newsfirstkannada.com

ಕೊಲ್ಲೂರು ಮೂಕಾಂಬಿಕೆಯ ಪುಣ್ಯಕ್ಷೇತ್ರದ ಹೆಸರು ಬಳಸಿ ಮಕ್ಮಲ್​ ಟೋಪಿ.. ಕೇರಳದ ಟ್ರಸ್ಟ್​​ನಿಂದ ಜನರಿಗೆ ಪಂಗನಾಮ

Share :

Published February 25, 2024 at 8:10am

    ಕೇರಳದ ಡುಪ್ಲಿಕೇಟ್​​ ಟ್ರಸ್ಟ್​​​ಗೆ ಹತ್ತು ಸಾವಿರಕ್ಕಿಂತ ಹೆಚ್ಚು ಭಕ್ತರು ಇದ್ದಾರೆ

    ಒಂದೊಂದು ವಾಟ್ಸ್​​ಆ್ಯಪ್ ಗ್ರೂಪ್​ನಲ್ಲಿ 600- 800 ಜನರಿರೋ ಮಾಹಿತಿ

    ಕೊಲ್ಲೂರಿನ ಹೆಸ್ರು ಬಳಸಿ, ಸೇವೆ ಹೆಸರಲ್ಲಿ ಹಣ ಮಾಡುತ್ತಿದೆಯಾ ಟ್ರಸ್ಟ್​?

ಕೊಲ್ಲೂರು ಮೂಕಾಂಬಿಕೆ ಕೋಟ್ಯಾನುಕೋಟಿ ಭಕ್ತರ ಆರಾಧ್ಯ ದೈವ.. ದಕ್ಷಿಣ ಭಾರತದ ಪವರ್​ ಫುಲ್​ ದೇವತೆ. ಆದ್ರೆ ಇಂತಹ ಪ್ರಸಿದ್ಧ ಪುಣ್ಯಕ್ಷೇತ್ರದ ಹೆಸರು ಬಳಸಿಕೊಂಡು ಜನರಿಗೆ ಮಕ್ಮಲ್​ ಟೋಪಿ ಹಾಕಲಾಗ್ತಿದೆ ಅನ್ನೋ ಆರೋಪ ಕೇಳಿಬಂದಿದೆ. ದೇವರ ಹೆಸರಲ್ಲಿ ಕೇರಳದ ಟ್ರಸ್ಟ್​​ವೊಂದು ಪಂಗನಾಮ ಹಾಕ್ತಿರೋದು ಕೊಲ್ಲೂರು ಮೂಕಾಂಬಿಕೆಯ ಭಕ್ತರನ್ನ ಕೆರಳಿಸಿದೆ.

ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ. ಮೂಕಾಂಬಿಕಾ ದೇವಿಯ ಪುಣ್ಯಕ್ಷೇತ್ರ. ಕೊಲ್ಲೂರು ಅಂದ್ರೆ ಭಕ್ತಿಯ ನೆಲೆ ಬೀಡು. ಭಾವೈಕ್ಯತೆಯ ನಾಡು. ಇಂತಹ ಪುಣ್ಯ ಭೂಮಿಯ ಅವ್ಯವಹಾರದ ಸುಳಿ ಗಾಳಿಯೊಂದು ಎದ್ದು ಬಿರುಗಾಳಿಯಾಗೋ ಸೂಚನೆ ನೀಡಿದೆ.

ಪೂಜೆ, ಪ್ರಸಾದ, ಸೇವೆಯ ಹೆಸರಿನಲ್ಲಿ ಹಣ ವಸೂಲಿ

ಉಡುಪಿ ಜಿಲ್ಲೆ, ಬೈಂದೂರು ತಾಲೂಕಿನ ಶ್ರೀ ಕ್ಷೇತ್ರ ಕೊಲ್ಲೂರಿನ ಹೆಸರನ್ನು ಬಳಸಿಕೊಂಡು ಕೇರಳ ರಾಜ್ಯದ ಟ್ರಸ್ಟ್​ವೊಂದು ಸೇವೆಯ ಹೆಸರಲ್ಲಿ ಹಣ ಮಾಡುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಮಾಜಿ ವ್ಯವಸ್ಥಾಪಕ ಸಮಿತಿಗೆ ಹಿಂದೆಯೇ ಗುಮಾನಿ ಇತ್ತು ಎಂಬುದು ಸಹ ಸದ್ಯ ಬಹಿರಂಗವಾದ ಸತ್ಯವಾಗಿದೆ.

ದೇವಸ್ಥಾನದ ಡುಪ್ಲಿಕೇಟ್​​ ಟ್ರಸ್ಟ್​!?

  • ಕೇರಳದಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಭಕ್ತರನ್ನ ಹೊಂದಿರುವ ಟ್ರಸ್ಟ್
  • ಪೂಜೆ, ಪ್ರಸಾದ, ಸೇವೆಯ ಹೆಸರಿನಲ್ಲಿ ಅವರೆಲ್ಲರಿಂದ ಹಣ ಸಂಗ್ರಹ
  • 2 ವರ್ಷಗಳಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಸಮಿತಿ ಶಂಕೆ
  • ಮೂಕಾಂಬಿಕಾ ಡಿವೋಟೀಸ್ ಟ್ರಸ್ಟ್​ ಮೂಲ ಕೇರಳ ಎಂಬ ಮಾಹಿತಿ
  • ಈ ಟ್ರಸ್ಟ್​ಗೆ ಕೇರಳದ ಪ್ರತಿ ಜಿಲ್ಲೆಯ ಸಾವಿರಾರು ಭಕ್ತರು ನೋಂದಣಿ
  • ಒಂದೊಂದು ವಾಟ್ಸಾಪ್ ಗ್ರೂಪ್​ನಲ್ಲಿ 600- 800 ಜನರಿರೋ ಮಾಹಿತಿ

ಸದ್ಯ, ಈ ಗೋಲ್​ಮಾಲ್​​​ ಬಗ್ಗೆ ಸೈಬರ್ ಸೆಲ್​ಗೆ ಕಂಪ್ಲೇಂಟ್ ಕೂಡ ನೀಡಿದ್ದೇವೆ ಎಂದು ಹಿಂದಿನ ವ್ಯವಸ್ಥಾಪನಾ ಸಮಿತಿ ಮಾಹಿತಿ ಸಹ ನೀಡಿದೆ. ಕ್ಷೇತ್ರದ ಹೆಸರಲ್ಲಿ ಭಕ್ತರು ಮೋಸ ಹೋಗಬಾರದು. ಸ್ಟಿಗೂ ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿ ಬರುವ ಕೊಲ್ಲೂರು ದೇವಸ್ಥಾನಕ್ಕೂ ಯಾವುದೇ ಸಂಬಂಧ ಇಲ್ಲ. ಏನೇ ಸೇವೆ ಕೊಡುವುದಿದ್ದರೂ ನೇರವಾಗಿ ದೇವಸ್ಥಾನಕ್ಕೆ ಬಂದು ನೀಡಿ ಎಂದು ದೇವಸ್ಥಾನದ ಅಧಿಕಾರಿಗಳು ಭಕ್ತರಿಗೆ ಹೇಳಿದ್ದಾರೆ.

ದೇವಸ್ಥಾನದ ವತಿಯಿಂದ ಯಾವುದೇ ಮೋಸ, ವಂಚನೆ ನಡೆಯುತ್ತಿಲ್ಲ. ಆದರೆ ಕೇರಳ ಮೂಲದ ಪೃಥ್ವಿರಾಜ್​ ಎನ್ನುವರ ನೇತೃತ್ವದಲ್ಲಿ ಮೂಕಾಂಬಿಕಾ ಡಿವೋಟಿ ಟ್ರಸ್ಟ್​​ ವತಿಯಿಂದ ಮೋಸ ಆಗುತ್ತಿ ಎಂದು 2022ರಿಂದ ನಮ್ಮ ಗಮನದಲ್ಲಿದೆ. ಈ ಬಗ್ಗೆ ಸೈಬರ್​ ಡಿಪಾರ್ಟ್​​ಮೆಂಟ್​ಗೆ ದೂರು ಕೊಟ್ಟಿದ್ದೇವೆ. ಅಲ್ಲದೇ ಎಸ್​ಪಿ ಅವರಿಗೂ ಈ ಹಿಂದಿನ ಆಡಳಿತಾಧಿಕಾರಿ ಕಂಪ್ಲೇಟ್ ಮಾಡಿದ್ದಾರೆ.

ಸಂಧ್ಯಾ ರಮೇಶ್, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯೆ

2023ರಲ್ಲಿ ಡೈರಿ ಬಿಡುಗಡೆ ವೇಳೆ ಬಯಲಾಯ್ತು ಸತ್ಯ!

ಕೊಲ್ಲೂರು ದೇವಸ್ಥಾನದಿಂದ ಪ್ರಸಾದ ತೆಗೆದುಕೊಂಡು ಹೋಗಿ, ಅದನ್ನು ಕೇರಳದಲ್ಲಿ ವಿತರಿಸಲಾಗುತ್ತದೆ. ಕೇರಳ ಮೂಲದ ಭಕ್ತರಿಗೆ ಸೇವೆ ಸಲ್ಲಿಸಿದ ಪ್ರಸಾದಗಳನ್ನು ಪೋಸ್ಟ್ ಮಾಡಲಾಗುತ್ತದೆ ಎಂಬೆಲ್ಲ ಆರೋಪಗಳಿವೆ. ಮೂಕಾಂಬಿಕಾ ಡಿವೋಟೀಸ್ ಟ್ರಸ್ಟ್ 2023ರಲ್ಲಿ ಡೈರಿ ಬಿಡುಗಡೆ ಮಾಡಿದಾಗ ಈ ವಿಚಾರ ದೇಗುಲದ ಗಮನಕ್ಕೆ ಬಂದಿತ್ತು. ಈ ವಂಚನಾ ಜಾಲದಲ್ಲಿ ಕೊಲ್ಲೂರಿಗೆ ಸಂಬಂಧಿಸಿದವರು ಇರಬಹುದು ಎಂಬ ಗುಮಾನಿಗಳು ಸಹ ಇದೆ.

ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ಉಡುಪಿ ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಕೊಲ್ಲೂರು ಕ್ಷೇತ್ರಕ್ಕೆ ಅಪಚಾರವಾಗದಂತೆ ಪ್ರಕರಣಕ್ಕೆ ಸುಖಾಂತ್ಯ ನೀಡಬೇಕು. ಕೋಟ್ಯಾನುಕೋಟಿ ಭಕ್ತರನ್ನ ಹೊಂದಿ ತನ್ನದೇ ವಿಶಿಷ್ಟ ಪರಂಪರೆ ಹೊಂದಿರೋ ಕೊಲ್ಲೂರು ಕ್ಷೇತ್ರದ ಹೆಸರನ್ನ ಉಳಿಸುವ ಕೆಲಸವನ್ನ ಅಧಿಕಾರಿಗಳು ಮಾಡಬೇಕು ಅಂತ ಭಕ್ತರು ಮನವಿ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಲ್ಲೂರು ಮೂಕಾಂಬಿಕೆಯ ಪುಣ್ಯಕ್ಷೇತ್ರದ ಹೆಸರು ಬಳಸಿ ಮಕ್ಮಲ್​ ಟೋಪಿ.. ಕೇರಳದ ಟ್ರಸ್ಟ್​​ನಿಂದ ಜನರಿಗೆ ಪಂಗನಾಮ

https://newsfirstlive.com/wp-content/uploads/2024/02/MUKAMBHIKA_TEMPLE.jpg

Load More