/newsfirstlive-kannada/media/post_attachments/wp-content/uploads/2025/02/FAKE-WATERMELON.jpg)
ಬೇಸಿಗೆ ಶುರುವಾಯ್ತು ಅಂದ್ರೆ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಜಾಸ್ತಿಯಾಗುತ್ತದೆ. ಕಲ್ಲಂಗಡಿಯಲ್ಲಿ ಹೆಚ್ಚು ನೀರಿನಂಶ ಇರುವುದರಿಂದ ಇದು ದೇಹದಲ್ಲಿ ನಿರ್ಜಲೀಕರಣ ಆಗದಂತೆ ನೋಡಿಕೊಳ್ಳುವುದರ ಜೊತೆಗೆ ದೇಹಕ್ಕೆ ತಂಪನ್ನು ಒದಗಿಸುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಹಣ್ಣಿನ ವ್ಯಾಪಾರ ಜೋರಾಗಿದೆ. ಗ್ರಾಹಕರು ಕೂಡ ಮುಗಿಬಿದ್ದು ಕಲ್ಲಗಂಡಿ ಹಣ್ಣನ್ನು ಖರೀದಿಸುತ್ತಿದ್ದಾರೆ. ಆದ್ರೆ ರಾಜ್ಯದ ಜನರು ಕಲ್ಲಂಗಡಿ ಹಣ್ಣು ಖರೀದಿಸುವ ಮುನ್ನ ಕೊಂಚ ಎಚ್ಚರವಾಗಿರಬೇಕು. ಯಾಕಂದ್ರೆ ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ನಕಲಿ ಕಲ್ಲಂಗಡಿ ಹಣ್ಣುಗಳ ದರ್ಬಾರ್ ಜೋರಾಗಿ ನಡೆಯುತ್ತಿದೆ
ಕಲ್ಲಂಗಡಿ ಹಣ್ಣು ಖರಿದಿಸೋ ಮುನ್ನ ಎಚ್ಚರ.. ಎಚ್ಚರ.. ಎಚ್ಚರ!
ಅಚ್ಚರಿಯಾದ್ರೂ ಕೂಡ ಇದು ನಿಜ. ನೀವು ಕಲ್ಲಂಗಡಿ ಹಣ್ಣಿನ ಕಲರ್ ಕಂಡು ಮರುಳಾಗುವ ಮುಂಚೆ ಸ್ವಲ್ಪ ಎಚ್ಚರವಿರಲಿ.ಕಾರಣ, ಕಲ್ಲಂಗಡಿಗೆ ಕೃತಕ ಬಣ್ಣಗಳನ್ನು ಹಾಗೂ ರಾಸಾಯನಿಕ ವಸ್ತುಗಳನ್ನು ಬಳಸಿ ಅವುಗಳನ್ನು ಆಕರ್ಷಣೀಯವಾಗಿ ಕಾಣುವಂತೆ ಮಾಡಲಾಗುತ್ತಿದೆ. ಇಂತಹ ಕಲ್ಲಂಗಡಿ ಹಣ್ಣು ಸೇವಿಸುವುದರಿಂದ ನಿಮ್ಮ ಆರೋಗ್ಯದ ಮೇಲೆ ಅನೇಕ ವ್ಯತಿರಿಕ್ತ ಪರಿಣಾಮ ಬೀರಲಿವೆ.
ಇದನ್ನೂ ಓದಿ:ಬೆಂಗಳೂರಲ್ಲಿ ಸೆಂಚುರಿ ಬಾರಿಸಿದ ಖತರ್ನಾಕ್ ಬೈಕ್ ಕಳ್ಳ.. ಹೇಗಿತ್ತು ಗೊತ್ತಾ ಈ ಖದೀಮನ ಕೈಚಳಕ?
ಸಮಸ್ಯೆ 1: ಫುಡ್ ಪಾಯ್ಸನಿಂಗ್: ಈ ರೀತಿಯ ಕಲಬೆರಕೆ ಕಲ್ಲಂಗಡಿ ಹಣ್ಣನ್ನು ತಿನ್ನುವುದರಿಂದ ಫುಡ್ ಪಾಯ್ಸನಿಂಗ್ನಂತಹ ಸಮಸ್ಯೆಗಳು ಉಂಟಾಗಿ ನೀವು ಆಸ್ಪತ್ರೆಯನ್ನು ಸೇರಬೇಕಾಗುತ್ತದೆ. ಇದರಿಂದ ವಾಂತಿ ಭೇದಿಯಂತಯ ಸಮಸ್ಯೆಗಳು ಶುರುವಾಗಬಹುದು.
ಸಮಸ್ಯೆ 2: ಜೀರ್ಣಕ್ರಿಯೆ ಮೇಲೆ ಪರಿಣಾಮ: ಈ ರೀತಿಯ ರಾಸಾಯನಿಕ ಪದಾರ್ಥಗಳನ್ನು ಸೇರಿಸಿರುವು ಕಲ್ಲಂಗಡಿಯನ್ನು ಸೇವಿಸುವುದರಿಂದ ನಿಮ್ಮ ಜೀರ್ಣಕ್ರಿಯೆಯ ಮೇಲೆ ತುಂಬಾ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಜೀರ್ಣಕ್ರಿಯೆ ವ್ಯವಸ್ಥೆಯ ಮೇಲೆಯೇ ಇದು ತೀವ್ರ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಇಂತಹ ಕಲ್ಲಂಗಡಿ ಹಣ್ಣಿನಿಂದ ದೂರವಿರಿ.
ಇದನ್ನೂ ಓದಿ:ನಿಮ್ಮ ಮಕ್ಕಳು ಸಣ್ಣ ವಯಸ್ಸಿನಲ್ಲೇ ದಪ್ಪ ಆಗಿದ್ದಾರೆಯೇ? ಪೋಷಕರು ಮಾಡಬೇಕಾದ ಕೆಲಸ ಏನು?
ಸಮಸ್ಯೆ 3: ಹಸಿವು ಉಂಟಾಗಲ್ಲ: ಇಂತಹ ಕಲ್ಲಂಗಡಿ ಹಣ್ಣನ್ನು ಸೇವಿಸುವುದರಿಂದ ಸರಿಯಾದ ಸಮಯಕ್ಕೆ ಹಸಿವು ಆಗುವುದಿಲ್ಲ. ಹಸಿವಿನ ಕೊರತೆ ನಮ್ಮಲ್ಲಿ ಕಾಡುತ್ತದೆ. ಇದರಿಂದ ಸರಿಯಾದ ಸಮಯಕ್ಕೆ ಸರಿಯಾಗಿ ಊಟ ಮಾಡಲು ಆಗದಂತೆ ಆಗುತ್ತೆ
ಸಮಸ್ಯೆ 4: ಸುಸ್ತು ಮತ್ತು ಬಾಯಾರಿಕೆ: ನಕಲಿ ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಸುಸ್ತು ಬಾಯಾರಿಕೆಯಂತಹ ಲಕ್ಷಣಗಳು ದೇಹದಲ್ಲಿ ಕಂಡು ಬರಲು ಶುರುವಾಗುತ್ತವೆ. ನಾವು ದಾಹ ನೀಗಿಸಲೆಂದೆ ಕಲ್ಲಂಗಡಿ ಹಣ್ಣನ್ನು ಹೆಚ್ಚು ಸೇವಿಸುವುದು. ಆದ್ರೆ ಇದು ಅದರ ವಿರುದ್ಧವಾಗಿ ವರ್ತಿಸುತ್ತದೆ
ಸಮಸ್ಯೆ 5: ಕಿಡ್ನಿ ಮೇಲೂ ಪರಿಣಾಮ:ಇಂತಹ ಕಲ್ಲಂಗಡಿ ಹಣ್ಣು ಸೇವನೆಯಿಂದ ಕಿಡ್ನಿ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಆಹಾರ ತಜ್ಞರು ಹೇಳುತ್ತಾರೆ. ತುಂಬಾ ಅಪಾಯಕಾರಿ ರಾಸಾಯನಿಕ ಪದಾರ್ಥಗಳು ಹಾಗೂ ಕೃತಕ ಬಣ್ಣವನ್ನು ಬಳಸಲಾಗಿರುತ್ತದೆ. ಹೀಗಾಗಿ ಇದು ಕಿಡ್ನಿ ಆರೋಗ್ಯಕ್ಕೆ ಅಪಾಯಕಾರಿ
ಪತ್ತೆ ಹಚ್ಚುವುದು ಹೇಗೆ?
ಒಂದು ಸಣ್ಣ ಪೀಸ್ ಕಲ್ಲಂಗಡಿ ಹಣ್ಣನ್ನು ನೀರಿನಲ್ಲಿ ಬೆರೆಸಿ
ನೀರು ಗುಲಾಬಿ ಬಣ್ಣಕ್ಕೆ ತಿರುಗಿಯಾ ಎಂಬುದು ಗಮನಿಸಿ
ನೀರು ಗುಲಾಬಿ ಬಣ್ಣಕ್ಕೆ ತಿರುಗಿದ್ರೆ ಕಲಬೆರಕೆ ಆಗಿದ್ದು ಖಚಿತ
ಗುಲಾಬಿ ಬಣ್ಣಕ್ಕೆ ತಿರುಗಿದ್ರೆ ಹಣ್ಣಿಗೆ ಕೃತಕ ಬಣ್ಣ ಸೇರಿಸಲಾಗಿರುತ್ತೆ
ಟಿಶ್ಯೂ ಪೇಪರ್ನಿಂದ ಹಣ್ಣನ್ನು ಒತ್ತಿ ನೋಡಬೇಕು
ಪೇಪರ್ಗೆ ಕೆಂಪು ಬಣ್ಣ ಹತ್ತಿಕೊಂಡರೆ ಕಲಬೆರಕೆ ಅಂತ ಖಚಿತ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ