂದಾದ್ರೂ ಸುಳ್ಳು ಹೇಳಿರುತ್ತಾರೆ.

ಉತ್ತರಾಖಂಡ್​ನ ಮಸ್ಸೂರಿನಲ್ಲಿ ಕಿರಣಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಇಂತಹದ್ದೇ ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದಾನೆ. ಆತ ಹೇಳಿದ್ದು ಅಂತಿಂಥ ಸುಳ್ಳಲ್ಲ. ಭಯಂಕರ!
ಕಲಿ ಐಪಿಎಸ್ ಅಧಿಕಾರಿಯಂತೆ ನಟಿಸಿ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸುನೀಲ್ ಕುಮಾರ್ ಧೋಬಿಯನ್ನು ಪೊಲೀಸರು ಬಂಧಿಸಿದ್ದಾರೆ.

ಒಬ್ಬ ಹುಡುಗಿಯನ್ನು ಮೆಚ್ಚಿಸಲು, ಅವನು ಮೊದಲು ತನ್ನನ್ನು ತಾನು ರಾಜಸ್ಥಾನ ಪೊಲೀಸ್‌ನಲ್ಲಿ ಕಾನ್‌ಸ್ಟೆಬಲ್ ಎಂದು ಪರಿಚಯಿಸಿಕೊಂಡನು ಮತ್ತು ನಂತರ ಅಲ್ವಾರ್‌ನಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿ ಅಂತ ಪರಿಚಯಿಸಿಕೊಂಡನು. ಅದಾದ ಬಳಿಕ ತಾನು ಐಪಿಎಸ್​ ಅಧಿಕಾರಿಯಾಗಿ ಆಯ್ಕೆಯಾಗಿದ್ದೇನೆ ಎಂದು ಸುಳ್ಳು ಹೇಳಿದ್ದಾನೆ.

ಇದನ್ನೂ ಓದಿ:ದರ್ಶನ್ ಭೇಟಿಯಾಗಲು 7 ಜನರಿಗೆ ಮಾತ್ರ ಅವಕಾಶ; ಗೌಪ್ಯತೆ ಕಾಪಾಡಲು ಪತ್ನಿ ವಿಜಯಲಕ್ಷ್ಮಿ ಮನವಿ

ಈತನ ಸುಳ್ಳು ನಂಬಿದ ಹುಡುಗಿ ಮನೆಯವರು, ನಿಶ್ಚಿತಾರ್ಥವನ್ನೂ ಮಾಡಿ ಮುಗಿಸಿದ್ದಾರೆ. ಅಲ್ಲದೇ ನಿಶ್ಚಿತಾರ್ಥದ ವೇಳೆ 50-60 ಸೀರೆಗಳು, ಅವರ ಕುಟುಂಬಕ್ಕಾಗಿ ಬೆಳ್ಳಿ ಉಂಗುರಗಳು, ಬೆಳ್ಳಿ ಸರ ಮತ್ತು 55 ಸಾವಿರ ರೂ.ಯನ್ನೂ ನೀಡಿದ್ದರು. ನಿಶ್ಚಿತಾರ್ಥದ ಬಳಿಕ ನಕಲಿ ಐಪಿಎಸ್​ ಅಧಿಕಾರಿ ಹುಡುಗಿ ಮನೆಯವರನ್ನು ನಂಬಿಸಲು ಮಸ್ಸೂರಿಯ ಐಪಿಎಸ್​ ತರಬೇತಿ ಕೇಂದ್ರಕ್ಕೆ ಹೋಗಿ ಹೊರಗೆ ನಿಂತು ಫೋಟೋ ತೆಗೆಸಿಕೊಂಡು ಭಾವಿ ಪತ್ನಿ, ಅತ್ತೆ ಸೇರಿ ಅವರ ಸಂಬಂಧಿಕರಿಗೆ ಕಳಿಸುತ್ತಿದ್ದ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲೂ ಪೋಸ್ಟ್ ಮಾಡುತ್ತಿದ್ದ.

ಒಂದು ದಿನ ಸುನೀಲ್ ಹುಡುಗಿಯ ಸಹೋದರ ಮತ್ತು ಆತನ ಸ್ನೇಹಿತರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿ ಅಂತ ಈ ನಕಲಿ ಐಪಿಎಸ್ ಅಧಿಕಾರಿಗೆ ಕೇಳಿಕೊಂಡಿದ್ದಾನೆ. ಅವರೆಲ್ಲ ಸೇರಿ ಪ್ರವಾಸಕ್ಕೆ ಹೋದಾಗ ಸತ್ಯ ಬಹಿರಂಗವಾಗಿದೆ. ಸುನಿಲ್ ನಿಜವಾಗಿಯೂ ಸರ್ಕಾರಿ ಅಧಿಕಾರಿಯಲ್ಲ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಅಂತ ಗೊತ್ತಾಗಿ ಹುಡುಗಿ ಮನೆಯವರು ಕುಸಿದು ಹೋಗಿದ್ದಾರೆ.

ಕೂಡಲೇ ನಿಶ್ಚಿತಾರ್ಥ ವೇಳೆ ನೀಡಲಾದ ಬಂಗಾರ, ಹಣ ವಾಪಸ್ ನೀಡಲು ಸೂಚಿಸಿದ್ದಾರೆ. ಆದರೆ ಬೆಲೆಬಾಳುವ ವಸ್ತು ನೀಡಲು ಸುನಿಲ್ ನಿರಾಕರಿಸಿದ್ದಾನೆ. ಕೂಡಲೇ ಪ್ರಾಗ್​ಪುರ ಪೊಲೀಸ್ ಠಾಣೆಗೆ ಹುಡುಗಿ ಮನೆಯವರು ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿ ಆರೋಪಿ ಸುನಿಲ್​ನನ್ನು ಬಂಧಿಸಿದ್ದಾರೆ.

ವಿಶೇಷ ವರದಿ: ವಿಶ್ವನಾಥ್ ಜಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment